ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.25: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.25: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

3.35: ಏಷ್ಯನ್ ಗೇಮ್ಸ್ : ಲೀಗ್ ಹಂತದ ಹಾಕಿ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ 2-1 ಅಂತರದಿಂದ ಸೋಲು ಕಂಡಿದೆ.
3.20: ಬಿಜೆಪಿ ಹಾಗೂ ಶಿವಸೇನಾ ನಡುವಿನ ಚುನಾವಣಾ ಮೈತ್ರಿ ಮುರಿದು ಬಿದ್ದಿದೆ.
2.45: ಪಶ್ಚಿಮ ಬಂಗಾಳದ ಬರ್ನಾಪುರದ ಉಕ್ಕಿನ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು 30 ಜನ ಗಾಯಗೊಂಡಿದ್ದಾರೆ.
2.30: ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಅಭಿಯಾನಾ ಆರಂಭಿಸಿದ್ದಾರೆ. [ವಿವರ ಇಲ್ಲಿ ಓದಿ]

Hockey: Pakistan beat India

10.30: ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮುರ್ನಾಲ್ಕು ದಿನವಿರುವಾಗಲೇ ಬಿಜೆಪಿ ಮತ್ತು ಶಿವಸೇನಾ ಮತ್ತೊಮ್ಮೆ ಕಿತ್ತಾಟ ಆರಂಭವಾಗಿದೆ.
10.15: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂಬೈ ಭೇಟಿಯನ್ನು ರದ್ದುಗೊಳಿಸಿದ್ದಾರೆ.
10.10: 7 ಸೀಟುಗಳನ್ನು ನೀಡಿದ ಬಿಜೆಪಿ-ಶಿವಸೇನಾ ವಿರುದ್ಧ ಮಿಕ್ಕ ಮಿತ್ರಪಕ್ಷಗಳು ಕಿಡಿಕಾರಿದ್ದು, ಮೈತ್ರಿ ಕಳೆದುಕೊಳ್ಳುವ ಬೆದರಿಕೆ ಒಡ್ಡಿವೆ.

Updates India, International News in Brief Sept 25

9.45: ಭಾರತ, ಚೀನಾ ದೇಶ ಲಡಾಕ್ ನ ಚುಶೂಲ್ ನಲ್ಲಿಂದು ಫ್ಲಾಗ್ ಮೀಟಿಂಗ್ ನಡೆಸಲಿವೆ.
9.30: ಏಷ್ಯನ್ ಗೇಮ್ಸ್ 2014: ಮಹಿಳಾ ಡಬಲ್ ಟಾಪ್ ಶೂಟಿಂಗ್ ಇವೆಂಟ್ ನಲ್ಲಿ ಭಾರತೀಯ ಸ್ಪರ್ಧಿಗಳು ಕಂಚಿನ ಪದಕ ಗೆದ್ದಿದ್ದಾರೆ.
9.15: ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಸೆ.25ರಿಂದ ಆರಂಭಗೊಳ್ಳಲಿದೆ.
9.00: ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ದೆಹಲಿಯ ಆರ್ ಕೆ ಪುರಂನ ಕೇಂದ್ರಿಯ ವಿದ್ಯಾಲಯಕ್ಕೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
English summary
Top news in brief for the day: BJP-Shiv Sena alliance heading for split, say BJP sources amid row over seat-sharing for Maharashtra assembly polls and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X