ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.18: ದೇಶ, ವಿದೇಶಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಆ.18: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.50: 1974ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಭಾರತ ಸುಮಾರು 100ಕ್ಕೂ ಅಧಿಕ ಅಣ್ವಸ್ತ್ರಗಳನ್ನು ಹೊಂದಿರುವ ಮಾಹಿತಿ ಇದೆ. ಆದರೆ, ಆಸ್ಟ್ರೇಲಿಯಾ ನೀಡುವ ಯುರೇನಿಯಂ ಅನ್ನು ವಿದ್ಯುತ್ ಉತ್ಪಾದನೆಗೆ ಭಾರತ ಬಳಸಲಿದೆ.
10.40: ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡಲು ಆಸ್ಟ್ರೇಲಿಯಾ ಸಜ್ಜಾಗಿರುವ ಸುದ್ದಿ ಬಂದಿದೆ. ಅಣ್ವಸ್ತ್ರ ಬಳಕೆ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಹೀಗಾಗಿ ಈ ನಿರ್ಣಯ ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Updates India, International News in Brief Aug 18

10.30: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದು, ಹಿಂದುತ್ವ ನಮ್ಮ ರಾಷ್ಟ್ರದ ಹೆಗ್ಗುರುತು ಎಂದಿದ್ದಾರೆ.
10.20: ಭಾರತಕ್ಕೆ ಬರಬೇಕಿದ್ದ ನೈಜೀರಿಯನ್ ಪ್ರಜೆ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದು, ಎಬೋಲಾ ಪೀಡಿತನಾಗಿದ್ದ ಎಂದು ತಿಳಿದು ಬಂದಿದೆ.
10.00: ಕಳೆದ 24 ಗಂಟೆಗಳಲ್ಲಿ ಮೂರನೇ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ 20 ಕ್ಕೂ ಅಧಿಕ ಬಿಎಸ್ ಎಫ್ ತಾಣಗಳ ಮೇಲೆ ಗುಂಡಿನ ಮಳೆಗೆರೆದಿದೆ.
English summary
Top news in brief for the day: Australia and India are believed to have struck a deal on uranium exports. The decision was controversial because India has not signed the Nuclear Non-Proliferation Treaty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X