ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.9 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು.9: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.40: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿವಾದ ಪ್ರಕರಣದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿರುವ ದೆಹಲಿ ಕೋರ್ಟ್ ಆಗಸ್ಟ್ 7ಕ್ಕೆ ಹಾಜರಾಗುವಂತೆ ಸೂಚಿಸಿದೆ.
5.30: ನ್ಯಾಶನಲ್ ಹೆರಾಲ್ಡ್ ಪತ್ರಿಕೆ ನಡೆಸುತ್ತಿದ್ದ ಅಸೋಸಿಯೇಟೇಡ್ ಜನರಲ್ ಸಂಸ್ಥೆ ಖರೀದಿಸಲು ಸೋನಿಯಾ ಗಾಂಧಿ ಒಡೆತನದ ಯಂಗ್ ಇಂಡಿಯನ್ ಲಿಮಿಟೆಡ್ ಗೆ ಕಾಂಗ್ರೆಸ್ಸಿನಿಂದ ಸಾಲ ನೀಡಲಾಗಿತ್ತು. ತೆರಿಗೆ ವಿನಾಯತಿ ಪಡೆಯುವ ಪಕ್ಷ ಕಾನೂನು ಬಾಹಿರವಾಗಿ ಸಾಲ ನೀಡಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕೇಸು ದಾಖಲಿಸಿದ್ದರು.

International News in Brief on July 9

3.30: ಫೀಫಾ ವಿಶ್ವಕಪ್ ಅರ್ಜೆಂಟಿನಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ ನಾಯಕ ವಾನ್ ಪರ್ಸಿ ಆಡುವುದು ಅನುಮಾನ ಎನ್ನಲಾಗಿದೆ. ವಾನ್ ಪರ್ಸಿ ಕರಳು ಬೇನೆಯಿಂದ ಬಳಲುತ್ತಿದ್ದಾರೆ.
1.05: ಉತ್ತರಪ್ರದೇಶದ ಮಾಜಿ ಶಾಸಕ ಸೋನು ಸಿಂಗ್ ಅವರ ಸೋದರ ಮೋನು ಹಾಗೂ ನಾಲ್ವರ ಮೇಲೆ ಫೈಜಾಬಾದ್ ಕೋರ್ಟಿನಲ್ಲಿ ಹಲ್ಲೆ ನಡೆದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಪೊಲೀಸರ ಗುಂಡೇಟಿಗೆ ದಾಳಿಕೋರ ಕೂಡಾ ಹತನಾಗಿರುವ ವರದಿ ಬಂದಿದೆ.
12.15: ರಾಜಧಾನಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೂರು ಅನುಮಾನಾಸ್ಪದ ಬ್ಯಾಗ್ ಗಳು ಪತ್ತೆಯಾಗಿವೆ. ಮಹಿಳೆಯೊಬ್ಬರಿಗೆ ಸೇರಿರುವ ಬ್ಯಾಗ್ ಗಳಲ್ಲಿ ಬಾಂಬ್ ಗಳಿರುವ ಶಂಕೆ ವ್ಯಕ್ತವಾಗಿತ್ತು ಅದರೆ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆಆಗಮಿಸಿ ಪರಿಶೀಲನೆ ನಡೆಸಿ, ಆತಂಕ ನಿವಾರಿಸಿದ್ದಾರೆ.

11.00 : ಡಿಎಸ್ಪಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ ಭೈಯಾಗೆ ಕ್ಲೀನ್ ಚಿಟ್ ನೀಡಿದ್ದನ್ನು ಸಿಬಿಐ ನ್ಯಾಯಾಲಯ ಪ್ರಶ್ನಿಸಿದೆ.
10.45: ಉತ್ತರ ಪ್ರದೇಶದಲ್ಲಿ ನಡೆದ ಡಿಎಸ್ಪಿ ಹತ್ಯೆ ಪ್ರಕರಣ ಸೇರಿದಂತೆ 48 ಕ್ರಿಮಿನಲ್ ಕೇಸ್ ಮೇಲೆ ಹೊತ್ತಿದ್ದ ಮಾಜಿ ಬಂದೀಖಾನೆ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಮತ್ತೆ ಅಖಿಲೇಶ್ ಯಾದವ್ ಸಂಪುಟ ಸೇರಿದ್ದಾರೆ. [ಭಯ್ಯಾ ಅಖಿಲೇಶ್ ಸಂಪುಟಕ್ಕೆ ಬ್ಯಾಕ್ ]

Raja Bhaiya

10.30: ಜಪಾನಿನ ಒಕಿನಾವಾ ದ್ವೀಪದಲ್ಲಿ ಪ್ರಬಲ ಚಂಡಮಾರುತ ಬೀಸಿದ್ದು, ಕಂಪನ ಸಂಭವಿಸಿದೆ.
10.15: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಅವರ ಹೆಸರನ್ನು ಇಂದು ಘೋಷಿಸುವ ಸಾಧ್ಯತೆಯಿದೆ.
10.00: ಫೀಫಾ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಬ್ರೆಜಿಲ್ ತಂಡವನ್ನು 1-7 ಗೋಲುಗಳ ಅಂತರದಿಂದ ಜರ್ಮನಿ ತಂಡ ಸೋಲಿಸಿ ಫೈನಲ್ ಪ್ರವೇಶಿಸಿದೆ.

English summary
Top news in brief for the day: CBI court rejects clean chit to Raja Bhaiya in DSP murder case and many more news from the around the globe on July 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X