ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಟಿಂಗ್ % Live : 4 ಗಂಟೆಗೆ ಬಂಗಾಳದಲ್ಲಿ 70%

By Mahesh
|
Google Oneindia Kannada News

ಬೆಂಗಳೂರು, ಮೇ.12: ಲೋಕಸಭಾ ಚುನಾವಣೆಯ 9ನೇ ಹಾಗೂ ಕೊನೆ ಹಂತದ ಮತದಾನ ಸೋಮವಾರ ಜಾರಿಯಲ್ಲಿದೆ. ಮೂರು ರಾಜ್ಯಗಳ 41 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಇಡೀ ವಿಶ್ವದ ಗಮನವೇ ಮೇ.16ರ ಚುನಾವಣಾ ಫಲಿತಾಂಶದತ್ತ ಕೇಂದ್ರೀಕರಿಸಿದೆ.

ಬಿಹಾರದ 6, ಪಶ್ಚಿಮ ಬಂಗಾಳ 17 ಮತ್ತು ಉತ್ತರ ಪ್ರದೇಶ 18 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 9 ಹಂತದ ಮತದಾನದಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗುತ್ತದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ದೇಶಾದ್ಯಂತ ಏಕಕಾಲದಲ್ಲಿ ಮತ ಎಣಿಕೆ ನಡೆಯಲಿದ್ದು, ದೆಹಲಿಯಲ್ಲಿ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂಬುದು ಫಲಿತಾಂಶದಿಂದ ಹೊರಬೀಳಲಿದೆ.

6.20: 5 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಶೇ 77.41ರಷ್ಟು ಮತದಾನವಾಗಿದೆ. ಬಿಹಾರದಲ್ಲಿ 83.82%. ವಾರಣಾಸಿಯಲ್ಲಿ 53.10%
5.05: ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಮಿತ್ರಾ ಇನ್ಸ್ಟಿಟ್ಯೂಟ್ ನಲ್ಲಿ ಮತದಾನ ಮಾಡಿದ್ದಾರೆ. 4 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಶೇ 70 ರಷ್ಟು ಮತದಾನವಾಗಿದೆ.
4.45: ಬಿಹಾರದಲ್ಲಿ 4 ಗಂಟೆಗೆ ಶೇ 50.85 ರಷ್ಟು ಮತದಾನ.
3.45: 3 ಗಂಟೆ ವೇಳೆಗೆ ಬಿಹಾರದಲ್ಲಿ ಶೇ 47.16 ರಷ್ಟು ಮತದಾನ.
3.30: 3 ಗಂಟೆ ವೇಳೆಗೆ ವಾರಣಾಸಿಯಲ್ಲಿ ಶೇ 44.75 ರಷ್ಟು ಮತದಾನ.
3.15: 3 ಗಂಟೆ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಶೇ 67ರಷ್ಟು ಮತದಾನವಾಗಿದೆ.
2.25: 1 ಗಂಟೆ ವೇಳೆಗೆ ವಾರಣಾಸಿಯಲ್ಲಿ ಶೇ 35.38ರಷ್ಟು ಮತದಾನವಾಗಿದೆ. ಉತ್ತರಪ್ರದೇಶದಲ್ಲಿ 36.29%.ಪಶ್ಚಿಮ ಬಂಗಾಳದಲ್ಲಿ ಶೇ 57ರಷ್ಟು ಮತದಾನ.

The final phase of the Lok Sabha election 2014

1.20: 1 ಗಂಟೆಗೆ ಬಿಹಾರದಲ್ಲಿ ಶೇ 37.86ರಷ್ಟು ಮತದಾನ.
1.15: ವಾರಣಾಸಿಯ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ ಎಫ್ ಐಆರ್.
1.00 : 12 ಗಂಟೆಗೆ ಬಿಹಾರದಲ್ಲಿ ಶೇ 31ರಷ್ಟು ಮತದಾನ. 1 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಶೇ 56.38ರಷ್ಟು ಮತದಾನ.
12.45 : ಮತಪಟ್ಟಿಯಲ್ಲಿ ಹೆಸರು ನಾಪತ್ತೆ, ವಾರಣಾಸಿಯಲ್ಲಿ ಮತದಾರರಿಂದ ಪ್ರತಿಭಟನೆ.
Ajay Rai

12.20: ಕೋಲ್ಕತ್ತಾದ ಬಿಜೆಪಿ ಕೌನ್ಸಿಲರ್ ಮನೆ ಮುಂದೆ ನಾಡ ಬಾಂಬ್ ಪತ್ತೆ.
12.15: 11 ಗಂಟೆಗೆ ವಾರಣಾಸಿಯಲ್ಲಿ ಶೇ 28 ರಷ್ಟು ಮತದಾನವಾಗಿದೆ.
12.00: ಭೋಜಪುರಿ ನಟ, ಚುನಾವಣಾ ಅಭ್ಯರ್ಥಿ ರವಿಕಿಶನ್ ಅವರು ಉತ್ತರಪ್ರದೇಶದಲ್ಲಿ ಮತದಾನ ಮಾಡಿದ್ದಾರೆ.
11.45: ಪಕ್ಷದ ಚಿನ್ಹೆ ತೋರಿಸಿದ ಅಜಯ್ ವಿರುದ್ಧ ವಾರಣಾಸಿ ರಿಟರ್ನಿಂಗ್ ಅಧಿಕಾರಿಯಿಂದ ದೂರು ದಾಖಲು, ತನಿಖೆ ಮುಂದುವರಿಕೆ.
11.30: 11 ಗಂಟೆಗೆ ಬಿಹಾರದಲ್ಲಿ ಶೇ 24.7, ಉತ್ತರಪ್ರದೇಶದಲ್ಲಿ ಶೇ 23.7 ರಷ್ಟು ಮತದಾನ.
Final phase voting

ಮತದಾನವಾಗಿದ್ದು, ಇತರೆಡೆಗೆ ಹೋಲಿಸಿದರೆ ಮುಂಚೂಣಿ ಕಾಯ್ದುಕೊಂಡಿದೆ.
11.20: 10 ಗಂಟೆ ವೇಳೆಗೆ ಉತ್ತರಪ್ರದೇಶದಲ್ಲಿ ಶೇ 13ರಷ್ಟು, ಪಶ್ಚಿಮ ಬಂಗಾಳದಲ್ಲಿ 28%.
10.30: 10 ಗಂಟೆಗೆ ಬಿಹಾರದಲ್ಲಿ ಶೇ 17.78
9.20: ವಾರಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಉಪಸ್ಥಿತಿ ಬಗ್ಗೆ ಆಕ್ಷೇಪ.
9.15: ವಾರಣಾಸಿ ಕ್ಷೇತ್ರದ ಅಭ್ಯರ್ಥಿ ಅಜಯ್ ರಾಯ್ ಅವರು ಮತಗಟ್ಟೆಯ ಬಳಿ ಪಕ್ಷದ ಚಿನ್ಹೆ ತೋರಿಸಿದ ಆರೋಪ ಹೊತ್ತಿದ್ದಾರೆ.

9.00: 9 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಶೇ 21.04 ರಷ್ಟು ಮತದಾನ.
8.45 : ಉತ್ತರಪ್ರದೇಶದ ಮತಗಟ್ಟೆಯೊಂದರಲ್ಲಿ ಬಳಸಲಾದ ಲ್ಯಾಪ್ ಟಾಪ್ ಮೇಲೆ ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಅವರ ಚಿತ್ರ ಕಂಡು ಬಂದಿದೆ.
8.30: ಆರ್ ಜೆಡಿ ಅಭ್ಯರ್ಥಿ ಸಿವಾನ್ ಹೀನಾ ಶಹಬ್ ಮತದಾನ ಮಾಡಿದ್ದಾರೆ. ಕೋಲ್ಕತ್ತಾದಲ್ಲಿ ಟಿಎಂಸಿ ನಾಯಕ ಕ್ವಿಜ್ ಮಾಸ್ಟರ್ ಡೆರೆಕ್ ಓ ಬ್ರಿಯಾನ್ ಮತ ಹಾಕಿದ್ದಾರೆ.
English summary
The final phase of the Lok Sabha election 2014 is being held on Monday. A total of 41 constituencies in Uttar Pradesh (18), West Bengal (17) and Bihar (6) go to the polls in this phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X