ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.23 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Ashwath
|
Google Oneindia Kannada News

ಬೆಂಗಳೂರು, ಜು.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

12:15 : ಏರ್‌ಸೆಲ್‌ ಮಾಕ್ಸಿಸ್‌ ಅವ್ಯವಹಾರ- ಡಿಎಂಕೆ ಮುಖಂಡ ದಯಾನಿಧಿ ಮಾರನ್‌ ವಿರುದ್ಧ ಸಾಕಷ್ಟು ಪುರಾವೆಗಳಿದೆ- ಸಿಬಿಐಗೆ ಅಟಾರ್ನಿ ಜನರಲ್‌ ಮುಕುಲ್ ರೋಹತಗಿ ಮಾಹಿತಿ.

11.37 : ಐಐಟಿ ಬಾಂಬೆಯಲ್ಲಿ ಪ್ರತ್ಯಕ್ಷವಾದ ಚಿರತೆ- ಪ್ರಯೋಗಾಲಯದಲ್ಲಿ ಚಿರತೆ ಅವಿತಿರುವ ಶಂಕೆ -ಅರಣ್ಯಾ ಅಧಿಕಾರಿಗಳಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭ.

bihar

11.24 : ಬೆಂಗಳೂರು ಶಾಲಾ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಶಾಲಾ ಮುಖ್ಯಸ್ಥ ರುಸ್ತುಂ ಕೇರವಾಲಾ ಬಂಧನ. [ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]

9.55 : ನ್ಯಾಯಧೀಶರ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ ಸಂಬಂಧಿಸಿದಂತೆ ನ್ಯಾ. ಕಾಟ್ಟು ಆರೋಪಕ್ಕೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಪ್ರತಿಕ್ರಿಯೆ ನೀಡಲು ಬಿಜೆಪಿ ಆಗ್ರಹ.

9.40 : "ಏರ್‌ಸೆಲ್‌‌ ಮಾಕ್ಸಿಸ್‌‌ ಒಪ್ಪಂದ ದೊಡ್ಡ ಹಗರಣವಾಗಿದ್ದು ದೇಶದ ಭದ್ರತೆಗೆ ಧಕ್ಕೆಯಾಗಿದೆ" ಬಿಜೆಪಿ ಪ್ರತಿಕ್ರಿಯೆ.

9.15 : ಅಸ್ಸಾಂ ಗೊಲ್‌‌ಪರ ಜಲ್ಲೆಯ ಕೃಷ್ಣಯಿ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಬಾಂಬ್‌ ಸ್ಪೋಟ. ಸೈಕ್‌ಲ್‌ನಲ್ಲಿ ಇರಿಸಿದ್ದ ಬಾಂಬ್‌ ಸ್ಪೋಟಕ್ಕೆ ಒಬ್ಬರು ಬಲಿಯಾಗಿದ್ದು ಮೂವರಿಗೆ ಗಾಯವಾಗಿದೆ.

8.30 : ಬಿಹಾರದಲ್ಲಿ ರೈಲು ಹಳಿ ಸ್ಪೋಟದ ಬಗ್ಗೆ ಮಾಹಿತಿ ಕೇಳಿದ ಕೇಂದ್ರ ರೈಲ್ವೆ ಸಚಿವ ಸದಾನಂದಗೌಡ.

8.15: ಲಕ್ನೋ ಅತ್ಯಾಚಾರ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಆದೇಶ.

8.00 : ಮಾವೋವಾದಿಗಳು ಬಿಹಾರದ ರಫಿಗಂಜಿ ಪ್ರದೇಶದಲ್ಲಿ ರೈಲು ಹಳಿ ಸ್ಪೋಟಿಸಿದ್ದಾರೆ. ರಾತ್ರಿ ಈ ಕೃತ್ಯ ಎಸಗಿದ್ದು ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ

English summary
Top news in brief for the day: Rail Minister Sadananda Gowda seeks report on Maoist attack in Bihar and many more news from the around the globe on July 23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X