ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು

By Mahesh
|
Google Oneindia Kannada News

ಬೆಂಗಳೂರು, ಜೂ.13: ಭಾರತದಲ್ಲಿ 700ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಪ್ರತಿಯೊಂದು ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಆದರೆ, ಯಾವ ವಿಶ್ವವಿದ್ಯಾಲಯ ಶ್ರೇಷ್ಠವಾಗಿದೆ? ಯಾವುದು ಉತ್ತಮ ಶ್ರೇಯಾಂಕ ಹೊಂದಿದೆ ಎಂಬ ಮಾಹಿತಿ ತಕ್ಷಣಕ್ಕೆ ಸಿಗುವುದಿಲ್ಲ. ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ 2014ರ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ನಿಮ್ಮ ಮುಂದಿದೆ.

ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡುವಾಗ ಉತ್ತಮ ಬೋಧಕ ವರ್ಗ, ಉತ್ತಮ ಮೂಲ ಸೌಕರ್ಯ ಹಾಗೂ ಕ್ಯಾಂಪಸ್ ಸಂದರ್ಶನ ಅವಕಾಶ ಮುಂತಾದ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಹೀಗೆ ಹತ್ತು ಹಲವು ವಿಷಯಗಳ ಮೇಲೆ ಗಮನ ಹರಿಸಿದ ನಂತರ ಒಂದು ಹಂತದ ನಿರ್ಧಾರ ಕೈಗೊಳ್ಳಲು ಸಾಧ್ಯ.

ಇದರ ಜೊತೆಗೆ ಪ್ರತಿವರ್ಷ ಕಾಲೇಜಿನ ಏಳಿಗೆ, ನೇಮಕಾತಿ ಹಾಗೂ ಇತರೆ ಗುಣಮಟ್ಟದ ಆಧಾರದ ಮೇಲೆ ವಿಶ್ವವಿದ್ಯಾಲಯದ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಹಲವು ಮ್ಯಾಗಜೀನ್ ಗಳು, ವಿಶ್ವವಿದ್ಯಾಲಯಗಳು ಕೂಡಾ ಸಂಶೋಧನೆ ನಡೆಸಿ ಭಾರತದ ಟಾಪ್ ಕಾಲೇಜುಗಳ ಪಟ್ಟಿ ತಯಾರಿಸಿ ಬಿಡುಗಡೆಗೊಳಿಸಲಾಗುತ್ತದೆ. [2013:ಕರ್ನಾಟಕದ ಟಾಪ್ ಇಂಜಿನಿಯರಿಂಗ್ ಕಾಲೇಜುಗಳು]

ಆದರೆ, ಎಲ್ಲಾ ರೀತಿಯಲ್ಲಿ ಸಲ್ಲಬಲ್ಲ ವಿವಿಗಳು ಬೆರಳೆಣಿಕೆಯಷ್ಟು ಮಾತ್ರ ನಮಗೆ ಸಿಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಸರ್ಕಾರಿ ಸ್ವಾಮ್ಯದ ಅಥವಾ ನೇರವಾಗಿ ಸರ್ಕಾರಿ ವಿಶ್ವ ವಿದ್ಯಾಲಯಗಳು ಎನ್ನಬಹುದಾದ ಹತ್ತು ಶ್ರೇಷ್ಠ ವಿಶ್ವವಿದಾಲಯಗಳು ನಿಮ್ಮ ಮುಂದಿದೆ ನೋಡಿ...

ಐಐಎಸ್ಸಿ ಬೆಂಗಳೂರು #1

ಐಐಎಸ್ಸಿ ಬೆಂಗಳೂರು #1

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್(ಐಐಎಸ್ಸಿ) ಉನ್ನತ ವೈಜ್ಞಾನಿಕ ಸಂಶೋಧನೆ ಹಾಗೂ ಅಭಿವೃದ್ಧಿ ಶಿಕ್ಷಣ ಸಂಸ್ಥೆಯಾಗಿದೆ.
* 1899 ರಲ್ಲಿ ಜಮ್ಶೇಟ್ಜಿ ಟಾಟಾ ಅವರಿಂದ ಸ್ಥಾಪಿತವಾಯಿತು.
* 1958 ರಿಂದ ಡೀಮ್ಡ್ ವಿವಿ ಪಟ್ಟ ಸಿಕ್ಕಿದೆ.
* 2005ರಿಂದ-ಈ ದಿನದ ತನಕ ಪಿ ಬಲರಾಮ್ ಅವರು ನಿರ್ದೇಶಕರಾಗಿದ್ದಾರೆ.
* ಸಂಶೋಧನೆ ಪಿಎಚ್ ಡಿ, ವಿಜ್ಞಾನ ಹಾಗೂ ಎಂಎಸ್ ಇಂಜಿನಿಯರಿಂಗ್ ಜತೆಗೆ ಎಂಇ, ಎಂ.ಟೆಕ್, ಎಂಬಿಎ, ಎಂಡಿಇಎಸ್ ಅಲ್ಲದೆ ಪದವಿ ಪೂರ್ವ ಕೋರ್ಸ್ ಗಳು ಲಭ್ಯ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಐಐಎಸ್ಸಿ ವೆಬ್ ತಾಣ

ಐಐಟಿ ಬಾಂಬೆ ಶ್ರೇಯಾಂಕ #2

ಐಐಟಿ ಬಾಂಬೆ ಶ್ರೇಯಾಂಕ #2

* ವಿದೇಶಿ ನೆರವು ಪಡೆದು ಸ್ಥಾಪಿತವಾದ ಮೊದಲ ವಿವಿ ಇದಾಗಿದೆ. 1958ರಲ್ಲಿ ಸ್ಥಾಪನೆ ಕಂಡಿದೆ.
* ಸುಮಾರು 17 ವಿಭಾಗಗಳು 13 ಕೇಂದ್ರಗಳನ್ನು ಮುಂಬೈನ ಪೊವೈನಲ್ಲಿ ಹೊಂದಿದೆ.
* ಇಂಜಿನಿಯರಿಂಗ್ ಶಿಕ್ಷಣ ಹಾಗೂ ಸಂಶೋಧನೆ ಅಲ್ಲದೆ ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ತತ್ತ್ವಶಾಸ್ತ್ರ,ಮ್ಯಾನೇಜ್ಮೆಂಟ್, ಮನಃಶಾಸ್ತ್ರ ವಿಷಯವನ್ನು ಅಭ್ಯಸಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಐಐಟಿ ಬಾಂಬೆ ವೆಬ್ ತಾಣ

ಐಐಟಿ ಖರಗಪುರ್, ಶ್ರೇಯಾಂಕ #3

ಐಐಟಿ ಖರಗಪುರ್, ಶ್ರೇಯಾಂಕ #3

* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗಪುರ್ 1951ರಲ್ಲಿ ಸ್ಥಾಪನೆಗೊಂಡಿದೆ.
* ಸುಮಾರು 2,100 ಎಕರೆ ವಿಸ್ತ್ರೀರ್ಣದ ಭೂಮಿ ಹೊಂದಿರುವ ವಿಶಾಲವಾದ ವಿವಿ ಸುಮಾರು 470 ಅಧಿಕ ಬೋಧಕ ವರ್ಗ, 2403ಕ್ಕೂ ಅಧಿಕ ಬೋಧಕೇತರ ವರ್ಗ ಸಿಬ್ಬಂದಿಗಳನ್ನು ಹೊಂದಿದೆ.
* ಬಿ.ಆರ್ಕ್, ಬಿ.ಟೆಕ್ ಅಲ್ಲದೆ ಎಂ.ಟೆಕ್, ಎಂಬಿಎ, ಎಂಎಚ್ ಆರ್ ಎಂ, ಮೆಡಿಕಲ್ ಸೈನ್ಸ್ ಅಂಡ್ ಟೆಕ್ನಾಲಜಿ, ಎಲ್ ಎಲ್ ಬಿ, ಸಿಟಿ ಪ್ಲ್ಯಾನಿಂಗ್ ಮುಂತಾದ ವಿಷಯಗಳನ್ನು ಅಭ್ಯಸಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ :ಐಐಟಿ ಖರಗಪುರ್ ವೆಬ್ ತಾಣ

ದೆಹಲಿ ವಿವಿ, ಶ್ರೇಯಾಂಕ #4

ದೆಹಲಿ ವಿವಿ, ಶ್ರೇಯಾಂಕ #4

* 1922ರಲ್ಲಿ ಸ್ಥಾಪಿತವಾದ ದೆಹಲಿ ವಿವಿ ಉನ್ನತ ಶಿಕ್ಷಣ ನೀಡುವ ಉತ್ತಮ ಗುಣಮಟ್ಟದ ವಿವಿ ಎನಿಸಿದೆ.
* ಕಲೆ, ವಿಜ್ಞಾನ, ಕಾನೂನು, ಸಮಾಜ ವಿಜ್ಞಾನ, ಮೆಡಿಕಲ್ ಸೈನ್ಸ್, ಮುಂತಾದ ವಿಷಯಗಳನ್ನು ಅಧ್ಯಯನ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ : http://www.du.ac.in/du/

ಮಿಕ್ಕ ವಿವಿಗಳ ವಿವರ ನಿರೀಕ್ಷಿಸಿ...
ಐಐಟಿ, ದೆಹಲಿ, ಶ್ರೇಯಾಂಕ #5

ಐಐಟಿ, ದೆಹಲಿ, ಶ್ರೇಯಾಂಕ #5

* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ 1961ರಲ್ಲಿ ಸ್ಥಾಪನೆಗೊಂಡಿದೆ.
* ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಟೆಕ್ಸ್ ಟೈಲ್ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಪದವಿ ಪೂರ್ವ ಕೋರ್ಸ್
* ಎಂ.ಟೆಕ್, ಎಂಬಿಎ, ಎಂ. Des ಕೋರ್ಸ್ ಗಳು ಲಭ್ಯ
* ವಿದ್ಯಾರ್ಥಿಗಳಿಗೆ 13ಕ್ಕೂ ಅಧಿಕ ಹಾಸ್ಟೆಲ್ ಗಳು, ವಿವಾಹಿತ ವಿದ್ಯಾರ್ಥಿಗಳಿಗೆ ಫ್ಲಾಟ್ ಸೌಲಭ್ಯವನ್ನು ಐಐಟಿ ನೀಡುತ್ತಿದೆ.
* ಹೆಚ್ಚಿನ ಮಾಹಿತಿಗೆ ಐಐಟಿ ದೆಹಲಿ ವೆಬ್ ತಾಣ

ಏಮ್ಸ್, ದೆಹಲಿ, ಶ್ರೇಯಾಂಕ #6

ಏಮ್ಸ್, ದೆಹಲಿ, ಶ್ರೇಯಾಂಕ #6

* ಆಲ್ ಇಂಡಿಯಾ ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ 1956ರಲ್ಲಿ ಸ್ಥಾಪನೆಗೊಂಡಿದೆ.
* ಹೆಚ್ಚಿನ ಮಾಹಿತಿಗೆ ಏಮ್ಸ್ ವೆಬ್ ತಾಣ http://www.aiims.edu/

ಪಂಜಾಬ್ ವಿವಿ, ದೆಹಲಿ, ಶ್ರೇಯಾಂಕ #7

ಪಂಜಾಬ್ ವಿವಿ, ದೆಹಲಿ, ಶ್ರೇಯಾಂಕ #7

* 1882ರಲ್ಲಿ ಸ್ಥಾಪನೆಗೊಂಡ ಭಾರತ ಪುರಾತನ ವಿವಿಗಳಲ್ಲಿ ಪಂಜಾಬ್ ವಿವಿ ಕೂಡಾ ಒಂದು.
* ಹೆಚ್ಚಿನ ಮಾಹಿತಿಗೆ ಪಂಜಾಬ್ ವಿವಿ ವೆಬ್ ತಾಣ http://puchd.ac.in/

ಜೆಎನ್ ಸಿಎಎಸ್ಆರ್, ಬೆಂಗಳೂರು, ಶ್ರೇಯಾಂಕ #8

ಜೆಎನ್ ಸಿಎಎಸ್ಆರ್, ಬೆಂಗಳೂರು, ಶ್ರೇಯಾಂಕ #8

ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈನಂಟಿಫಿಕ್ ರಿಸರ್ಚ್ (JNCASR) ಬೆಂಗಳೂರು ಉತ್ತರದಲ್ಲಿ ತನ್ನ ಕೇಂದ್ರ ಹೊಂದಿದೆ.
* ಜೆಎನ್ ಸಿಎಎಸ್ ಆರ್ ವೆಬ್ ತಾಣ http://www.jncasr.ac.in/

ಐಐಟಿ ಕಾನ್ಪುರ, ಶ್ರೇಯಾಂಕ #9

ಐಐಟಿ ಕಾನ್ಪುರ, ಶ್ರೇಯಾಂಕ #9

* ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ 1959ರಲ್ಲಿ ಸ್ಥಾಪನೆಗೊಂಡಿದೆ
* ಹೆಚ್ಚಿನ ಮಾಹಿತಿಗೆ : ಕಾನ್ಪುರ ಐಐಟಿ ವೆಬ್ ತಾಣhttp://www.iitk.ac.in/

ಐಐಟಿ,ಮದ್ರಾಸ್ ಶ್ರೇಯಾಂಕ #10

ಐಐಟಿ,ಮದ್ರಾಸ್ ಶ್ರೇಯಾಂಕ #10

ಚೆನ್ನೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ 1956 ರಲ್ಲಿ ಸ್ಥಾಪನೆಯಾಗಿದೆ.
* ಹೆಚ್ಚಿನ ಮಾಹಿತಿಗೆ :ಐಐಟಿ,ಮದ್ರಾಸ್ http://www.iitm.ac.in/

English summary
ndia has more than 700 universities, offering several undergraduate and postgraduate programmes. Are all of these universities good enough to pursue higher education? Here is the list of the top 10 public / government universities in India for the year 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X