ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.21 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು.21 ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

2.45: ಗೋವಾದಲ್ಲಿನ ಮುಂಗಾರು ಅಧಿವೇಶನ ಬಹುತೇಕ ಕಾಗದ ರಹಿತ ಅಸೆಂಬ್ಲಿ ಎನಿಸಿಕೊಂಡಿದೆ. ಸೋಮವಾರದ ಕಲಾಪದಲ್ಲಿ 2,500 ಪ್ರಶ್ನೆಗಳ ಪೈಕಿ ಶೇ 95 ರಷ್ಟು ಪೇಪರ್ ಲೆಸ್ ಆಗಿರಲಿದೆ ಎಂದು ಸ್ಪೀಕರ್ ರಾಜೇಂದ್ರ ಅರೆಲೆಕರ್ ಹೇಳಿದ್ದಾರೆ.
2.30: ಗೋವಾ ಅಸೆಂಬ್ಲಿಯಲ್ಲಿ ಇ ಟ್ಯಾಬ್ಲೆಟ್ ಹಾಗೂ ಲ್ಯಾಪ್ ಟ್ಯಾಪ್ ಸದ್ಬಳಕೆಯಾಗುತ್ತಿದ್ದು, ಸಂಪೂರ್ಣ ಕಾಗದ ರಹಿತ ಕಲಾಪ ಸಾಧಿಸುವತ್ತ ದಾಪುಗಾಲಿಟ್ಟಿದೆ.

Goa

10.45 : ಎಎಪಿ ಶಾಸಕರ ಜತೆ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ನಿವಾಸಕ್ಕೆ ತೆರಳಿದ್ದಾರೆ.
10.40: ಶತಾಯ ಗತಾಯ ದೆಹಲಿ ಅಸೆಂಬ್ಲಿ ವಿಸರ್ಜನೆ ಮಾಡಲು ಎಎಪಿ ಪಣ ತೊಟ್ಟಿದ್ದು, ರಾಜ್ಯಪಾಲ ನಜೀಬ್ ಜಂಗ್ ಅವರನ್ನು ಭೇಟಿ ಮಾಡುವ ಅವಕಾಶ ಗಿಟ್ಟಿಸಿಕೊಂಡಿದೆ.
Updates India, International News in Brief July 21

10.30: ಮಹಾರಾಷ್ಟ್ರದ ಕೈಗಾರಿಕಾ ಸಚಿವ ನಾರಾಯಣ ರಾಣೆ ಅವರು ಸೋಮವಾರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.,
10.15: ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ,
10.00: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಎಂಎಚ್ 17 ವಿಮಾನ ದುರಂತದ ಸಂಪೂರ್ಣ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.
9.30: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಾಬಾ ಅಣು ಸಂಶೋಧನಾ ಕೇಂದ್ರ(BARC) ಗೆ ಭೇಟಿ ನೀಡಲಿದ್ದಾರೆ.
9.15 : ದೆಹಲಿಯಲ್ಲಿ ಮಣಿಪುರ ಮೂಲದ ಯುವಕನ ಹತ್ಯೆಯಾಗಿದ್ದು, ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು, ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
English summary
Top news in brief for the day: Arvind Kejriwal reaches Lt Governor Najeeb Jung's residence with AAP MLAs to meet him seeking dissolution of Delhi Assembly and many more news from the around the globe on July 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X