ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.19: ದೇಶ, ವಿದೇಶಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಆ.19: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.50: ಮಾನವ ಹಕ್ಕುಗಳ ಹೋರಾಟಗಾರ್ತಿ ಐರೋಮ್ ಶರ್ಮಿಳಾ ಚಾನು ಅವರು ಕೊನೆಗೂ ಬಂಧಮುಕ್ತರಾಗಿದ್ದಾರೆ. ಮಣಿಪುರದ ನ್ಯಾಯಲಯವೊಂದು ಮಂಗಳವಾರ ಚಾನು ಅವರ 13 ವರ್ಷಗಳ ಅನಿರ್ಧಿಷ್ಟಾವಧಿ ಉಪವಾಸ ಕೈಗೊಂಡಿದ್ದಾರೆ.
5.30: 42 ವರ್ಷ ವಯಸ್ಸಿನ ಶರ್ಮಿಳಾ ಅವರ ವಿರುದ್ಧ ಆತ್ಮಹತ್ಯೆಗೆ ಯತ್ನಿಸಿದ್ದರ ಬಗ್ಗೆ ಯಾವುದೇ ಸಾಕ್ಷಿ ಲಭ್ಯವಿರದ ಕಾರಣ ಬಂಧ ಮುಕ್ತಗೊಳಿಸಿದೆ.

Irom Sharmila

10.55: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಿಂಗಪುರ ಪ್ರವಾಸಕ್ಕೆ ಹಣ ಯಾರು ಕೊಟ್ಟರು? ಐದಾರು ದಿನಗಳ ಕಾಲ ವಿದೇಶಿ ಪ್ರವಾಸ ಮಾಡುತ್ತಿರುವುದು ಯಾವ ಲೆಕ್ಕದಲ್ಲಿ ಎಂದು ಬಿಜೆಪಿ ಪ್ರಶ್ನಿಸಿದೆ.
10.50: ಮಮತಾ ಬ್ಯಾನರ್ಜಿ ಸಿಂಗಪುರ ಪ್ರವಾಸ ವಿವಾದಕ್ಕೆ ಕಾರಣವಾಗಿದ್ದು, ಆರ್ ಟಿಐ ಮೂಲಕ ಮಾಹಿತಿ ಸಂಗ್ರಹ ಕಾರ್ಯದಲ್ಲಿ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ನಿರತರಾಗಿದ್ದಾರೆ.

Mamata Bannerjee

10.20: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಎರಡು ದಿನಗಳ ಕಾಲ ಉತ್ತರಪ್ರದೇಶ ಪ್ರವಾಸ ಕೈಗೊಂಡಿದ್ದಾರೆ.
10.00: ಯುರೋಪಿನಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹಬ್ಬಿದೆ. ಯುಕೆಯ ಭಕ್ತಿವೇದಾಂತ ಹರೇಕೃಷ್ಣ ಮಂದಿರದಲ್ಲಿ ನಡೆದ ಜನ್ಮಾಷ್ಟಮಿ ಸಂಭ್ರಮದಲ್ಲಿ ಸುಮಾರು 70,000 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
9.30 : ವಿಶ್ವದೆಲ್ಲೆಡೆಯಿಂದ LGBT ಸಂಗಾತಿಗಳು ಮದುವೆಯಾಗಲು ನ್ಯೂಜಿಲೆಂಡ್ ಗೆ ತೆರಳುತ್ತಿದ್ದಾರೆ.
English summary
Top news in brief for the day: Questioning the efficacy of West Bengal Chief Minister Mamata Banerjee's Singapore visit to hunt for investors, the BJP Monday sought to know who has funded the tour
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X