ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಡ ಕುಸಿತ ಇನ್ನಿತರ ಚಿತ್ರ ಸುದ್ದಿಗಳು

By Ashwath
|
Google Oneindia Kannada News

ಚೆನ್ನೈ, ಜು. 6: ಒಂದು ವಾರಗಳ ಹಿಂದೆಯಷ್ಟೇ ಬಹುಮಹಡಿ ಕಟ್ಟಡ ಕುಸಿದು 61ಜನರು ಸಾವನ್ನಪ್ಪಿದ ಘಟನೆಯ ನೆನಪು ಹಸಿಯಾಗಿರುವಾಗಲೇ ತಮಿಳುನಾಡಿನಲ್ಲಿ ಮತ್ತೊಂದು ಕಟ್ಟಡವೊಂದು ಕುಸಿದು ಬಿದ್ದಿದೆ.

ನಿರ್ಮಾಣ ಹಂತದಲ್ಲಿದ್ದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಕುಸಿದ ಪರಿಣಾಮವಾಗಿ 11ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ದುರ್ಘಟನೆ ತಿರುವಳ್ಳೂರ್‌ ಜಿಲ್ಲೆಯ ಉತ್ತರಪಾಳ್ಯಂದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಮುಂದಿನ ಪುಟದಲ್ಲಿ ಪರಿಹಾರ ಕಾರ್ಯಾಚರಣೆಯ ಚಿತ್ರಗಳು ಜೊತೆಗೆ ಇಂದು ದೇಶದಲ್ಲಿ ನಡೆದ ಪ್ರಮುಖ ಘಟನೆಗಳ ಸುದ್ದಿಯನ್ನು ನೀಡಲಾಗಿದೆ.

ಮೃತಪಟ್ಟವರು ಆಂಧ್ರ ಮೂಲದವರು:

ಮೃತಪಟ್ಟವರು ಆಂಧ್ರ ಮೂಲದವರು:

ಮೃತಪಟ್ಟವರನ್ನು ಆಂಧ್ರಪ್ರದೇಶ ಮೂಲದ ಕಾರ್ಮಿಕರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಲವು ಮಂದಿಗೆ ಗಾಯಗಳಾಗಿದ್ದು, ಅವರೆಲ್ಲರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ.

 ಭಾರಿ ಮಳೆಗೆ ಕುಸಿದ ಕಟ್ಟಡ:

ಭಾರಿ ಮಳೆಗೆ ಕುಸಿದ ಕಟ್ಟಡ:

ಕಳೆದ ರಾತ್ರಿ ಈ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಕಟ್ಟಡದ ಗೋಡೆ ಕುಸಿದಿರುವ ಸಾಧ್ಯತೆಯಿದೆ. 11 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಒಂದು ಮಗು ಸೇರಿದೆ ಎಂದು ತಿರುವಳ್ಳೂರ್ ಜಿಲ್ಲಾ ಕಲೆಕ್ಟರ್ ಕೆ ವೀರ ರಾಘವ ರಾವ್ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ:

ಕಾಂಗ್ರೆಸ್‌ ಪ್ರತಿಭಟನೆ:

ಮಹಾರಾಷ್ಟ್ರದ ಕರಡದಲ್ಲಿ ಕಾಂಗ್ರೆಸ್‌ ಕಾರ್ಯ‌ಕರ್ತರು ಕೇಂದ್ರ ಸರ್ಕಾರ ಪೆಟ್ರೋಲ್‌ ದರವನ್ನು ಏರಿಸಿದ್ದನ್ನು ಖಂಡಿಸಿ ಸವಾರರು ರಸ್ತೆಯಲ್ಲಿ ಬೈಕ್‌‌ಗಳನ್ನು ತಳ್ಳಿಕೊಂಡು ಪ್ರತಿಭಟನೆ ನಡೆಸಿದರು.

 ಅಬ್ಬಾ ಭಾರತ ತಲುಪಿದೆ:

ಅಬ್ಬಾ ಭಾರತ ತಲುಪಿದೆ:

ಯುದ್ಧಪೀಡಿತ ಇರಾಕ್‌ನಲ್ಲಿ ಒಂದು ತಿಂಗಳು ಇದ್ದು ಭಾನುವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತದ ಪ್ರಜೆಗಳು.

 ಭಾರತ - ನೇಪಾಳ ಗಡಿ ಕಾಯುತ್ತಿರುವ ಸೈನಿಕರು:

ಭಾರತ - ನೇಪಾಳ ಗಡಿ ಕಾಯುತ್ತಿರುವ ಸೈನಿಕರು:

ಭಾರತ - ನೇಪಾಳದ ಗಡಿಯಾದ ಪಿಲ್ಲಾರ್‌ನಲ್ಲಿ ಎಸ್‌ಎಸ್‌ಬಿ(ಸಶಸ್ತ್ರ ಸೀಮಾ ಬಲ)ದ ಸೈನಿಕರು ಗಸ್ತು ನಡೆಸುತ್ತಿರುವುದು.

 ಶ್ಯಾಂ ಪ್ರಸಾದ್‌ ಮುಖರ್ಜಿ ಜನ್ಮ ವಾರ್ಷಿಕೋತ್ಸವ

ಶ್ಯಾಂ ಪ್ರಸಾದ್‌ ಮುಖರ್ಜಿ ಜನ್ಮ ವಾರ್ಷಿಕೋತ್ಸವ

ಜನಸಂಘ ಸಂಸ್ಥಾಪಕ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ, ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಬಿಜೆಪಿ ಮುಖಂಡ ಎಲ್‌‌.ಕೆ. ಅಡ್ವಾಣಿ ಮತ್ತಿತರರು ಪಾಲ್ಗೊಂಡಿದ್ದರು.

 ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಎಫ್‌ಡಿಐ:

ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಎಫ್‌ಡಿಐ:

ಕಂಪ್ಯೂಟರ್‌ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ 2013 ಏಪ್ರಿಲ್‌ನಿಂದ 2014 ಏಪ್ರಿಲ್‌ವರೆಗೆ ವಿದೇಶಿ ನೇರ ಹೂಡಿಕೆ ಪ್ರಮಾಣದ ಇನ್‌ಫೋಗ್ರಾಫಿಕ್‌ ಮಾಹಿತಿ

 ಉದ್ಯೋಗ ಸೂಚ್ಯಂಕ

ಉದ್ಯೋಗ ಸೂಚ್ಯಂಕ

2013 ಜೂನ್‌ನಿಂದ 2014 ಜೂನ್‌ವರೆಗಿನ ಉದ್ಯೋಗ ಸೂಚ್ಯಂಕ ಬೆಳವಣಿಗೆ

 ವಿಂಬಲ್ಡನ್ ರಾಣಿ ಪೆಟ್ರಾ ಕ್ವಿಟೋವಾ

ವಿಂಬಲ್ಡನ್ ರಾಣಿ ಪೆಟ್ರಾ ಕ್ವಿಟೋವಾ

ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 6-3, 6-0 ನೇರ ಸೆಟ್‌ಗಳಿಂದ ಕೆನಡಾದ ಯೂಗೆನಿ ಬುಚರ್ಡ್ ಅವರನ್ನು ಸುಲಭವಾಗಿ ಮಣಿಸಿ ಜೀವನದ ಎರಡನೇ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

English summary
Todays news stories in pics around the world: Thiruvallur: Rescue teams at the sight of compound wall collapse that occured after heavy rains lashed near Uttarapalayam in Thiruvallur district, Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X