ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2014-15: ಮುಖ್ಯಾಂಶಗಳು

By Mahesh
|
Google Oneindia Kannada News

ನವದೆಹಲಿ, ಜು.10: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎನ್ ಡಿಎ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಬಿಜೆಪಿ ಸರ್ಕಾರ ಮತ್ತೆ ಆಯವ್ಯಯ ಮಂಡನೆ ಮಾಡಿದ್ದು, ಜನ ಪರ, ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು ಹೇಳಿಕೊಂಡಿದೆ. ಜನಸಾಮಾನ್ಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. 2014-15ರ ಬಜೆಟ್ ಮಂಡನೆ ವಿವರ, ಮುಖ್ಯಾಂಶಗಳು ಅಪ್ದೇಟ್ ಈ ಪುಟದಲ್ಲಿದೆ..

Union Budget 2014-15 Live Coverage in Kannada

ಎನ್ಡಿಎ ಸರ್ಕಾರದ 2014-15ರ ಕೇಂದ್ರ ಬಜೆಟ್ ಮುಖ್ಯಾಂಶಗಳು:
1.15:
ಡಿಜಿಟಲ್ ಇಂಡಿಯಾ, ಯಂಗ್ ಇಂಡಿಯಾ, ಕೌಶಲ್ಯ ಅಭಿವೃದ್ಧಿ, ಸ್ಮಾರ್ಟ್ ಸಿಟಿ, ಗಂಗಾ ಸ್ವಚ್ಛತೆ, ಏಮ್ಸ್, ಐಐಟಿ, ಮಹಿಳಾ ಮಕ್ಕಳ ಅಭಿವೃದ್ಧಿ, ಎಫ್ ಡಿಐ(ರಕ್ಷಣೆ, ವಿಮಾ ಕ್ಷೇತ್ರ), ತೆರಿಗೆ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದೆ ಬಜೆಟ್ ಭಾಷಣ ಮುಕ್ತಾಯಗೊಳಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ.
1.00: ನೇರ ತೆರಿಗೆ ವ್ಯತ್ಯಯ ಪರಿಣಾಮ 22,200 ಕೋಟಿ ಆದಾಯ ನಷ್ಟ. [ವಿವರ ಇಲ್ಲಿ ಓದಿ]
12.58:
ಟಿವಿ ಸೆಟ್, ಪರ್ಸನಲ್ ಕಂಪ್ಯೂಟರ್, ಸೋಲಾರ್ ಪವರ್ ಯೂನಿಟ್, ಕಂಪ್ಯೂಟರ್, ತೈಲ ಉತ್ಪನ್ನಗಳು, ಸೋಪು, ದರ ಇಳಿಕೆ. ಸಿಗರೇಟು, ಸಿಗಾರ್, ಪಾನ್ ಮಸಾಲ ದರ ಏರಿಕೆ [ಸಂಪೂರ್ಣ ಪಟ್ಟಿ ಇಲ್ಲಿ ಓದಿ]
12.55:ನೇರ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
12.49:
ಗೃಹಸಾಲದ ಬಗ್ಗೆ ಜೇಟ್ಲಿ: ಸೆಕ್ಷನ್ 80 D

12.48: ವಿಮಾ ಕ್ಷೇತ್ರದಲ್ಲಿ ಎಫ್ ಡಿಐ ಪ್ರಮಾಣ ಶೇ 49ಕ್ಕೆ ಏರಿಕೆ.
12.46: 80ಸಿ ಅನ್ವಯ ಹೂಡಿಕೆ
12.45
: ಆದಾಯ ತೆರಿಗೆ ಮಿತಿ

12.43: ಆದಾಯ ತೆರಿಗೆ ಮಿತಿ 2 ಲಕ್ಷ ರು ನಿಂದ 2.5 ಲಕ್ಷ ರುಗೆ ಏರಿಕೆ
* ಹಿರಿಯ ನಾಗರಿಕರಿಗೆ 3 ಲಕ್ಷ ರುಗೆ ಏರಿಕೆ

12.42: ಆದಾಯ ತೆರಿಗೆ : 80ಸಿ ಅನ್ವಯ ಹೂಡಿಕೆ ಮಿತಿಯನ್ನು 1 ಲಕ್ಷ ದಿಂದ 1.5 ಲಕ್ಷ ರುಗೆ ಏರಿಕೆ
* ಈಶಾನ್ಯ ರಾಜ್ಯಗಳ ರೈಲು ಯೋಜನೆ ಬಗ್ಗೆ:

12.41: ಏಷ್ಯನ್ ಗೇಮ್ಸ್ ಕ್ರೀಡಾಪಟುಗಳ ತರಬೇತಿಗಾಗಿ 100 ಕೋಟಿ ರು ಅನುದಾನ
12.40: ದೆಹಲಿ, ನೋಯ್ಡಾ ವಲಯದ ಕುಡಿಯುವ ನೀರು ಮೂಲ ಸೌಕರ್ಯ ಅಭಿವೃದ್ಧಿಗಾಗಿ 700 ಕೋಟಿ ರು
12.39
: ಮಥುರಾ, ಹರಿದ್ವಾರ, ಕಾಶಿ ಸೇರಿದಂತೆ ಹಲವೆಡೆ ಹೆರಿಟೇಜ್ ಸಿಟಿ ನಿರ್ಮಾಣ.
12.38: ಕಾಶ್ಮೀರದ ವಲಸಿಗರ ಪುನರ್ವಸಿಗೆ 500 ಕೋಟಿ ರು ಮೀಸಲು
12.37
: ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ 200 ಕೋಟಿ ರು
12.36
: ಬೆಂಗಳೂರು, ಫರಿದಾಬಾದಿನಲ್ಲಿ ಬಯೋಟೆಕ್ ಕ್ಲಷ್ಟರ್ ಸ್ಥಾಪನೆ.
12.35:
ಗಂಗಾ ನದಿ ಸ್ವಚ್ಛತಾ ಯೋಜನೆ ಅನುಷ್ಠಾನ ನಿಧಿಗಾಗಿ ಎನ್ನಾರೈ ಫಂಡ್ ಸ್ಥಾಪನೆ.
12.34: ದೇಶದೆಲ್ಲೆಡೆ ನದಿ ಜೋಡಣೆ ಯೋಜನೆಗೆ 100 ಕೋಟಿ ರು ನೀಡಿಕೆ.
12.33: ಮಣಿಪುರದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆ,
12.32: ಗಡಿಭಾಗದ ಗ್ರಾಮಗಳ ಅಭಿವೃದ್ಧಿಗಾಗಿ 900 ಕೋಟಿ ರುಇ.
12.31: ಧಾರ್ಮಿಕ, ತೀರ್ಥಕ್ಷೇತ್ರಗಳ ಅಭಿವೃದ್ಧಿಗೆ 100 ಕೋಟಿ ರು ಅನುದಾನ.
12.30: ಸೆ.24ಕ್ಕೆ ಇಸ್ರೋ ನಿರ್ಮಿತ ಮಂಗಳಯಾನ ಯೋಜನೆ ತನ್ನ
12.29: ಯುದ್ಧ ಸ್ಮಾರಕಗಳ ಸಂರಕ್ಷಣೆ ಅಭಿವೃದ್ಧಿಗೆ 100 ಕೋಟಿ ರು ಮೀಸಲು
12.28: ಪಿಪಿಎಫ್ ಮಿತಿಯನ್ನು ವಾರ್ಷಿಕ 1.5 ಲಕ್ಷ ರು.ಗೆ ಏರಿಕೆ.
12.27: ಪೊಲೀಸ್ ಇಲಾಖೆ ವ್ಯವಸ್ಥೆ ಸುಧಾರಣೆಗೆ 3 ಸಾವಿರ ಕೋಟಿ ರು ನೀಡಿಕೆ.
12.25 :
ಪ್ರತಿ ಮನೆಗೆ 2 ಬ್ಯಾಂಕ್ ಖಾತೆ ನಮ್ಮ ಗುರಿ
12.24: ರಕ್ಷಣಾ ಇಲಾಖೆಗೆ 2.29 ಲಕ್ಷ ಕೋಟಿ ರು ಅನುದಾನ
12.22: One Rank One Pension ಯೋಜನೆಗೆ 1000 ಕೋಟಿ ರು ಮೀಸಲು
12.21: ಬಾಕಿ ಉಳಿದಿರುವ ವಿಮಾ ಮಸೂದೆ ಬಗ್ಗೆ ಜೇಟ್ಲಿ

12.20: ಬೆಂಗಳೂರು, ತುಮಕೂರಿಗೆ ಕೈಗಾರಿಕಾ ಕಾರಿಡಾರ್, ಮೈಸೂರಿಗೆ ಒಲಿದ ಜವಳಿ ಕಾರಿಡಾರ್
12.19: ಬ್ಯಾಂಕಿಂಗ್ ಎಲ್ಲಾ ವ್ಯವಹಾರಕ್ಕೆ ಒಂದೇ ಒಂದು ಡಿಮ್ಯಾಟ್ ಅಕೌಂಟ್ ಸಾಕು
12.18: ಬ್ಯಾಂಕ್ ಗಳಿಂದ ಮೂಲಸೌಕರ್ಯ ಕ್ಷೇತ್ರಕ್ಕೆ ಕೊಡುಗೆ

12.17: 2015ರ ಹಣಕಾಸು ವರ್ಷದಲ್ಲಿ ರೈತರಿಗೆ 8 ಲಕ್ಷ ಕೋಟಿ ರು. ಸಾಲಕ್ಕೆ ಪ್ರಸ್ತಾವನೆ. ಕಿರು ಅವಧಿ ಗ್ರಾಮೀಣ ಸಾಲ ಮರುವ್ಯವಸ್ಥೆ ನಿಧಿಗೆ 5 ಸಾವಿರ ಕೋಟಿ ರು.
12.16: ಅನಿಲ ಗ್ರಿಡ್ 15,000 ಕಿ.ಮೀ ಹೆಚ್ಚುವರಿ ಪೈಪ್ ಲೈನ್ ಅಳವಡಿಕೆ ಯೋಜನೆ ಪಿಪಿಪಿ ಮಾದರಿಯಲ್ಲಿ ಅನುಷ್ಠಾನ.
12.15: ಅಲ್ಟ್ರಾ ಪವರ್ ಯೋಜನೆ ರಾಜಸ್ಥಾನ, ತಮಿಳುನಾಡು, ಲಡಾಕ್ ಗೆ ಒಲಿದಿದೆ 500 ಕೋಟಿ ರು ಮೀಸಲು.
12.12: 'ಜಲ್ ಮಾರ್ಗ್ ವಿಕಾಸ್" ಗಂಗಾ ಸ್ವಚ್ಛತಾ ಯೋಜನೆಗಾಗಿ 4200 ಕೋಟಿ ರು ಮೀಸಲು.
12.08: 16 ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 11,000 ಕೋಟಿ ರು ಅನುದಾನ.

12.07: ಹೊಸ ವಿಮಾನ ನಿಲ್ದಾಣ ನಿರ್ಮಾಣ ಎರಡನೇ ಸ್ತರದ ನಗರಗಳಿಗೆ ಆದ್ಯತೆ, ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿ.
12.05: ಕಾಶ್ಮೀರದಲ್ಲಿ ಪಶ್ಮಿಮಾ ಉತ್ಪಾದನೆಗಾಗಿ 50 ಕೋಟಿ ರು ಮೀಸಲು
12.04: 6 ಹೊಸ ಜವಳಿ ಕಾರಿಡಾರ್ ಸ್ಥಾಪನೆ, ಸೂರತ್, ಲಕ್ನೋ, ಕಚ್, ಭಗಲ್ ಪುರ್ ಹಾಗೂ ತಮಿಳುನಾಡಿನಲ್ಲಿ 200 ಕೋಟಿ ರು ಮೀಸಲು
12.02: ಹಸ್ತ ಕಲಾ ಅಕಾಡೆಮಿ ಸ್ಥಾಪನೆ


11.59: ಹೊಸ ಕೃಷಿ ಹಾಗೂ ತೋಟಗಾರಿಕಾ ಕಾಲೇಜು ಸ್ಥಾಪನೆಗೆ 200 ಕೋಟಿ ರು ಅನುದಾನ.
11.57: ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೃಷಿ ವಿಶ್ವವಿದ್ಯಾಲಯ, ಹರ್ಯಾಣ ಹಾಗೂ ತೆಲಂಗಾಣದಲ್ಲಿ ತೋಟಗಾರಿಕಾ ಕಾಲೇಜು
11.56 : ಬಜೆಟ್ ಭಾಷಣದ ನಡುವೆ ವಿರಾಮ ಪಡೆದುಕೊಂಡ ಸಚಿವ ಜೇಟ್ಲಿ ಅವರು ವಿಶ್ರಾಂತಿ ನಂತರ ಕುಳಿತುಕೊಂಡು ಬಜೆಟ್ ಭಾಷಣ ಮಾಡುತ್ತಿದ್ದಾರೆ.
11.55
: ಶಿಶಿಕ್ಷು ತರಬೇತಿ ಬಗ್ಗೆ ಜೇಟ್ಲಿ:

11.53
: ರೈತರಿಗಾಗಿ ಪ್ರತ್ಯೇಕ ಕೃಷಿ ಟಿವಿ ಈ ವರ್ಷದಿಂದಲೇ ಆರಂಭ.
11.52 : ಜಮೀನು ಕಳೆದುಕೊಂಡ ರೈತರಿಗೆ ನಬಾರ್ಡ್ ಯೋಜನೆಯಡಿಯಲ್ಲಿ 5 ಲಕ್ಷ ರು ತನಕ ನೀಡಿಕೆ.
11.51: ಮಣಿನ ಫಲವತ್ತತೆ ಪರೀಕ್ಷೆಗಾಗಿ ಹೆಲ್ತ್ ಕಾರ್ಡ್. 100 ಕೋಟಿ ರು ಇದಕ್ಕಾಗಿ ಮೀಸಲು, ಮಣ್ಣು ಪರೀಕ್ಷಾ ಲ್ಯಾಬ್ ಗೆ 50 ಕೋಟಿ ರು.
11.50: ಕೃಷಿ ಕ್ಷೇತ್ರದಲ್ಲಿ 4% ಪ್ರಗತಿ ನಿರೀಕ್ಷೆ. 100 ಕೋಟಿ ರು ಆಗ್ರಾ ಇನ್ ಫ್ರಾ ಫಂಡ್
11.45: ಐದು ನಿಮಿಷಗಳ ಕಾಲ ಸಂಸತ್ ಕಲಾಪ ಮುಂದೂಡಿದ ಸ್ಪೀಕರ್ ಸುಮಿತ್ರಾ ಮಹಾಜನ್
11.44:
ನಿರ್ಭಯಾ ಫಂಡ್ ಸದ್ಬಳಕೆ ಬಗ್ಗೆ ಜೇಟ್ಲಿ:

11.43: ಮದರಸಾಗಳ ಅಭಿವೃದ್ಧಿಗಾಗಿ 100 ಕೋಟಿ ಘೋಷಣೆ

11.42: ಅಹಮದಾಬಾದ್ ಹಾಗೂ ಲಕ್ನೋಗೆ ಮೆಟ್ರೋ ರೈಲಿಗಾಗಿ ಅನುದಾನ

11.42: ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಗ್ರಾಮೀಣ ಭಾರತದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಪಾರದರ್ಶಕ ಆಡಳಿತಕ್ಕಾಗಿ 500 ಕೋಟಿ ರು.
11.41: ಸಮುದಾಯ ರೇಡಿಯೋ ಸ್ಥಾಪನೆಗಾಗಿ 100 ಕೋಟಿ ರು ಅನುದಾನ.

11.40: ಪೋಸ್ಟಲ್ ಯೋಜನೆಗಳಲ್ಲಿ ಬಳಕೆಯಾಗದೇ ಉಳಿದಿರುವ ದೊಡ್ಡ ಪ್ರಮಾಣದ ಹಣವನ್ನ ವಿನಿಯೋಗ ಮಾಡಲು ಸಮಿತಿ ಸ್ಥಾಪನೆ.
11.39: ಹೊಸ 5 ಏಮ್ಸ್ ಹಾಗೂ 5 ಹೊಸ ಐಐಟಿ ಸ್ಥಾಪನೆ ಸರ್ಕಾರದ ಗುರಿ
11.38: ನಾಲ್ಕು ಹೊಸ ಏಮ್ಸ್ ಕಾಲೇಜು ಸ್ಥಾಪನೆಗೆ 500 ಕೋಟಿ ರು ಮೀಸಲು

11.37: ಡೆಂಟಲ್ ಸೌಲಭ್ಯವುಳ್ಳ 12 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ.
11.36: ಎಲ್ಲಾ ಮನೆಗಳಿಗೂ ಶೌಚಾಲಯ ನಿರ್ಮಾಣ ನಮ್ಮ ಗುರಿ.
11.35: 3600 ಕೋಟಿ ರು ರಾಷ್ಟ್ರೀಯ ಕುಡಿಯುವ ನೀರು ಯೋಜನೆಗೆ ಮೀಸಲು.
11.34: 'Beti padhao, beti badhao yojana', ಯೋಜನೆಗಾಗಿ 100 ಕೋಟಿ ರು ಅನುದಾನ.
11.33: ಈ ಸಮಯಕ್ಕೆ ಸೆನ್ಸೆಕ್ಸ್ 150 ಅಂಶಗಳ ಕುಸಿತ ಕಂಡಿದೆ.

11.32: ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗಾಗಿ 14,389 ಕೋಟಿ ರು ಮೀಸಲು.

11.31: ಹಿಂದುಳಿದ ಜಾತಿ ಅಭಿವೃದ್ಧಿಗಾಗಿ 50,548 ಕೋಟಿ ರು ಮೀಸಲು.
11.30: ಇಪಿ ಯೋಜನೆಯಡಿಯಲ್ಲಿ ಚಂದಾದಾರರಿಗೆ 1000 ರು ಅನುದಾನ. 50 ಕೋಟಿ ರು ಮೀಸಲು

11.27: ಐಕ್ಯತಾ ಪ್ರತಿಮೆ ಸ್ಥಾಪನೆಗಾಗಿ ಗುಜರಾತ್ ಸರ್ಕಾರಕ್ಕೆ 200 ಕೋಟಿ ರು ಅನುದಾನ.

11.26: ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ 500 ಕೋಟಿ ರು

11.25: ಎಲ್ಲರ ಮನೆಗೂ ವಿದ್ಯುತ್ ನೀಡಲು ಸರ್ಕಾರ ಬದ್ಧ 2019ರ ಹೊತ್ತಿಗೆ ಗುರಿ ಈಡೇರಿಸುವ ಭರವಸೆ
11.24: ನೀರಾವರಿಗಾಗಿ ಪ್ರಧಾನಿ ಮಂತ್ರಿ ಕೃಷಿ ಸಿಂಚಯಿನ್ ಯೋಜನೆ ಘೋಷಣೆ.
11.22: ಸ್ಮಾರ್ಟ್ ಸಿಟಿ ಅಗತ್ಯದ ಬಗ್ಗೆ ಜೇಟ್ಲಿ:


11.21:
ಶೌಶಲ್ಯ ಭಾರತ, ಸ್ವಚ್ಛ ಭಾರತ್ ಅಭಿಯಾನ ಯೋಜನೆ ಘೋಷಿಸಿದ ಅರುಣ್ ಜೇಟ್ಲಿ
11.20: 100 ಸ್ಮಾರ್ಟ್ ಸಿಟಿ ಸ್ಥಾಪನೆಗೆ ಸುಮಾರು 7060 ಕೋಟಿ ರು
11.19:
ಹೊಸ ಯೂರಿಯಾ ನೀತಿಯನ್ನ ಜಾರಿಗೆ ತರುವ ಚಿಂತನೆ
11.18:
9 ನಗರಗಳಲ್ಲಿ ಇ ವೀಸಾ ಯೋಜನೆ ಜಾರಿಗೊಳಿಸಲಾಗುತ್ತದೆ.
11.17: ಮೋದಿ ಅವರ ಆಶಯದಂತೆ ಅನೇಕ ಸಣ್ಣ ಸಣ್ಣ ನಗರಗಳ ನಿರ್ಮಾಣಗಳನ್ನು ಹೊಂದಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತಗೊಳ್ಳಲಿದೆ.
11.16: ರಕ್ಷಣಾ ಇಲಾಖೆಯಲ್ಲಿ ಎಫ್ ಡಿಐ ಪ್ರಮಾಣ ಶೇ 26 ರಿಂದ 49ಕ್ಕೆ ಏರಿಕೆ ಭಾರತೀಯ ನಿಯಂತ್ರಣದ ಭರವಸೆ.
11.15: ಮುಂದಿನ ಮುರ್ನಾಲ್ಕು ವರ್ಷಗಳಲ್ಲಿ ಆರ್ಥಿಕ ಪ್ರಗತಿ ಶೇ 7 ರಿಂದ 8 ರಷ್ಟು ಏರಿಕೆ ಗುರಿ
11.13: ಎಲ್ಲಾ ರಾಜ್ಯಗಳಿಗೂ ಸಮಾನ ಅನುದಾನ ಹಾಗೂ ಅಭಿವೃದ್ಧಿ ಯೋಜನೆ ಘೋಷಣೆ.
11.12: ಸರಕು ಸಾಗಾಣೆ ಹಾಗೂ ಸೇವಾ ತೆರಿಗೆ ನಿಯಂತ್ರಣಕ್ಕೆ ಆದ್ಯತೆ.
11.10:
ಜಿಡಿಪಿ ಪ್ರಗತಿ ಬಗ್ಗೆ ಜೇಟ್ಲಿ ಹೇಳಿಕೆ:

11.09:
ಕಪ್ಪು ಹಣ ನಮ್ಮ ಆರ್ಥಿಕತೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಕಪ್ಪು ಹಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
11.04: ಬದಲಾವಣೆ ಬಯಸಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ ಪಥದತ್ತ ಭಾರತವನ್ನು ಮುನ್ನಡೆಸಬೇಕಿದೆ.
11.03: ಆಹಾರ ಹಾಗೂ ಹಣ ದುಬ್ಬರ ನಿಯಂತ್ರಣ ನಮ್ಮ ಮೊದಲ ಆದ್ಯತೆ
11.02: ಮೋದಿ ಅವರ ಆಶಯದಂತೆ ಸಬ್ ಕ ಸಾಥ್, ಸಬ್ ಕ ವಿಕಾಸ್ ಸಾಧಿಸುವುದು ನಮ್ಮ ಗುರಿ.
11.01:
ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಮೊದಲ ಬಾರಿಗೆ ಕೇಂದ್ರ ಬಜೆಟ್ ಭಾಷಣ ಅರಂಭ.
10.40:
ಬಜೆಟ್ ಕುರಿತ ಸಂಪುಟ ಸಭೆ ಮುಕ್ತಾಯ. ಜೇಟ್ಲಿ ಅವರ ಆಯವ್ಯಯ ಪತ್ರಕ್ಕೆ ಕ್ಯಾಬಿನೆಟ್ ನಿಂದ ಒಪ್ಪಿಗೆ.
10.30: ಕೇಂದ್ರ ಬಜೆಟ್ ಬಗ್ಗೆ ಮೋದಿ ಸಚಿವ ಸಂಪುಟ ಸಭೆ ಆರಂಭ. ಸದಸ್ಯರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಸಂಕ್ಷಿಪ್ತ ಮಾಹಿತಿ
10.20:
ಬಜೆಟ್ ಬಗ್ಗೆ ಉದ್ಯಮಿ ರಾಹುಲ್ ಬಜಾಜ್ ನಿರೀಕ್ಷೆ:

10.15: ಸಂಸತ್ತಿಗೆ ತಲುಪಿದ ಕೇಂದ್ರ ಬಜೆಟ್ ಪತ್ರ. 11 ಗಂಟೆಯಿಂದ ಬಜೆಟ್ ಮಂಡನೆ ಆರಂಭ
10.00: ಸಂಸತ್ ಪ್ರವೇಶಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಜತೆಗೆ ಸಹಾಯಕ ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ಸಚಿವಾಲಯದ ಇತರೆ ಅಧಿಕಾರಿಗಳಿದ್ದಾರೆ.
9.42: ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ ಈ ಬಜೆಟ್ ನ ಆದ್ಯತೆ: ಬಿಜೆಪಿ


9.40: ನಾರ್ಥ್ ಬ್ಲಾಕ್ ತೆರೆದು ಸಂಸತ್ತಿನತ್ತ ಅರುಣ್ ಜೇಟ್ಲಿ
9.15: ಚಿನ್ನದ ಮೇಲಿನ ಆಮದು ಸುಂಕ ಕಡಿತಗೊಳಿಸುವ ನಿರೀಕ್ಷೆಯಿದೆ.
9.00: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ವಿತ್ತ ಸಚಿವ ಅರುಣ್ ಜೇಟ್ಳಿ ಭೇಟಿ ಮಾಡಿದರು.

ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು. [ಅರುಣ್ ಜೇಟ್ಲಿ ಕೇಂದ್ರ ಬಜೆಟ್ ನಿರೀಕ್ಷೆಗಳೇನು?]

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು. ಜತೆಗೆ ಘೋಷಿತ ಜನೋಪಯೋಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬಹುದು. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪಡಿತರ ಸಬ್ಸಿಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು ಎಂಬ ನಿರೀಕ್ಷೆಯಿದೆ. [ಇಂದು ಬಜೆಟ್, ಆರ್ಥಿಕ ಸ್ಥಿತಿ ಪುನಶ್ವೇತನಕ್ಕೆ ಆದ್ಯತೆ]

English summary
Union Budget 2014-15 Live Coverage in Kannada : Union Budget being presented by Finance Minister, Arun Jailtely. Indian General Budget Highlights> Expectations are high as a BJP minister will be presenting the Budget after a gap of 10 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X