ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.8: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.8: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

15.30: ಬಹುಕೋಟಿ ಸಹಾರಾ ಸಾಲ ಪ್ರಕರಣದಲ್ಲಿ ಸಹಾರಾ ಮುಖ್ಯಸ್ಥ ಸುಬ್ರತೋ ರಾಯ್ ಅವರು ತಮ್ಮ ಒಡೆತನದಲ್ಲಿರುವ ವಿದೇಶಿ ಐಷಾರಾಮಿ ಹೋಟೆಲ್ ಗಳನ್ನು ಮಾರಾಟ ಮಾಡಲು 15 ದಿನಗಳ ಗಡುವು ನೀಡಿದೆ.

10.45: ಬಹುಕೋಟಿ ಕಲ್ಲಿದ್ದಲು ಹಗರಣದ ಆರೋಪಿಯೊಬ್ಬರ ಜೊತೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಸಭೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿನ್ಹಾ ಅವರಿಗೆ ಸುಪ್ರೀಂಕೋರ್ಟ್ ಕೇಳಿದೆ.

Updates India, International News in Brief Sept 08

10.30: ಜಾರ್ಖಂಡ್ ನ ಲಾಠೇಹಾರ್ ನಲ್ಲಿ ಗೂಡ್ಸ್ ಟ್ರೈನ್ ಗೆ ಬಾಂಬ್ ಇಟ್ಟು ಉರುಳಿಸಿದ ನಕ್ಸಲರು.
10.20: ಸ್ವಾಮಿ ನಿತ್ಯಾನಂದನಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿದೆ.
Ranjit Sinha

10.15: ಪ್ರತಿಕೂಲ ವಾತಾವರಣದ ನಡುವೆಯೂ ವೈಷ್ಣೋದೇವಿ ಯಾತ್ರೆಗೆ ಪುನರ್ ಚಾಲನೆ ನೀಡಲಾಗಿದೆ.
10.00: ಜಮ್ಮು ಮತ್ತು ಕಾಶ್ಮೀರದ್ ಪ್ರಕೃತಿ ವಿಕೋಪಕ್ಕೆ ಪರಿಹಾರ ರೂಪವಾಗಿ ಕೇಂದ್ರ ಸರ್ಕಾರದಿಂದ 1000 ಕೋಟಿ ರು ಅನುದಾನ ನೀಡಲಾಗಿದೆ.
9.45: ನಿಥಾರಿ ಹತ್ಯಾಕಾಂಡದ ಅಪರಾಧಿ ಸುರೀಂದರ್ ಕೋಲಿ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ಒಂದು ವಾರ ತಡೆಯಾಜ್ಞೆ ನೀಡಿದೆ.
9.30: ಜಮ್ಮು ಮತ್ತು ಕಾಶ್ಮೀರದ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 150 ದಾಟಿದೆ.
English summary
Top news in brief for the day: SC asks CBI director Ranjit Sinha to respond to allegations about his meetings with coal scam accused and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X