ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.10: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.10: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

13.15: ಹೆಸರಾಂತ, ಹಿಂದಿ, ಬೆಂಗಾಳಿ ನಟಿ, ನಿರ್ದೇಶಕಿ ಅರ್ಪಣಾ ಸೇನ್ ಅವರಿಗೆ ಡೆಂಗಿ ಜ್ವರ ಕಾಣಿಸಿಕೊಂಡಿದೆ. ಅವರಿಗೆ ಒಂದುವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಫೋರ್ಟಿಸ್ ಆಸ್ಪತ್ರೆಯ ಡಾ. ರಾಜೀವ್ ಸೀಲ್ ಹೇಳಿದ್ದಾರೆ.

11.00 : ಕಳೆದ ವರ್ಷದ ಜನವರಿಯಿಂದ ತಿಂಗಳಿಗೆ 50 ಪೈಸೆಯಂತೆ ಏರುತ್ತಾ ಬಂದಿರುವ ಡೀಸೆಲ್ ಬೆಲೆ ಸೆ.15ರಂದು 50 ರಿಂದ 75 ಪೈಸೆಯಷ್ಟು ಇಳಿಕೆಯಾಗಲಿದೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಬೆಲೆ ಇಳಿಕೆ ಮಾಡಲಾಗುತ್ತಿದೆ.

Aparna Sen

10.45: ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಮೈಸೂರಿನ ಸಿಎಫ್ ಟಿಆರ್ ಐ ನಿಂದ 5 ಟನ್ ಆಹಾರವನ್ನು ಕಳಿಸಲಾಗಿದೆ.

10.30: ಮೂವರು ಸಶಸ್ತ್ರ ಉಗ್ರರನ್ನು ಕೇರಾನ್ ಸೆಕ್ಟರ್ ನಲ್ಲಿ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.
10.15: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರದಿಂದ ಅಫ್ಘಾನಿಸ್ತಾನ ಪ್ರವಾಸ ಕೈಗೊಂಡಿದ್ದಾರೆ.

Updates India, International News in Brief Sept 10

10.00: ದೆಹಲಿಯಲ್ಲಿ ಸರ್ಕಾರ ರಚನೆ ಸರ್ಕಸ್ ಮುಂದುವರೆದಿದ್ದು, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹಾಗೂ ಬೆಂಬಲಿಗರು ಬುಧವಾರ ರಾಜ್ಯಪಾಲ ನಜೀಬ್ ಜಂಗ್ ಅವರನ್ನು ಭೇಟಿ ಮಾಡಲಿದ್ದಾರೆ.
English summary
Top news in brief for the day: In a breakthrough in the inflation-inflicted Indian economy, the price of Diesel prices has come down in 7 years. The global crude price has dropped below $100 a barrel for the first time in more than a year and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X