ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.21: ದೇಶ, ವಿದೇಶಗಳ ಹೆಡ್ ಲೈನ್ಸ್ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಆ.21: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

3.35: ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಕೆಲ ನಗರಗಳಲ್ಲಿ ಗುರುವಾರ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 1.40ರ ಸಮಯದಲ್ಲಿ ಎರಡು ರಾಜ್ಯ ಕೆಲ ನಗರಗಳಲ್ಲಿ ಭೂಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದ್ದು, ಡಾಲ್ ಹೌಸಿ, ಪಾಲಂಪುರ್, ಧರ್ಮಶಾಲಾ, ಚಾಂಬಾ ನಗರಗಳಲ್ಲಿ ಭೂಕಂಪಿಸಿದೆ.
3.00: ಅಮೆರಿಕದಲ್ಲಿ ಸಿಖ್ ಬ್ಯಾಸ್ಕೆಟ್ ಬಾಲ್ ಆಟಗಾರನಿಗೆ ಅಪಮಾನ ಮಾಡಲಾಗಿದೆ. ತಲೆಯ ಪಗಡಿ ತೆಗೆಯುವಂತೆ ಆಗ್ರಹಿಸಲಾಗಿದೆ.

1.40: ಬಿಹಾರದಲ್ಲಿ ಮಧ್ಯಾಹ್ನ 1 ಗಂಟೆಗೆ 27.89% ರಷ್ಟು ಮತದಾನ ನಡೆದಿದೆ.

Updates India, International News in Brief Aug 21

12.30: ರಾಂಚಿಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ, ಜಾರ್ಖಂಡ್ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಿರುವುದು ಕಂಡು ಸಂತಸವಾಗುತ್ತಿದೆ ಎಂದಿದ್ದಾರೆ.

11.40: ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿರುವ ಬಿಹಾರದ 10 ವಿಧಾನಸಭೆ ಉಪಚುನಾವಣೆಗೆ ಇಂದು ಶಾಂತಿಯುತವಾಗಿ ಮತದಾನ ನಡೆದಿದೆ. ಆದರೆ, ಬೆಳಗ್ಗೆ 10 ಗಂಟೆ ವೇಳೆಗೆ 10 ಕ್ಷೇತ್ರಗಳಲ್ಲಿ ಶೇ 10ರಷ್ಟು ಮಾತ್ರ ಮತದಾನ ಆಗಿದೆ.
11.30: ಬಿಹಾರದ ಹಾಜಿಪುರ್, ಛಾಪ್ರಾ, ನರ್ಕಟಿಯಾಗಂಜ್, ಜಲೆ, ರಾಜ್‍ನಗರ್, ಮೊಹಾನಿಯಾ, ಬರ್ಬತಾ, ಮೋಹಿನುದ್ದೀನಗರ್, ಬಂಕಾ ಮತ್ತು ಬಾಗಲ್ಪುರ್ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಆ. 25ರಂದು ಮತಗಳ ಎಣಿಕೆ ನಡೆಯಲಿದೆ. [ಉಪ ಕದನ : ಬಿರುಸಿನಿಂದ ಸಾಗಿದ ಮತದಾನ]

11.20: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಗಂಗಾ ಶುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಮಲಿನ ಗೊಂಡಿರುವ ಪವಿತ್ರ ನದಿಯನ್ನು ಶುದ್ಧೀಕರಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ ಎಂದು ಕೋರ್ಟಿಗೆ ತಿಳಿಸಲಾಗಿದೆ.

Updates India, International News in Brief Aug 21

11.15: ಗಂಗಾ ನದಿಯನ್ನು ಶುದ್ಧೀಕರಿಸುವ ಕುರಿತಾದ ಸರಕಾರದ ಯೋಜನೆಯನ್ನು ಆರು ತಿಂಗಳೊಳಗಾಗಿ ಘೋಷಿಸಲಾಗುವುದು ಗಂಗಾ ಶುದ್ಧೀಕರಣ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

11.10: ಆತಿಥೇಯ ಭಾರತ ತಂಡವನ್ನು 2-0 ಅಂತರದಿಂದ ಮಣಿಸಿದ ಪಾಕಿಸ್ತಾನ ತಂಡ ಎರಡು ಪಂದ್ಯಗಳ ಸೌಹಾರ್ದ ದ್ವಿಪಕ್ಷೀಯ ಫುಟ್ಬಾಲ್ ಸರಣಿಯನ್ನು 1-1 ರಿಂದ ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.

11.00: ಅಮೆರಿಕನ್ ಓಪನ್ ಆರಂಭವಾಗಲು ದಿನಗಣನೆ ಆರಂಭವಾಗಿದ್ದು, ಅಗ್ರ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ನಂ.1 ಶ್ರೇಯಾಂಕ ಹಾಗೂ ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ನಂ.2ನೆ ಶ್ರೇಯಾಂಕವನ್ನು ಪಡೆದಿದ್ದಾರೆ.
10.55: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು ಗುರುವಾರ ಮತದಾನ ಶಾಂತಿಯುತವಾಗಿ ಸಾಗಿದೆ.
10.40: ಕಳೆದ ವಾರ 2 ರು ಇಳಿಕೆಯಾಗಿದ್ದ ಪೆಟ್ರೋಲ್ ಈ ತಿಂಗಳ ಅಂತ್ಯಕ್ಕೆ 80 ಪೈಸೆಯಷ್ಟು ಇಳಿಕೆಯಾಗಲಿದೆ.

English summary
Top news in brief for the day: Bihar records 11.91% voting in assembly bypoll in 10 constituencies till 10 am, Patiala witnesses 10% polling. and many more news from around the globe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X