ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.11 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು.11: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.45: ಗೃಹ ಸಚಿವಾಲಯದಿಂದ ಯಾವುದೇ ಐತಿಹಾಸಿಕ ಕಡತಗಳನ್ನು ನಾಶಪಡಿಸಿಲ್ಲ. ಸರ್ಕಾರ ಸುಮಾರು 11,100 ಕಡತಗಳನ್ನು ನಾಶಪಡಿಸಿದ್ದು ಅದರಲ್ಲಿ ಯಾವುದೇ ಪ್ರಮುಖ ದಾಖಲೆಗಳಿರಲಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
6.40: ಕಡತ ಯಜ್ಞದ ಬಗ್ಗೆ ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ. ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದ ದಾಖಲೆ ನಾಶ ಆರೋಪ ತಳ್ಳಿಹಾಕಿದ ಗೃಹ ಸಚಿವ ರಾಜನಾಥ್ ಸಿಂಗ್.

Follow news updates on July 11

3.45: ದೆಹಲಿಯಲ್ಲಿ ಮಿಜೋರಾಂ ಮೂಲದ ಯುವಕನೊಬ್ಬನನ್ನು ಕೊಂದು ಹಾಕಲಾಗಿದೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

11.05 : ನರೇಂದ್ರ ಮೋದಿ ಸರ್ಕಾರ ಗುರುವಾರ ಮಂಡಿಸಿದ ಬಜೆಟ್ ಜನಸಾಮಾನ್ಯರ ಮೇಲೆ ಪ್ರಭಾವ ಬೀರ ತೊಡಗಿದೆ. ಇಂಧನ ಮೇಲೆ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಅಬಕಾರಿ ಸುಂಕ ತಗ್ಗಿಸಿದ್ದು, ಬ್ರಾಂಡೆಡ್ ಅಥವಾ ಪ್ರೀಮಿಯಂ ಪೆಟ್ರೋಲ್ ಪ್ರತಿ ಲೀಟರ್‌ಗೆ 5 ರು ನಷ್ಟು ಅಗ್ಗವಾಗಲಿದೆ.

10.45: ಬ್ರಾಂಡೆಡ್ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2002ರಲ್ಲಿ ಬ್ರಾಂಡೆಡ್ ಅಥವಾ ಪ್ರೀಮಿಯಂ ಪೆಟ್ರೋಲ್ ಮಾರಾಟ ಆರಂಭವಾಗಿತ್ತು.
10.30: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಮುಂದಾಗಿರುವ ತಮಿಳುನಾಡು ಸಿಎಂ ಜಯಲಲಿತಾರಿಗೆ ತೀವ್ರ ಮುಖಭಂಗವಾಗಿದೆ.

Top news in brief for the day

10.15: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಶಿಕ್ಷೆ ಕಡಿಮೆ ಮಾಡುವ ಅಥವಾ ಕ್ಷಮೆ ನೀಡುವ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಬಗ್ಗೆ ಮೇಲ್ಮನವಿ ಅರ್ಜಿ ತಿರಸ್ಕಾರಗೊಂಡಿದೆ.
10.00 : ಮುಂಬೈನಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
9.45: ದಿನದ ಆರಂಭದ ವಹಿವಾಟಿನಲ್ಲೇ ಡಾಲರ್ ಎದುರು ರುಪಾಯಿ 6 ಪೈಸೆ ಕುಸಿತಗೊಂಡಿದೆ.
9.40 : ಸುಮಾರು 8 ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಶತಾಯುಷಿ ನಟಿ ಝೋಹ್ರಾ ಸೆಹ್ಗಲ್ ಅವರು ಕಳೆದ ರಾತ್ರಿ ಮೃತರಾಗಿದ್ದು, ಶುಕ್ರವಾರ ಅವರ ಅಂತ್ಯಕ್ರಿಯೆ ನಡೆಯಲಿದೆ.
9.30: ಇನ್ಫೋಸಿಸ್ ಮೊದಲ ಕ್ವಾರ್ಟರ್ ಫಲಿತಾಂಶ ಹೊರಬಿದ್ದಿದ್ದು ಶೇ 21.6ರಷ್ಟು ನಿವ್ವಳ ಲಾಭ ಪಡೆದುಕೊಂಡಿದೆ.
9.15: ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ ವೈದ್ಯ ಸುಧೀರ್ ಗುಪ್ತಾ ಅವರ ಹೇಳಿಕೆಯನ್ನು ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್(ಸಿಎಟಿ) ಪಡೆದುಕೊಂಡಿದ್ದು, ನಿರ್ಣಯ ಇಂದು ಹೊರಬೀಳುವ ಸಾಧ್ಯತೆಯಿದೆ.
9.00 : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಟೆಫ್ ಅವರನ್ನು ರಷ್ಯಾಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಿಸಿದ್ದಾರೆ.
English summary
Top news in brief for the day: Price of branded or premium petrol was on Thursday cut by over Rs. 5 per litre after Indian Finance Minister Arun Jaitley slashed excise duty on the fuel and many more news from the around the globe on July 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X