ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.25: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಆ.25: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
14.25: ಕಾರು ಪಾರ್ಕಿಂಗ್ ವಿಷಯದಲ್ಲಿ ಜಗಳವಾಡಿಕೊಂಡ ಯೋಗರಾಜ್ ಸಿಂಗ್(ಕ್ರಿಕೆಟರ್ ಯುವರಾಜ್ ಸಿಂಗ್ ಅಪ್ಪ) ಅವರನ್ನು ಪಂಚಕುಲದ ಪೊಲೀಸರು ವಶಕ್ಕೆ ತೆಗೆದುಕೊಂಡು ಐಪಿಸಿ ಸೆಕ್ಷನ್ 323ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ

12.40:
ಕರ್ನಾಟಕದ ಮೂರು ಕ್ಷೇತ್ರಗಳ ಫಲಿತಾಂಶ ಹೊರ ಬಂದಿದೆ. ಬಳ್ಳಾರಿ ಹಾಗೂ ಚಿಕ್ಕೋಡಿ ಕಾಂಗ್ರೆಸ್ ವಶಪಡಿಸಿಕೊಂಡಿದೆ. ಶಿಕಾರಿಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
11.45: ಪಂಜಾಬಿನ ಎರಡು ಕ್ಷೇತ್ರಗಳ ಫಲಿತಾಂಶ ಹೊರಬಂದಿದೆ. ಪಟಿಯಾಲಾ ಕಾಂಗ್ರೆಸ್ ವಶವಾಗಿದೆ. ತಲ್ ವಾಂಡಿ ಸಾಬೋ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಗೆದ್ದಿದ್ದಾರೆ.

Yuvraj Singh

11.15: ಬಿಹಾರದ 10 ಕ್ಷೇತ್ರಗಳಲ್ಲಿ ಜೆಡಿಯು ಆರ್ ಜೆಡಿ ಪಕ್ಷ 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
* ಮಧ್ಯಪ್ರದೇಶ: 3 ಕ್ಷೇತ್ರಗಳಲ್ಲಿ ಬಿಜೆಪಿ: 2 ಹಾಗೂ ಕಾಂಗ್ರೆಸ್: 1 ಕ್ಷೇತ್ರದಲ್ಲಿ ಮುಂದಿದೆ.
* ಕರ್ನಾಟಕ: 3 ಕ್ಷೇತ್ರಗಳಲ್ಲಿ ಬಳ್ಳಾರಿ ಕಾಂಗ್ರೆಸ್ ವಶವಾಗಿದೆ. ಬಿಜೆಪಿ ಶಿಕಾರಿಪುರದಲ್ಲಿ ಮುಂದಿದೆ, ಚಿಕ್ಕೋಡಿಯಲ್ಲೂ ಕಾಂಗ್ರೆಸ್ ಗೆಲುವು ನಿಚ್ಚಳವಾಗಿದೆ.
* ಪಂಜಾಬ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಪಟಿಯಾಲಾ ವಶಪಡಿಸಿಕೊಂಡಿದೆ. ಶಿರೋಮಣಿ ಅಕಾಲಿ ದಳ 1 ಕ್ಷೇತ್ರದಲ್ಲಿ ಮುಂದಿದೆ. [ಫಲಿತಾಂಶ ವರದಿ ಇಲ್ಲಿ ಓದಿ]

10.10: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಚಿತ್ರಕೂಟದ ದೇಗುಲವೊಂದರಲ್ಲಿ ಕಾಲ್ತುಳಿತ ಉಂಟಾಗಿ ಸುಮಾರು 10 ಜನ ಭಕ್ತಾದಿಗಳು ಸಾವನ್ನಪ್ಪಿರುವ ಸುದ್ದಿ ಬಂದಿದೆ.
10.00: ಚಿತ್ರಕೂಟದಲ್ಲಿ ಸೋಮವತಿ ಅಮಾವಾಸ್ಯೆ ನಿಮಿತ್ತ ಭಕ್ತಾದಿಗಳು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
9.45: ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರು ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಿಸಲಾಗಿದೆ.

Updates India, International News in Brief Aug 25

9.40: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಹೃದಯ ಸಂಬಂಧಿ ಸರ್ಜರಿಗೆ ಒಳಪಡಲು ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.
9.35: ಬಿಹಾರ 10 ಅಸೆಂಬ್ಲಿ ಕ್ಷೇತ್ರಗಳ ಚುನಾವಣೆ ಫಲಿತಾಂಶ ಸೋಮವಾರ ಹೊರ ಬೀಳಲಿದೆ.ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 5 ಕ್ಷೇತ್ರದಲ್ಲಿ ಹಾಗೂ ಲಾಲೂ ನಿತೀಶ್ ಬಣ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

9.30: ಕರ್ನಾಟಕದ ರಾಯಚೂರಿನಲ್ಲಿ ಲವರ್ಸ್ ತೆಲುಗು ಸಿನಿಮಾ ಟಿಕೆಟ್ ಪಡೆಯಲು ಕ್ಯೂನಲ್ಲಿ ನುಗ್ಗಿದ್ದ ಯುವಕನೊಬ್ಬ ತಳ್ಳಾಟದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಸುದ್ದಿ ಬಂದಿದೆ.
9.20: ಕರ್ನಾಟಕದ ಮೂರು ಕ್ಷೇತ್ರಗಳ ಚುನಾವಣೆ ಫಲಿತಾಂಶ ಸೋಮವಾರ ಹೊರಬರಲಿದೆ.[ಸಂಪೂರ್ಣ ವಿವರ ಇಲ್ಲಿ ಪಡೆಯಿರಿ]
9.15: ನಾಲ್ಕು ರಾಜ್ಯಗಳ ಒಟ್ಟು 18 ಅಸೆಂಬ್ಲಿ ಕ್ಷೇತ್ರಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.

English summary
Top news in brief for the day: At least 10 pilgrims were killed and many were injured following a stampede at a temple in Chitrakoot, Satna district and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X