ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.1: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಆ. 1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.00: ದೆಹಲಿಯಲ್ಲಿ ಇ-ರಿಕ್ಷಾಗಳನ್ನು ನಿಷೇಧಿಸಿ ದೆಹಲಿ ಹೈ ಕೋರ್ಟ್ ನೀಡಿರುವ ಆದೇಶವನ್ನು ಬಿಜೆಪಿ ವಿರೋಧಿಸಿದೆ. ಪರಿಸರ ಸ್ನೇಹಿ ಇ ರಿಕ್ಷಾ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.

11.15 : ನ್ಯಾಷನಲ್ ಹೆರಾಲ್ಡ್ ಹಗರಣ ರಾಜಕೀಯ ಪಿತೂರಿಯಲ್ಲ, ರಾಜಕೀಯ ದ್ವೇಷ ಸಾಧಿಸುವ ಪಕ್ಷ ನಮ್ಮದ್ದಲ್ಲ ಎಂದು ಬಿಜೆಪಿ ತಿರುಗೇಟು.
11.00: ವಿಪಕ್ಷಗಳ ಪ್ರಮುಖರ ವಿರುದ್ಧ ಪ್ರಕರಣಗಳನ್ನು ಎಳೆದು ರಾಜಕೀಯ ದುರುದ್ದೇಶ ಸಾಧಿಸಲು ಬಿಜೆಪಿ ಹವಣಿಸುತ್ತಿದೆ ಎಂದು ನ್ಯಾಷನಲ್ ಹೆರಾಲ್ಡ್ ಹಗರಣದ ಬಗ್ಗೆ ಕಾಂಗ್ರೆಸ್ ಆಕ್ಷೇಪ.
10.50: ನ್ಯಾಷನಲ್ ಹೆರಾಲ್ಡ್ ಹಗರಣದ ಸೋನಿಯಾ ಗಾಂಧಿ ವಿರುದ್ಧ ಪ್ರಬಲವಾದ ಸಾಕ್ಷಿಯಿದೆ ಎಂದು ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಹೇಳಿಕೆ.

Updates India, International News in Brief Aug 1

10.40: ನ್ಯಾಷನಲ್ ಹೆರಾಲ್ಡ್ ಹಗರಣದ ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ.
10.30: ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿ ಎಲ್ ಇಡಿ ಸ್ಫೋಟಕ್ಕೆ ಮೂವರು ಬಲಿ.
10.20: ಕಾಮನ್ ವೆಲ್ತ್ ಕ್ರೀಡಾಕೂಟದ ಪದಕ ವಿಜೇತರಾದ ಗಗನ್ ನಾರಂಗ್, ಜಿತು ರೈ ಹಾಗೂ ಗುರ್ ಪಾಲ್ ಸಿಂಗ್ ಭಾರತಕ್ಕೆ ಮರಳಿದ್ದಾರೆ.
10.00: ಉತ್ತರಾಖಂಡ್ ನ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ.
9.30: ವಿಶ್ವಸಂಸ್ಥೆ ನಿರ್ದೇಶನದಂತೆ 72 ಗಂಟೆಗಳ ಗುಂಡಿನ ಚಕಮಕಿ ನಿಲ್ಲಿಸಿ ಯುದ್ಧ ವಿರಾಮ ಘೋಷಿಸಿದ ಹಮಾಸ್.
English summary
Top news in brief for the day: BJP hits back at Congress over National Herald case, says it is not indulging in political vendetta and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X