ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿ ಅನೈತಿಕ ಸಂಬಂಧ: ಹಸುಗೂಸು, ಅಜ್ಜಿ ಹತ್ಯೆ

By Srinath
|
Google Oneindia Kannada News

ತಿರುವನಂತಪುರಂ, ಏ.18: ಮೂರೂವರೆ ವರ್ಷದ ಬಾಲಕಿ ಮತ್ತು ಆ ಮಗುವಿನ ಅಜ್ಜಿಯನ್ನು ಟೆಕ್ಕಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ತಿರುವನಂತಪುರದಿಂದ 37 ಕಿಮೀ ದೂರದಲ್ಲಿರುವ ಅತ್ತಿಂಗಳ್ ಬಳಿಯಿರುವ ಅಲಂಕೋಡ್ ಸಮೀಪ ಬುಧವಾರ ಈ ಹತ್ಯೆಗಳು ನಡೆದಿವೆ.

ಅನೈತಿಕ ಸಂಬಂಧ ಹೊಂದಿದ ಟೆಕ್ಕಿ ಮಹಿಳೆಯೊಬ್ಬಳು ತನ್ನ ಟೆಕ್ಕಿ ಪ್ರಿಯಕರನ ಸಹಾಯದಿಂದ ಈ ಹೇಯ ಹತ್ಯೆಗಳನ್ನು ಮಾಡಿಸಿದ್ದಾಳೆ. ಅನು ಶಾಂತಿ (30) ಆರೋಪಿ ಮಹಿಳೆ. ಘಟನೆಯಲ್ಲಿ ಅನು ಶಾಂತಿಯ ಗಂಡ ಲಿಜೀಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆತನಿಗೂ ಗಂಭೀರ ಗಾಯಗಳಾಗಿವೆ. ಲಿಜೀಶ್ ರಾಜ್ಯ ವಿದ್ಯುತ್ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್.

ಪೊಲೀಸರು ಈ ಅನು ಶಾಂತಿ ಹಾಗೂ ಕೊಲೆ ಆರೋಪಿ ನಿನೋ ಮ್ಯಾಥ್ಯೂನನ್ನು ಬಂಧಿಸಿದ್ಧಾರೆ. ಮೃತಪಟ್ಟವರು ಸ್ವಸ್ತಿಕಾ ಮತ್ತು ಲಿಜೀಶ್ ತಾಯಿ 60 ವರ್ಷದ ಒಮಾನಾ. (ಚಿತ್ರದಲ್ಲಿ ಲಿಜೀಶ್, ಅನು ಶಾಂತಿ ಮತ್ತು ಮೃತ ಸ್ವಸ್ತಿಕಾ)

techie-mathew-illicit-affair-leads-to-murder-of-child-grandmother
ಅರೋಪಿಗಳಾದ ಅನು ಶಾಂತಿ ಮತ್ತು ನಿನೋ ಮ್ಯಾಥ್ಯೂ ಇಬ್ಬರೂ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಗಂಡನ ಮನೆಯವರೆಲ್ಲವರನ್ನ ಮುಗಿಸಿ ತನ್ನ ಪ್ರಿಯಕರನೊಂದಿಗೆ ಸಂಸಾರ ಹೂಡಲು ಅನು ಶಾಂತಿ ಚಿತಾವಣೆ ನಡೆಸಿದ್ದಳು.

ಸ್ವಸ್ತಿಕಾ ಮತ್ತು ಒಮಾನಾ ಇಬ್ಬರೇ ಮನೆಯಲ್ಲಿದ್ದಾಗ ನಿನೋ ಮ್ಯಾಥ್ಯೂ ಅವರನ್ನು ಹತ್ಯೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತನ್ನ ಮೇಲೆ ಅನುಮಾನ ಬರಬಾರದೆಂದು ಶಾಂತಿ ತನ್ನ ಕಚೇರಿಯಲ್ಲೇ ಕೆಲಸದಲ್ಲಿ ತೊಡಗಿದ್ದಳು. ಹತ್ಯೆಯ ನಂತರ ಮನೆಗೆ ಬಂದ ಶಾಂತಿಯ ಪತಿ ಲಿಜೀಶ್ ಮೇಲೆ ಮುಂಬಾಗಿಲ ಹಿಂದೆ ಬಚ್ಚಿಟ್ಟುಕೊಂಡಿದ್ದ ಮ್ಯಾಥ್ಯೂ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಲಿಜೀಶ್ ಜೋರಾಗಿ ಕೂಗಿಕೊಂಡಿದ್ದರಿಂದ ಮ್ಯಾಥ್ಯೂ ಪರಾರಿಯಾಗಿದ್ದಾನೆ.

ಲಿಜೀಶ್ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಆತನ ನೆರವಿಗೆ ಧಾವಿಸಿದ್ದಾರೆ. ಆಗ ಅಡುಗೆ ಮನೆಯೊಳಗೆ ಅಜ್ಜಿ ಮತ್ತು ಮೊಮ್ಮಗಳು ಇನ್ನೂ ಜೀವಂತವಾಗಿದ್ದರಂತೆ. ಆದರೆ ಕೆಲ ಹೊತ್ತಿನಲ್ಲೇ ಅಸುನೀಗಿದ್ದಾರೆ. ಈ ಮಧ್ಯೆ ನೆರೆಮನೆಯವರು ಲಿಜೀಶ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಮಾರ್ಗ ಮಧ್ಯೆ ಲಿಜೀಶ್ ಹಂತಕನ ಬಗ್ಗೆ ಸುಳಿವು ನೀಡಿದ್ದಾನೆ. ಆ ಮಾಹಿತಿ ಪೊಲೀಸರ ಕಿವಿಗೆ ಬೀಳುತ್ತಿದ್ದಂತೆ ಪೊಲೀಸರು ಸೀದಾ ಮ್ಯಾಥ್ಯೂ ಮನೆಗೆ ತೆರಳಿ ಅವನನ್ನು ಬಂಧಿಸಿದ್ದಾರೆ.

ಹೆಚ್ಚಿನ ವಿಚಾರಣೆಯ ನಂತರ ಮ್ಯಾಥ್ಯೂ ಹತ್ಯೆಯಲ್ಲಿ ಅನು ಶಾಂತಿ ಸಹ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಅದರಂತೆ ಪೊಲೀಸರು ಶಾಂತಿಯನ್ನು ಸಹ ಬಂಧಿಸಿದ್ದಾರೆ. ಮ್ಯಾಥ್ಯೂ ಮತ್ತು ಶಾಂತಿ ಒಂದೇ ಕಂಪನಿಯಲ್ಲಿ ಟೆಕ್ಕಿಗಳು. ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಮ್ಯಾಥ್ಯೂಗೆ ಮದುವೆಯಾಗಿದ್ದು, ನಾಲ್ಕು ವರ್ಷದ ಮಗು ಸಹ ಇದೆ.

ಮ್ಯಾಥ್ಯೂನ ಹೆಂಡತಿ ಕೂಡ ಟೆಕ್ಕಿ. ಆದರೆ ಆಕೆಯ ಜತೆ ಮ್ಯಾಥ್ಯೂ ಸಂಬಂಧ ಹಳಸಿತ್ತು. ಶಾಂತಿ ಜತೆ ಮ್ಯಾಥ್ಯೂಗೆ ಅಕ್ರಮ ಸಂಬಂಧವಿರುವುದು ಗೊತ್ತಾದ ಬಳಿಕ ನಿನೋ ಮ್ಯಾಥ್ಯೂ ಸಂಸಾರದಲ್ಲಿ ಇನ್ನಷ್ಟು ಬಿರುಕು ಮೂಡಿತ್ತು. ಅವರಿಬ್ಬರೂ ಒಂದೇ ಕಟ್ಟಡದಲ್ಲಿದ್ದರೂ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು.

ಇನ್ನು ಶಾಂತಿ ಅದೇ ಕಂಪನಿಯಲ್ಲಿ ಟೀಂ ಲೀಡರ್. ಮೃತ ಅಜ್ಜಿ ಒಮಾನಾ ತಾಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದು, ನಿವೃತ್ತಿ ಹೊಂದಿದ್ದರು. ಒಮಾನಾ ಪತಿ ಅಂದರೆ ಲಿಜೀಶ್ ತಂದೆ ತಂಗಪ್ಪನ್ ಆಹಾರ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದವರು. ಹತ್ಯೆಗಳು ನಡೆದಾಗ ತಂಗಪ್ಪನ್ ಸಹ ಮನೆಯಲ್ಲಿರಲಿಲ್ಲ. ಒಮಾನಾ ಮತ್ತು ತಂಗಪ್ಪನ್ ದಂಪತಿಗೆ ಇನ್ನೂ ಒಬ್ಬ ಕಿರಿಯ ಪುತ್ರನಿದ್ದು, ಆತ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸದಲ್ಲಿದ್ದಾನೆ.

ಸ್ವಸ್ತಿಕಾ, ಒಮಾನಾ ಮತ್ತು ಲಿಜೀಶ್ - ಮೂವರನ್ನೂ ಹತ್ಯೆ ಮಾಡಿ ಹೊಸ ಸಂಸಾರ ಹೂಡಲು ಪ್ಲಾನ್ ಮಾಡಿದ್ದೆವು. ಹತ್ಯೆಗಳ ಬಗ್ಗೆ ಎಂಬ ಅನುಮಾನ ಬರಕೂಡದೆಂದು ಮರ್ಡರ್ ಫಾ್ ಗೇನ್ ಎಂದು ನಿರೂಪಿಸಲು ಸ್ವಸ್ತಿಕಾ ಮತ್ತು ಒಮಾನಾ ಮೈಮೇಲಿದ್ದ ಒಡವೆಗಳನ್ನ ತೆಗೆದುಕೊಂಡುಹೋಗಿದ್ದೆ. ಆದರೆ, ಲಿಜೀಶ್ ಪ್ರಾಣಾಪಾಯದಿಂದ ಪಾರಾಗಿದ್ದು ಎಲ್ಲಾ ಯೋಜನೆಗಳು ತಲೆಕೆಳಗಾದವು ಎಂದು ಹತ್ಯೆ ಆರೋಪಿ ಮ್ಯಾಥ್ಯೂ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.

English summary
Thiruvananthapuram techie Mathew's illicit affair leads to murder of child grandmother. A girl child and her grandmother were hacked to death by an IT professional some 37 km from here, on Wednesday morning. The deceased were Swastika and her paternal grandmother Omana (60). Omana's son and Swastika's father Lijeesh was also badly injured in the attack. The accused, identified as Nino Mathew is learnt to be having an illicit relationship with Anu Santhi wife of Lijeesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X