ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.30 ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು. 30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.15: ರಷ್ಯಾದ ಉತ್ತರ ಭಾಗದ ಸೈಂಟ್. ಪೀಟರ್ಸ್ ಬರ್ಗ್ ನ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪುಲ್ಕೊವೊ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
10.15: ಸ್ಕಾಟ್ಲೆಂಡಿನಲ್ಲಿ ನಡೆದಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 36 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

Updates India, International News in Brief July 30

9.45: ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಉಂಟಾದ ಪ್ರವಾಹಕ್ಕೆ 9 ಜನ ಬಲಿಯಾಗಿದ್ದಾರೆ. ತ್ವರಿತ ಗತಿಯಲ್ಲಿ ನೀರು ನುಗ್ಗಿದ್ದರಿಂದ 1000ಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ. 100 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. 5 ಜನ ನಾಪತ್ತೆಯಾಗಿದ್ದಾರೆ.
9.40: ಚೀನಾದಲ್ಲಿ ಮಾಟ್ಮೋ ಚಂಡಮಾರುತದ ಭೀತಿ ಆವರಿಸಿದೆ.

Updates India, International News in Brief July 30

9.35: ಯುಎಸ್ ಕಾರ್ಯದರ್ಶಿ ಜಾನ್ ಕೆರಿ ಅವರು ಭಾರತ ಪ್ರವಾಸ ಮುಗಿಸಿ ಅಮೆರಿಕಕ್ಕೆ ಹಿಂತಿರುಗಿದ್ದಾರೆ.
9.30: ಲಿಬಿಯಾದ ಮಾಜಿ ಉಪ ಪ್ರಧಾನಿಯನ್ನು ಟ್ರಿಪೋಲಿಯಲ್ಲಿ ಬಂಡುಕೋರರು ಅಪಹರಣ ಮಾಡಿದ್ದಾರೆ.
9.15: ಬಿಜೆಪಿ ನಾಯಕರು ಗಲಭೆ ಪೀಡಿತ ಸಹರಾನ್ ಪುರ ಪ್ರದೇಶಕ್ಕೆ ಬುಧವಾರ ಭೇಟಿ ಕೊಡಲಿದ್ದಾರೆ.
English summary
Top news in brief for the day: Nine people have been killed in flash floods in southwest China's Yunnan province, the ministry of civil affairs said on Tuesday and many more news from the around the globe on July 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X