ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.14: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.14: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

19.05: ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
17.45: ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಪ್ರಧಾನಿ ಮೋದಿ ಅವರು 1000 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

12.50: ಜಮ್ಮು-ಕಾಶ್ಮೀರದ ಬಿಕ್ಕಟ್ಟು ಕುರಿತಂತೆ ಭಾರತ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಗಡಿ ವಿವಾದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಪ್ರವೇಶಿಸಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.

11.00: ರಾಜಸ್ಥಾನ ಕ್ರಿಕೆಟ್ ಮಂಡಳಿಯಿಂದ ಲಲಿತ್ ಮೋದಿ ಹೊರಹಾಕಿರುವ ಬಿಸಿಸಿಐ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ಮೋದಿ ಹಿಂಬಾಲಕರು ಸಿದ್ಧರಾಗಿದ್ದಾರೆ.

10.30: ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕಿನ ಮ್ಯಾಡಿಸನ್ ಗಾರ್ಡನ್‌ನಲ್ಲಿ ಮಾಡಿದ್ದ ಭಾಷಣವನ್ನು ಮರಾಠಿ ಟಿವಿ ಚಾನೆಲ್‌ಗಳಲ್ಲಿ ಪದೇ ಪದೇ ಮರು ಪ್ರಸಾರ ಮಾಡುತ್ತಿರುವುದನ್ನು ಕಾಸಿಗಾಗಿ ಸುದ್ದಿ ಎಂದು ಕರೆದು ಈ ಸಂಬಂಧ ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಕಾಂಗ್ರೆಸ್ ಮನವಿ ಮಾಡಿದೆ.

10.20: ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ನರೇಂದ್ರ ಬಾತ್ರಾ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

10.15: ಭಾರತದ ನ್ಯಾವಿಗೇಶನ್ ಉಪಗ್ರಹ ಐಆರ್‌ಎನ್‌ಎಸ್‌ಎಸ್ 1ಸಿ ಯ 67 ಗಂಟೆಗಳ ಕ್ಷಣಗಣನೆ ಶ್ರೀಹರಿಕೋಟದ ಬಾಹ್ಯಾಕಾಶ ನಿಲ್ದಾಣದಲ್ಲಿ ಮಂಗಳವಾರ ಆರಂಭವಾಗಿದೆ.

10.10: ಐಆರ್‌ಎನ್‌ಎಸ್‌ಎಸ್ 1ಸಿ ಯಶಸ್ವಿಯಾದರೆ ಭಾರತದ ಮಾರ್ಗದರ್ಶಿ ವ್ಯವಸ್ಥೆ ಅಮೆರಿಕದ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ (ಜಿಪಿಎಸ್)ನ ಮಟ್ಟಕ್ಕೇರುತ್ತದೆ. ಅಕ್ಟೋಬರ್ 16ರ ಮುಂಜಾನೆ ಉಪಗ್ರಹ ಉಡಾವಣೆಗೊಳ್ಳಲಿದೆ.

10.00: ಖಾಲಿದ್ ಮಹ್‌ಫೂಝ್ ಬಹಾಹ್‌ರನ್ನು ಎಮನ್ ದೇಶದ ನೂತನ ಪ್ರಧಾನಿಯಾಗಿ ಎಮನ್‌ನ ಅಧ್ಯಕ್ಷರು ಅಧಿಕೃತವಾಗಿ ನೇಮಿಸಿದ್ದಾರೆ.

9.45: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲ ಜೊತೆಗೆ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರ ಪುತ್ರಿಯರು ಟೈಮ್ಸ್ ನ ವಾರ್ಷಿಕ ಅತ್ಯಂತ ಪ್ರಭಾವಿ ಯುವತಿಯರ ಪಟ್ಟಿಯಲ್ಲಿದ್ದಾರೆ.

English summary
Top News of the today : Congress party slams BJP for using PM Modi’s Madison Square speech in New York for campaign in Maharashtra and many news from around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X