ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಹೀಗಿದೆ

By Mahesh
|
Google Oneindia Kannada News

ನವದೆಹಲಿ, ಮೇ.26: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮೇ.26ರಿಂದ ತನ್ನ ಅಧಿಕಾರ ಅವಧಿ ಆರಂಭಿಸಿದೆ. ಸೋಮವಾರ ಸಂಜೆ ಸುಮಾರು 4 ಸಾವಿರಕ್ಕೂ ಅಧಿಕ ಗಣ್ಯರ ಸಮ್ಮುಖದಲ್ಲಿ ಗುಜರಾತಿನ ಮಾಜಿ ಸಿಎಂ ನರೇಂದ್ರ ಮೋದಿ ಅವರು ದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೋದಿ ಅವರು ನಂತರ ಸಂಪುಟ ವಿಸ್ತರಿಸಿದ್ದು, ಕ್ಯಾಬಿನೆಟ್ ದರ್ಜೆಯ 24 ಮಂದಿ ಸಚಿವರು, 11 ಮಂದಿ ರಾಜ್ಯ ಖಾತೆ ಸಚಿವರು, 10 ಮಂದಿ ಸ್ವತಂತ್ರ ಖಾತೆಯ ಸಚಿವರಿಗೆ ಸ್ಥಾನ ಕಲ್ಪಿಸಿದ್ದಾರೆ. ಎನ್ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಏಳು ಮಂದಿ ಮಹಿಳೆಯರು ಇದ್ದಾರೆ.

ಕರ್ನಾಟಕದ ಮೂವರಿಗೆ ಸಚಿವ ಸ್ಥಾನ ದೊರೆತಿದ್ದು, ಪ್ರತಿಷ್ಟಿತ ರೈಲ್ವೇ ಖಾತೆ ಡಿ.ವಿ.ಸದಾನಂದಗೌಡ(ಒಕ್ಕಲಿಗ) ಅವರಿಗೆ ದೊರೆತಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತ್ ಕುಮಾರ್(ಬ್ರಾಹ್ಮಣ) ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಲಭಿಸಿದ್ದು, ರಾಜ್ಯ ಸಚಿವರಾಗಿ ಅಸಂಪುಟ ಸೇರಿರುವ ಜಿಎಂ ಸಿದ್ದೇಶ್ವರ್(ಲಿಂಗಾಯತ) ಅವರಿಗೆ ಖಾತೆ ಹಂಚಿಕೆಯಾಗಿಲ್ಲ. ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ವೆಂಕಯ್ಯ ನಾಯ್ಡು ಅವರಿಗೆ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ ಖಾತೆ ದೊರೆತಿದೆ. ಉಳಿದಂತೆ ಪ್ರಮುಖ ಖಾತೆಗಳನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದೆ.[ಮೋದಿ ಪದಗ್ರಹಣ ಅಪ್ಡೇಟ್]

This is Narendra Modi's Council of Ministers,

* ರಾಜನಾಥ್ ಸಿಂಗ್ : ಗೃಹ ಖಾತೆ
* ಸುಷ್ವಾ ಸ್ವರಾಜ್: ವಿದೇಶಾಂಗ ವ್ಯವಹಾರ ಖಾತೆ
* ಅರುಣ್ ಜೇಟ್ಲಿ : ಹಣಕಾಸು ಮತ್ತು ರಕ್ಷಣಾ ಖಾತೆ
* ರವಿಶಂಕರ್ ಪ್ರಸಾದ್ : ಕಾನೂನು ಮತ್ತು ದೂರಸಂಪರ್ಕ ಖಾತೆ
* ಅನಂತ್ ಕುಮಾರ್ : ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
* ಡಿ.ವಿ.ಸದಾನಂದಗೌಡ : ರೇಲ್ವೆ ಖಾತೆ
* ನಿತಿನ್ ಗಡ್ಕರಿ : ಸಾರಿಗೆ ಮತ್ತು ಬಂದರು ಖಾತೆ
* ವೆಂಕಯ್ಯ ನಾಯ್ಡು :ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ ಖಾತೆ
* ಮನೇಕಾ ಗಾಂಧಿ: ಮಹಿಳಾ ಮತ್ತು ಮಕ್ಕಳ ಖಾತೆ
* ಸ್ಮೃತಿ ಇರಾನಿ: ಮಾನವ ಸಂಪನ್ಮೂಲ ಖಾತೆ
* ನಜ್ಮಾ ಹೆಫ್ತುಲ್ಲಾ : ಅಲ್ಪ ಸಂಖ್ಯಾತ ಖಾತೆ
* ರಾಮ್ ವಿಲಾಸ್ ಪಾಸ್ವಾನ್ :ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಖಾತೆ
* ಅಶೋಕ್ ಗಜಪತಿ ರಾಜು: ನಾಗರೀಕ ವಿಮಾನಯಾನ ಖಾತೆ
* ಉಮಾ ಭಾರತಿ: ಜಲಸಂಪನ್ಮೂಲ ಖಾತೆ ಮತ್ತು ಗಂಗಾ ಸ್ವಚ್ಛತಾ ಇಲಾಖೆ
* ಗೋಪಿನಾಥ್ ಮುಂಡೆ: ಗ್ರಾಮೀಣಾಭಿವೃದ್ಧಿ ಖಾತೆ
* ಹರ್ಸಿಮ್ರಾತ್ ಕೌರ್ ಬಾದಲ್ : ಆಹಾರ ಸಂಸ್ಕರಣೆ ಖಾತೆ
* ನರೇಂದ್ರ ಸಿಂಗ್ ಟೋಮರ್ : ಉಕ್ಕು ಮತ್ತು ಗಣಿ ಖಾತೆ
* ರಾಧಾ ಮೋಹನ್ ಸಿಂಗ್: ಕೃಷಿ ಖಾತೆ
* ಥಾವರ್ ಸಿಂಗ್ ಗೆಹ್ಲೋಟ್ : ಸಾಮಾಜಿಕ ನ್ಯಾಯ
* ಡಾ.ಹರ್ಷವರ್ದನ್ : ಆರೋಗ್ಯ ಖಾತೆ
* ನಿರ್ಮಲಾ ಸೀತಾರಾಮನ್ : ವಾಣಿಜ್ಯ ಖಾತೆ
* ಕಲ್‌ರಾಜ್ ಮಿಶ್ರಾ : ಸಣ್ಣ ಕೈಗಾರಿಕಾ ಖಾತೆ
* ಜುವಾಲ್ ಒರಂ : ಬುಡಕಟ್ಟು ವ್ಯವಹಾರ ಖಾತೆ
* ಅನಂತ್ ಗೀತೆ : ಖಾತೆ ಹಂಚಿಕೆಯಾಗಿಲ್ಲ

ಸ್ವತಂತ್ರ ಖಾತೆ ಸಚಿವರು
* ಪ್ರಕಾಶ್ ಜಾವೇಡ್ಕರ್ :ವಾರ್ತಾ ಮತ್ತು ಪ್ರಸಾರ ಖಾತೆ, ಪರಿಸರ ಖಾತೆ
* ಪಿಯೂಶ್ ಗೋಯಲ್ :ಕಲ್ಲಿದ್ದಲು ಮತ್ತು ಇಂಧನ ಖಾತೆ
* ಧರ್ಮೇಂದ್ರ ಪ್ರಧಾನ್ : ಪೆಟ್ರೋಲಿಯಂ ಖಾತೆ
* ರಾವ್ ಇಂದ್ರಜೀತ್ ಸಿಂಗ್ :ಯೋಜನಾ ಆಯೋಗ

ಸ್ವತಂತ್ರ ಖಾತೆಯ ಸಚಿವರು : ಜ.ವಿ.ಕೆ.ಸಿಂಗ್, ಸಂತೋಷ್ ಕುಮಾರ್ ಗಂಗಾವರ್, ಶ್ರೀಪಾದ್ ನಾಯಕ್, ಸರಬಾನಂದ್ ಸೋನೋವಾಲ್, ಡಾ.ಜಿತೇಂದ್ರ ಸಿಂಗ್, ನಿರ್ಮಲಾ ಸೀತಾರಾಮನ್ .
ರಾಜ್ಯ ಖಾತೆ ಸಚಿವವರು : ಜಿ.ಎಂ.ಸಿದ್ದೇಶ್ವರ್, ಮನೋಜ್ ಸಿನ್ಹಾ, ನಿಹಾಲ್ ಚಂದ್, ಉಪೇಂದ್ರ ಕುಶ್‌ವಾಹ್, ಪಿ.ರಾಧಾಕೃಷ್ಣನ್, ಕಿರಣ್ ರಿಜಿಜು, ಕೃಷ್ಣಪಾಲ್ ಗುಜ್ಜರ್, ಡಾ.ಸಂಜೀವ್ ಕುಮಾರ್ ಬಾಲಿಯಾ ಇವರಿಗೆ ಖಾತೆ ಹಂಚಿಕೆಯಾಗಿಲ್ಲ

English summary
Narendra Modi was today(May.26,2014) sworn in as the 15th Prime Minister of India. A 45-member council of ministers also took oath, making it the leanest ever. Which included 24 cabinet, 11 MoS, 10 independent minister, Karnataka got share of 3 cabinet and 1 MoS in the Modi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X