ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ ನಾಪತ್ತೆಯಾದ ರೈಲು ಬಿಹಾರದಲ್ಲಿ ಪತ್ತೆ

By Mahesh
|
Google Oneindia Kannada News

ಲಕ್ನೋ, ಸೆ.12: ಮಲೇಷಿಯಾ ವಿಮಾನ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿರುವಾಗಿರುವ ಸಂದರ್ಭದಲ್ಲೇ ಭಾರತದಲ್ಲಿ ಒಂದು ವಿಚಿತ್ರವಾದ ನಾಪತ್ತೆ ಘಟನೆ ಸಂಭವಿಸಿದೆ. ಉತ್ತರಪ್ರದೇಶದಲ್ಲಿ ನಾಪತ್ತೆಯಾದ ರೈಲೊಂದು ಸುಮಾರು 17 ದಿನಗಳ ನಂತರ ಬಿಹಾರದಲ್ಲಿ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಪ್ಯಾಸೆಂಜರ್‌ ರೈಲೊಂದು 17 ದಿನದಿಂದ ನಾಪತ್ತೆಯಾಗಿತ್ತು. ಗುರುವಾರ ಬಿಹಾರದಲ್ಲಿ ಈ ರೈಲು ಪತ್ತೆಯಾಗಿರುವ ಸುದ್ದಿ ಬಂದಿದೆ. ಆಗಸ್ಟ್‌ 25ರಂದು ರಾತ್ರಿ ಗೋರಖ್‌ಪುರ-ಮುಜಫರ್‌ಪುರ ಮಾರ್ಗ ಘುಘಲಿ ನಿಲ್ದಾಣದ ಬಳಿ ಗೂಡ್ಸ್‌ ರೈಲು ಹಳಿ ತಪ್ಪಿತ್ತು. ಆದ್ದರಿಂದ ಈ ಮಾರ್ಗವಾಗಿ ಹೋಗುವ ರೈಲುಗಳ ಮಾರ್ಗ ಬದಲಾಯಿಸಲಾಗಿತ್ತು. ರೈಲುಗಳು ದೇವರಿಯಾ, ಬನಾರಸ್‌ ಮತ್ತು ಛಪ್ರಾ ಮಾರ್ಗದ ಮೂಲಕ ಸಂಚರಿಸಿದವು. ಅದೇ ರೀತಿ ಗೋರಖ್‌ಪುರ-ಮುಜಫರ್‌ಪುರ ಪ್ಯಾಸೆಂಜರ್‌ ರೈಲನ್ನೂ ಇದೇ ಮಾರ್ಗದಲ್ಲಿ ಚಲಿಸುತ್ತಿತ್ತು.

Bizarre lost & found case: Missing passenger train traced after 17 days in Bihar!

ಆದರೆ ಇಂಟರ್‌ಲಿಂಕಿಂಗ್‌ ಸಮಸ್ಯೆಯಿಂದಾಗಿ ಗೋರಖ್‌ಪುರ-ಮುಜಫರ್ಪುರ ರೈಲನ್ನು ಹಾಜಿಪುರದಲ್ಲಿ ತಡೆಯಲಾಗಿತ್ತು. ಪ್ರಯಾಣಿಕರೆಲ್ಲ ಇಲ್ಲಿ ಇಳಿದು ಹೋಗಿದ್ದರು. ನಾಲ್ಕು ದಿನಗಳ ಬಳಿಕ ಎಲ್ಲ ಮಾರ್ಗಗಳಲ್ಲಿ ರೈಲು ಸಂಚಾರ ಪ್ರಾರಂಭವಾದಾಗಲೇ ರೈಲ್ವೆ ಅಧಿಕಾರಿಗಳಿಗೆ ಗೋರಖ್‌ಪುರ-ಮುಜಫರ್‌ಪುರ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಇಲ್ಲದಿರುವುದನ್ನು ಕಂಡು ಹೌಹಾರಿದ್ದಾರೆ.

ನಾಪತ್ತೆಯಾಗಿದ್ದ ರೈಲಿನ ಚಾಲಕ ಹೊಸ ಮಾರ್ಗದಲ್ಲಿ ಸಂಚರಿಸಿದ್ದರಿಂದ ಚಾಲ್ತಿ ಮಾರ್ಗದಲ್ಲಿ ರೈಲಿನ ಸುಳಿವು ಸಿಕ್ಕಿರಲಿಲ್ಲ. ಚಾಲಕ ಕೂಡಾ ಯಾವುದೇ ಮಾಹಿತಿಯನ್ನು ಸ್ಟೇಷನ್ ಮಾಸ್ಟರ್ ಗೆ ನೀಡಿರಲಿಲ್ಲ. ಈಗ 17 ದಿನದ ಹುಡುಕಾಟದ ಬಳಿಕ ಬಿಹಾರದಲ್ಲಿನ ಮತ್ತೂಂದು ವಿಭಾಗದ ರೈಲು ನಿಲ್ದಾಣದಲ್ಲಿ ಈ ಪ್ಯಾಸೆಂಜರ್ ರೈಲು ಪತ್ತೆಯಾಗಿದೆ. ರೈಲ್ವೆ ಇಲಾಖೆಗೆ ದೂರು ನೀಡಲು ರೈಲು ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ ಎಂದು ಸಮಷ್ಟಿಪುರ ವಿಭಾಗೀಯ ಮ್ಯಾನೇಜರ್‌ ಅರುಣ್‌ ಮಲಿಕ್‌ ಹೇಳಿದ್ದಾರೆ.(ಐಎಎನ್ ಎಸ್)

English summary
A train which went missing from one railway division in Bihar was finally traced on Thursday after 17 long days - from another division, senior officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X