ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.29: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಆ.29: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

3.15: ವಿಶ್ವ ಬಾಡ್ಮಿಂಟನ್ ಚಾಂಪಿಯನ್ ಶಿಪ್ ನಿಂದ ಭಾರತದ ಸೈನಾ ನೆಹ್ವಾಲ್ ಔಟ್. ಕ್ವಾರ್ಟರ್ ಫೈನಲ್ ನಲ್ಲಿ ಎಡವಿದ ಸೈನಾ.
3.00: ರಾಜಸ್ಥಾನದ ಬಿಕಾನೇರ್, ಜೋಧ್ ಪುರ, ಬಾರ್ಮಾರ್ ಪ್ರದೇಶದಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜನೆ ಮಾಡಲಾಗಿದೆ,
2.50: ರಾಜಸ್ಥಾನ ಪೊಲೀಸ್ ವಿಭಾಗ ಉಗ್ರ ನಿರೋಧಿ ದಳ(ಎಟಿಎಸ್) ನೀಡಿರುವ ಮಾಹಿತಿ ಆಧಾರದ ಮೇಲೆ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
2.45 : 15ಕ್ಕೂ ಅಧಿಕ ಉಗ್ರರು ರಾಜಸ್ಥಾನ ಗಡಿ ಮೂಲಕ ಭಾರತದೊಳಗೆ ನುಸುಳುತ್ತಾರೆ ಎಂದು ಗಡಿ ಭದ್ರತಾ ಪಡೆ(ಬಿಎಸ್ ಎಫ್) ಸುದ್ದಿ ನೀಡಿತ್ತು.
2.30: ಕುವೈಟ್ ನಲ್ಲಿ ಕೊಲೆ ಪ್ರಕರಣವೊಂದರಲ್ಲಿ 25 ಭಾರತೀಯ ಮೂಲದ ಕಾರ್ಮಿಕರು ಸಿಲುಕಿದ್ದು, ನೆರವಿಗಾಗಿ ಪ್ರಧಾನಿ ಮೋದಿ ಅವರ ಸಚಿವಾಲಯಕ್ಕೆ ಮನವಿ ಕಳಿಸಿದ್ದಾರೆ.


2.15: ಜಗತ್ತು ಇರುವವರೆಗೂ ಅತ್ಯಾಚಾರ ನಿಲ್ಲುವುದಿಲ್ಲ, ಯಾರೇ ಬಂದರೂ ಅತ್ಯಾಚಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಟಿಎಂಸಿ ಶಾಸಕ ದೀಪಕ್ ಹಲ್ದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳು ಖಂಡಿಸಿವೆ.
2.10: ಲೋಕಸಭಾ ಚುನಾವಣೆಯ ವೇಳೆ ತೃಣಮೂಲ ಕಾಂಗ್ರೆಸಿನ ಮುಖಂಡ ತಪಸ್ ಪೌಲ್ ಕೂಡ ರೇಪ್ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತೆಯರನ್ನು ರೇಪ್ ಮಾಡಲು ತನ್ನ ಹುಡುಗರನ್ನು ಬಿಡುತ್ತೇನೆ ಎಂದಿದ್ದರು.

12.30: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ 79 ವರ್ಷ ಹಳೆಯದಾದ ದೇಗುಲ ಮಹರ್ಷಿ ವಾಲ್ಮೀಕಿ ಸ್ವಾಮೀಜಿ ಮಂದಿರ ನೆಲಸಮವಾಗುವ ಭೀತಿ ಎದುರಿಸುತ್ತಿದೆ.
11.15: ಅಸ್ಟ್ರೇಲಿಯಾ ವಿರುದ್ಧ 327ರನ್ ಚೇಸ್ ಮಾಡಿ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಜಯ ದಾಖಲಿಸಿದೆ. ಆಸೀಸ್ ವಿರುದ್ಧ 300 ಪ್ಲಸ್ ರನ್ ಯಶಸ್ವಿ ಚೇಸ್ ಮಾಡಿದ ತಂಡ ಎಂಬ ದಾಖಲೆ ದಕ್ಷಿಣ ಆಫ್ರಿಕಾಕ್ಕಿದೆ.
10.45: ಮೇಘಾಲಯದಲ್ಲಿ ಕಂದಕಕ್ಕೆ ಬಸ್ ಉರುಳಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, 30 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ.
10.30: ಪ್ರೊ ಕಬಡ್ಡಿ ಲೀಗ್ ನ ಮೊದಲ ಸೆಮಿಫೈನಲ್ ಇಂದು ನಡೆಯಲಿದ್ದು, ಜೈಪುರದ ಪಿಂಕ್ ಪ್ಯಾಂಥರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್​ ಮುಖಾಮುಖಿಯಾಗಲಿದ್ದಾರೆ. ಎರಡನೇ ಸೆಮಿಸ್ ನಲ್ಲಿ ಯು-ಮುಂಬಾ ಬೆಂಗಳೂರು ಬುಲ್ಸ್ ಸೆಣಸಲಿವೆ.[ಪ್ರೊ ಕಬಡ್ಡಿ ಲೀಗ್ ಸೆಮಿಸ್: ಬೆಂಗಳೂರು vs ಮುಂಬೈ ]
10.25: ಐಪಿಎಲ್ ನ ಕಿಂಗ್ಸ್ ‍XI ಪಂಜಾಬ್ ತಂಡಕ್ಕೆ ಎಚ್ ಟಿಸಿ ಮೊಬೈಲ್ ಸಂಸ್ಥೆ ಅಧಿಕೃತ ಪ್ರಯೋಕರಾಗಿ ಆಯ್ಕೆಯಾಗಿದೆ.
10.20: ಪ್ರಿಯಾಂಕಾ ಛೋಪ್ರಾ ಅಭಿನಯದ ಮೇರಿ ಕೋಮ್ ಆತ್ಮಕಥನ ಚಲನಚಿತ್ರಕ್ಕೆ ಮಹಾರಾಷ್ಟ್ರದಲ್ಲಿ ಮನರಂಜನಾ ತೆರಿಗೆ ವಿಧಿಸುತ್ತಿಲ್ಲ.

9.50: ಅಲ್ಪಸಂಖ್ಯಾತ ಖಾತೆ ಸಚಿವೆ ನಜ್ಮಾ ಹೆಫ್ತುಲ್ಲಾ ಅವರು ಆರೆಸ್ಸೆಸ್ ನ ಹಿಂದೂ ರಾಷ್ಟ, ಭಾರತೀಯರೆಲ್ಲ ಹಿಂದೂಗಳು ಎಂಬ ವಾದವನ್ನು ಬೆಂಬಲಿಸಿದ್ದಾರೆ.
9.45: ದೇಶದೆಲ್ಲೆಡೆ ಶುಕ್ರವಾರದಂದು ಗಣೇಶ ಉತ್ಸವ ಸಾಂಗವಾಗಿ ನಡೆದಿದೆ.


9.40: ಮೃತವ್ಯಕ್ತಿಯಂತೆ ಬಿಂಬಿತವಾಗಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಚಂದ್ರ ಮೋಹನ್ ತನ್ನ ತಪ್ಪೊಪ್ಪಿಗೆ ನೀಡಿದ್ದಾನೆ. ಮನೆ ಇಲ್ಲದ ವ್ಯಕ್ತಿಯೊಬ್ಬನನ್ನು ಕೊಂದು ಆತನ ಸಾವನ್ನು ನನ್ನ ಸಾವು ಎಂದು ಬಿಂಬಿಸಿದ್ದೆ. ನನ್ನ ಪ್ರೇಮಿ ಜೊತೆ ಬಾಳಲು ಈ ರೀತಿ ಯೋಜಿಸಿದ್ದೆ ಎಂದಿದ್ದಾನೆ.
9.35: ಮದುವೆಗೂ ಮುನ್ನ ಕನ್ಯತ್ವ,ಪುರುಷತ್ವ ಪರೀಕ್ಷೆ ಏಕೆ ಮಾಡಬಾರದು ಎಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
9.30: ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬಾಟ್ ಅವರು ಮುಂದಿನ ವಾರ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಭಾರತಕ್ಕೆ ಯುರೇನಿಯಂ ಪೂರೈಕೆ ಸೇರಿದಂತೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
English summary
Top news in brief for the day:Minority affairs minister Najma Heptulla endorses RSS argument, says there is nothing wrong in calling Indians Hindus and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X