ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿಯಲ್ಲಿಟ್ಟ ಠೇವಣಿ ಬಡ್ಡಿ ದರ ಏರಿಕೆ

By Mahesh
|
Google Oneindia Kannada News

UPA Govt hikes interest rates on post-office FDs
ನವದೆಹಲಿ, ಮಾ.5: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲೇ ಯುಪಿಎ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಅಂಚೆ ಕಚೇರಿಯ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.0.2ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿರುವುದಾಗಿ ಮಂಗಳವಾರ ಪ್ರಕಟಿಸಿದೆ. ಆದರೆ, ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸರ್ಕಾರದ ನಿರ್ಧಾರದಿಂದಾಗಿ ಸಣ್ಣ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಿರುವ ಲಕ್ಷಾಂತರ ಮಂದಿಗೆ ಸಂತಸವಾಗಿದೆ.

ನಿಶ್ಚಿತ ಠೇವಣಿ ಮೇಲಿನ ಹೊಸ ಬಡ್ಡಿದರ ಏ.1 ರಿಂದಲೇ ಜಾರಿಗೆ ಬರಲಿದೆ. ಈ ಹೊಸ ನಿಯಮದಂತೆ 1 ಮತ್ತು 2 ವರ್ಷದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಶೇ.8.2ರಿಂದ ಶೇ.8.4 ಆಗಲಿದೆ. ಆದರೆ, ಮೂರು ವರ್ಷ ಮತ್ತು ಐದು ವರ್ಷದ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಶೇ.0.1ರಷ್ಟು ಹೆಚ್ಚಳವಾಗಲಿದೆ.

ಸಣ್ಣ ಉಳಿತಾಯ ಯೋಜನೆಯನ್ನು ಇನ್ನಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ನೇಮಿಸಲಾಗಿದ್ದ ಶ್ಯಾಮಲಾ ಗೋಪಿನಾಥ್ ಸಮಿತಿಯ ಶಿಫಾರಸ್ಸಿನಂತೆ ಹಣಕಾಸು ಸಚಿವಾಲಯ ಬಡ್ಡಿದರ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಸಮಿತಿಯ ಶಿಫಾರಸ್ಸಿನಂತೆ ಸರ್ಕಾರವು ಪ್ರತಿ ವರ್ಷ ಏ.1ಕ್ಕಿಂತ ಮೊದಲು ಬಡ್ಡಿದರವನ್ನು ಪರಿಷ್ಕರಿಸಲಿದೆ.

English summary
A day ahead of the announcement of Lok Sabha poll dates, the UPA government on Tuesday increased interest rates on a range of popular post-office saving schemes in an apparent move to make small savings more rewarding for millions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X