ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಹೆಲ್ಕಾ ತೇಜಪಾಲ್ ರೇಪಿಸ್ಟ್: ಆರೋಪಪಟ್ಟಿ ಸಲ್ಲಿಕೆ

By Mahesh
|
Google Oneindia Kannada News

ಪಣಜಿ, ಫೆ.17: ತೆಹೆಲ್ಕಾ ಸಂಸ್ಥೆಯ ಸಹದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ತೆಹಲ್ಕಾ ಪತ್ರಿಕೆಯ ಸ್ಥಾಪಕ, ಮಾಜಿ ಸಂಪಾದಕ ತರುಣ್ ತೇಜಪಾಲ್ ವಿರುದ್ಧ ಗೋವಾ ಪೊಲೀಸರು ಸೋಮವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಗೋವಾದ ಪೊಲೀಸರು ಪಣಜಿ ಸೆಷನ್ಸ್ ಕೋರ್ಟ್ ನಲ್ಲಿ ಸೋಮವಾರ ಮಧ್ಯಾಹ್ನ ಆರೋಪ ಪಟ್ಟಿ ಸಲ್ಲಿದ್ದಾರೆ. ಆರೋಪ ಪಟ್ಟಿಯಲ್ಲಿ ಅತ್ಯಾಚಾರ ಎಸಗಿದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಗೋವಾದ ಗ್ರ್ಯಾಂಡ್ ಹಯಾತ್ ಪಂಚತಾರ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ತೆಹಲ್ಕಾ ಪತ್ರಿಕೆಯ ಕಾರ್ಯಕ್ರಮದ ವೇಳೆ ಕಿರಿಯ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಳೆದ ನವೆಂಬರ್ 30ರಂದು ತೇಜ್ಪಾಲ್‌ರನ್ನು ಗೋವಾ ಪೊಲೀಸರು ಬಂಧಿಸಿದ್ದರು.

ತೆಹೆಲ್ಕಾ ಸಂಸ್ಥೆಯ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾಗಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ತೇಜಪಾಲ್ ಅವರ ಪುರುಷತ್ವ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಜತೆ ಇನ್ನೆರಡು ಪ್ರಕರಣಗಳಲ್ಲಿ ಫೇಲ್ ಆಗಿದ್ದಾರೆ. ಹೌದು ತೇಜಪಾಲ್ ಮೇಲೆ ಮತ್ತೆರಡು ಪ್ರಕರಣ ದಾಖಲಾಗಿತ್ತು.

Tehelka founder Tarun Tejpal charged with rape by Goa Police

ತೇಜ್ ಪಾಲ್ ವಿರುದ್ಧ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಗೆ ಸೆಕ್ಷನ್ 341(ಅಕ್ರಮ ತಡೆ) ಹಾಗೂ ಸೆಕ್ಷನ್ 342(ಅಕ್ರಮ ಬಂಧನ) ಎಂಬ ಭಾರತ ದಂಡ ಸಂಹಿತೆಯ ಹೆಚ್ಚುವರಿ ಎರಡು ಪರಿಚ್ಛೇದಗಳನ್ನು ಸೇರಿಸಲಾಗಿದೆ ಎಂದು ಗೋವಾ ಪೊಲೀಸ್ ಮೂಲಗಳು ತಿಳಿಸಿವೆ. ಸಂತ್ರಸ್ತೆಯ ಹೇಳಿಕೆ, ಸಾಕ್ಷಿ ಹಾಗೂ ಪ್ರಕರಣ ನಡೆದಿದೆ ಎಂದು ಹೇಳಲಾಗಿರುವ ಹಯಾತ್ ಹೊಟೇಲ್ ನ ಸಿಸಿಟಿವಿ ವೀಡಿಯೊ ತುಣುಕುಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚುವರಿ ಸೆಕ್ಷನ್ ‌ಗಳನ್ನು ತೇಜ್ ಪಾಲ್ ವಿರುದ್ಧ ಪ್ರಯೋಗಿಸಲಾಗಿದೆ ಎಂದು ತೇಜ್ ಪಾಲ್ ರನ್ನು ತನಿಖೆ ನಡೆಸುತ್ತಿರುವ 45 ವರ್ಷದ ಸುನೀತಾ ಸಾವಂತ್ ಎಂಬ ಖಡಕ್ ಮಹಿಳಾ ಆಧಿಕಾರಿ ಹೇಳಿದ್ದರು

ತೆಹಲ್ಕಾದ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ಸಹೋದ್ಯೋಗಿ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದಲ್ಲಿ ಸಂಸ್ಥೆಯ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿಯನ್ನು ಗೋವಾ ಕ್ರೈಂ ಬ್ರಾಂಚ್ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

English summary
Former Tehelka Chief Tarun Tejpal's worst nightmare has come true as the Goa police on Monday charged him with rape of a female colleague.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X