ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸದಲ್ಲಿ ಮೊದಲ ಬಾರಿಗೆ ಗಲ್ಲಿಗೆ ಮಹಿಳಾ ಹಂತಕಿಯರು

|
Google Oneindia Kannada News

ನವದೆಹಲಿ, ಆ 15: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸಹೋದರಿಯರಿಬ್ಬರನ್ನು ಗಲ್ಲಿಗೇರಿಸುವ ಸಿದ್ದತೆಗಳು ಆರಂಭವಾಗಿವೆ.

ಮಹಾರಾಷ್ಟ್ರ ಕೊಲ್ಹಾಪುರದ ರೇಣುಕಾ ಕಿರಣ್ ಶಿಂಧೆ ಮತ್ತು ಸೀಮಾ ಮೋಹನ್ ಗಾವತ್, ದೇಶದಲ್ಲಿ ಗಲ್ಲಿಗೇರಲಿರುವ ಮೊದಲ ಮಹಿಳೆಯರು ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ. (ಕ್ಷಮಾದಾನ ಅರ್ಜಿ ತಿರಸ್ಕೃತ: 6 ಜನರಿಗೆ ಮರಣದಂಡನೆ)

Two sisters from Maharashtra may become the first women hanged in India

2011ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಈ ಸಹೋದರಿಯರು ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಗೃಹ ಸಚಿವಾಲಯಕ್ಕೆ ಗಲ್ಲಿಗೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ಭವನ ಸೂಚಿಸಿದೆ.

ಸಹೋದರಿಯರ ಸಂಬಂಧ ಪಟ್ಟವರಿಗೆ ಈ ಬಗ್ಗೆ ಮಾಹಿತಿ ನೀಡುವ ಪ್ರಕ್ರಿಯೆಗೆ ಶನಿವಾರದ (ಆ16) ತನಕ ಕಾಲಾವಕಾಶವಿದ್ದು, ಶನಿವಾರದಂದು ಮಹಾರಾಷ್ಟ್ರ ಸರಕಾರ ಗಲ್ಲಿಗೇರಿಸುವ ದಿನಾಂಕ ಘೋಷಿಸುವ ಸಾಧ್ಯತೆಯಿದೆ.

ಏನಿದು ಘಟನೆ: ಕೊಲ್ಹಾಪುರದ ನರಹಂತಕ ಈ ಸಹೋದರಿಬರಿಬ್ಬರು ತಮ್ಮ ತಾಯಿಯ ಜೊತೆ ಸೇರಿ ಹದಿಮೂರು ಮಕ್ಕಳನ್ನು ಭಿಕ್ಷಾಟನೆಗೆ ದೂಡಿದ್ದರು.

ಹದಿಮೂರು ಮಕ್ಕಳ ಪೈಕಿ ಒಂಬತ್ತು ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಈ ನರಹಂತಕಿಯರ ವಿಚಾರಣೆ ನಡೆಸಿದ್ದ ಕೊಲ್ಹಾಪುರದ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿತ್ತು.

ಗಲ್ಲು ಶಿಕ್ಷೆ ಅನಗತ್ಯವಾಗಿ ವಿಳಂಬವಾದರೆ ಅಂಥ ಅಪರಾಧಿಗಳ ಶಿಕ್ಷೆಯನ್ನು ಜೀವಾವದಿ ಶಿಕ್ಷೆಗೆ ಇಳಿಸಬಹುದು ಎಂದು ಇತ್ತೀಚಿಗೆ ಸರ್ವೋಚ್ಚ ನ್ಯಾಯಲಯ ತೀರ್ಪು ನೀಡಿದೆ.

ಪುಣೆಯ ಯರವಾಡ ಜೈಲಿನಲ್ಲಿರುವ ಈ ಇಬ್ಬರು ಸಹೋದರಿಯರು ಈ ಶಿಕ್ಷೆಗೆ ಒಳಪಟ್ಟರೆ ಗಲ್ಲು ಶಿಕ್ಷೆಗೆ ಗುರಿಯಾಗುವ ಪ್ರಥಮ ಮಹಿಳೆಯರಾಗಲಿದ್ದಾರೆ.

English summary
Two sisters from Kolhapur, Maharashtra may become the first women hanged in India for kidnapping 13 children and killing nine of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X