ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.3: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.3: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.55: ವಿಜಯವಾಡ ಹಾಗೂ ಗುಂಟೂರು ನಡುವಿನ ಮಂಗಳಗಿರಿ ಪ್ರದೇಶದಲ್ಲಿ ಹೊಸ ರಾಜಧಾನಿ ಸ್ಥಾಪನೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
11.50: ಆಂಧ್ರಪ್ರದೇಶಕ್ಕೆ ನೂತನ ರಾಜಧಾನಿಯಾಗಿ ವಿಜಯವಾಡ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಇನ್ನೂ ಅಧಿಕೃತ ಘೋಷಣೆ ಚಂದ್ರಬಾಬು ನಾಯ್ಡು ಸರ್ಕಾರದಿಂದ ಹೊರಬಂದಿಲ್ಲ.
11.45: ಆಂಧ್ರಪ್ರದೇಶದ ರಾಜಧಾನಿಯಾಗಲು ದೋಣಕೊಂಡ ನಗರವನ್ನು ಶಿವರಾಮಕೃಷ್ಣನ್ ಸಮಿಸಿ ಶಿಫಾರಸು ಮಾಡಿತ್ತು. ಅದರೆ, ನಾಯ್ಡು ಸರ್ಕಾರ ಒಪ್ಪಿರಲಿಲ್ಲ.

Updates India, International News in Brief Sept 03

11.30: ವಿವಾದದ ನಡುವೆಯೂ ಉತ್ತರಪ್ರದೇಶದಲ್ಲಿ ಶಿಕ್ಷಕರರ ದಿನಾಚರಣೆಯಂದು ಪ್ರಧಾನಿ ಮೋದಿ ಅವರ ಭಾಷಣವನ್ನು ರಾಜ್ಯದ ಶಾಲೆಗಳಲ್ಲಿ ಪ್ರಸಾರ ಮಾಡುವಂತೆ ಸಿಎಂ ಅಖಿಲೇಶ್ ಯಾದವ್ ಸೂಚಿಸಿದ್ದಾರೆ.
11.00: ಬಿಜೆಪಿ ಶಾಸಕ ಜಿತೇಂದರ್ ನ ಮೇಲೆ ಶೂಟೌಟ್ ಪ್ರಕರಣದ ನಂತರ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
10.30: ಐದು ದಿನಗಳ ಯಶಸ್ವಿ ಜಪಾನ್ ಪ್ರವಾಸ ಮುಗಿಸಿಕೊಂಡು ಪ್ರಧಾನಿ ಮೋದಿ ಅವರು ಭಾರತಕ್ಕೆ ಬುಧವಾರ ಸಂಜೆ ವೇಳೆಗೆ ಆಗಮಿಸಲಿದ್ದಾರೆ.
English summary
Top news in brief for the day: The Andhra Pradesh Cabinet has given its nod for establishing the state capital between Vijayawada and Guntur.and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X