ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ದೇಶ, ವಿದೇಶಗಳ ಸಂಕ್ಷಿಪ್ತ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಮೇ.12: ಪ್ರಸಕ್ತ ಸಾಲಿನ ಕೇದಾರನಾಥ ಯಾತ್ರೆಗೆ ಹಿಮಪಾತ ಅಡ್ಡಿಯಾಗಿದ್ದು, ಭಕ್ತಾದಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಪ್ರಧಾನ ಅರ್ಚಕರು ಕೋರಿಕೊಂಡಿದ್ದಾರೆ. ಅದರಂತೆ, ಚಾರ್ ಧಾಮ್ ಯಾತ್ರಾರ್ಥಿಗಳು ಸೋನ್ ಪ್ರಯಾಗದಲ್ಲೇ ನೆಲೆಸುವಂತೆ ನಿರ್ದೇಶಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರೀಂದರ್ಜಿತ್ ಸಿಂಗ್ ತಿಳಿಸಿದ್ದಾರೆ

ಕಳೆದ ವರ್ಷ ಪ್ರವಾಹಪೀಡಿತ ಪ್ರದೇಶಗಳು ಸೇರಿದಂತೆ ಕೇದಾರನಾಥ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಾರಿ ಹಿಮಪಾತವಾಗಿದೆ. ಚಾರ್ ಧಾಮ್ ಬದರಿನಾಥ, ಗಂಗೋತ್ರಿ, ಯಮುನೋತ್ರಿ ಹಾಗೂ ಕೇದರನಾಥ್ ಯಾತ್ರೆ ಮುಂದಿನ ಮೂರು ದಿನಗಳು ಸಾಧ್ಯವಿಲ್ಲ. ಗುಡುಗು ಸಹಿತ ಭಾರಿ ಮಳೆ ನಿರೀಕ್ಷಿಸಲಾಗಿದೆ. ಹಿಮಪಾತ ಕೂಡಾ ಸಂಭವಿಸುವ ಸಾಧ್ಯತೆ ಇರುವುದರಿಂದ ಯಾತ್ರಾರ್ಥಿಗಳು ಈಗ ನೆಲೆಸಿರುವ ತಾಣಗಳಲ್ಲೆ ನೆಲೆಸುವಂತೆ ಸೂಚಿಸಲಾಗಿದೆ.

ಆರು ತಿಂಗಳ ಚಳಿಗಾಲದ ಬಳಿಕ ಮೇ 4ರಂದು ಯಾತ್ರೆ ಆರಂಭವಾಗಿತ್ತು. ಖ್ಯಾತ ಹಿಂದುಸ್ತಾನಿ ಗಾಯಕ ಪಂ.ಜಸ್ರಾಜ್ ಕೇದಾರನಾಥದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಟೇಕಾಫ್ ಆಗಲಿಲ್ಲ. ಹೀಗಾಗಿ ಅವರು ಡೂನ್ ನಲ್ಲಿಯೇ ಉಳಿಯಬೇಕಾಯಿತು.ಉಳಿದಂತೆ, ಕ್ರೀಡಾ ಲೋಕ, ಫ್ಯಾಷನ್ ಜಗತ್ತಿನ ಕೆಲವು ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

 ಕೇದಾರನಾಥ ಯಾತ್ರೆಗೆ ಹಿಮಪಾತ ಅಡ್ಡಿ

ಕೇದಾರನಾಥ ಯಾತ್ರೆಗೆ ಹಿಮಪಾತ ಅಡ್ಡಿ

ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಬದರೀನಾಥ, ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥಕ್ಕೆ ತೆರಳುವ ದಾರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಲಿದೆ

ಮುಂಬೈನಲ್ಲಿ ನೀತು ಚಂದ್ರ ಬೆಕ್ಕಿನ ನಡಿಗೆ

ಮುಂಬೈನಲ್ಲಿ ನೀತು ಚಂದ್ರ ಬೆಕ್ಕಿನ ನಡಿಗೆ

ಮುಂಬೈನ ಫ್ಯಾಷನ್ ಶೋವೊಂದರಲ್ಲಿ ನಟಿ ನೀತು ಚಂದ್ರ ಬೆಕ್ಕಿನ ನಡಿಗೆ

ಕೇರಳದಲ್ಲಿ ಸೌದಿ ಅರೇಬಿಯಾ ಪ್ರಿನ್ಸ್

ಕೇರಳದಲ್ಲಿ ಸೌದಿ ಅರೇಬಿಯಾ ಪ್ರಿನ್ಸ್

ಕೇರಳದ ಗೃಹ ಸಚಿವ ರಮೇಶ್ ಚೆನ್ನಿಥಾಲ ಜತೆ ಸೌದಿ ಅರೇಬಿಯಾದ ಪ್ರಿನ್ಸ್ ಫೈಸಲ್ ಬಿನ್ ಮುಸಾಯಿದ್ ಬಿನ್ ಸೌದ್ ಬಿನ್ ಅಬ್ದುಲ್ ಅಜೀಜ್. ಜತೆಗೆ ಕೇರಳ ಕೈಗಾರಿಕಾ ಸಚಿವ ಪಿಕೆ ಕುಂಜಲಿಕ್ಕುಟಿ (ಪಿಟಿಐ ಚಿತ್ರ)

ಮುಂಬೈನಲ್ಲಿ ಮುಸ್ಲಿಮ್ ವಧುಗಳು

ಮುಂಬೈನಲ್ಲಿ ಮುಸ್ಲಿಮ್ ವಧುಗಳು

ಮುಂಬೈನಲ್ಲಿ 35 ಮುಸ್ಲಿಮ್ ವಧುಗಳು ಸಾಮೂಹಿಕ ವಿವಾಹ ಬಂಧನಕ್ಕೆ ಒಳಪಡಲು ಕಾದು ಕುಳಿತ್ತ್ತಿರುವ ಸಂದರ್ಭದಲ್ಲಿ ಬಾಲಕನೊಬ್ಬ ನಡುವೆ ಹಾದು ಹೋದ ದೃಶ್ಯ. PTI Photo

ಕಿಂಗ್ಸ್ ವಿರುದ್ಧ ನೈಟ್ ರೈಡರ್ಸ್ ಜಯ

ಕಿಂಗ್ಸ್ ವಿರುದ್ಧ ನೈಟ್ ರೈಡರ್ಸ್ ಜಯ

ಭಾನುವಾರ(ಮೇ.11) ನಡೆದ ಐಪಿಎಲ್ 7 ಪಂದ್ಯಾವಳಿಯಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ. ಕಿಂಗ್ಸ್ XI ಪಂಜಾಬ್ ಒಡತಿ ಪ್ರೀತಿ ಜಿಂಟಾ ಅವರು ಕೋಲ್ಕತ್ತಾ ತಂಡದ ನಾಯಕ ಗೌತಮ್ ಗಂಭೀರ್ ಅವರಿಗೆ ಟ್ರೋಫಿ ನೀಡುತ್ತಿದ್ದಾರೆ.

ಬ್ರಿಟಿಷ್ ಪ್ರಿಮಿಯರ್ ಲೀಗ್ ಗೆದ್ದ ಮ್ಯಾನ್ ಸಿಟಿ

ಬ್ರಿಟಿಷ್ ಪ್ರಿಮಿಯರ್ ಲೀಗ್ ಗೆದ್ದ ಮ್ಯಾನ್ ಸಿಟಿ

ಇಂಗ್ಲೀಷ್ ಪ್ರಿಮಿಯರ್ ಲೀಗ್ ಫುಟ್ಬಾಲ್ ಟೂರ್ನಿ ಗೆದ್ದ ಮ್ಯಾಂಚೆಸ್ಟರ್ ಸಿಟಿ ತಂಡದ ಸಂಭ್ರಮ.

English summary
Todays news stories in pics around the world: Snowfall has brought the ongoing Kedarnath yatra to a halt as the shrine's chief priest advised visitors to postpone the pilgrimage for at least a week to avoid any risk while travelling on the Himalayan track. and Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X