ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ’ಅಮ್ಮ’ ಹೆಸರಿನಲ್ಲಿ ಮಗದೊಂದು

|
Google Oneindia Kannada News

ಚೆನ್ನೈ, ಜೂ 27: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಹೆಸರಿನಲ್ಲಿ 'ಅಮ್ಮ ಫಾರ್ಮಸಿ' ಎನ್ನುವ ಔಷಧಾಲಯ ಮಳಿಗೆಗಳು ಆರಂಭಗೊಂಡಿದೆ. ಮುಖ್ಯಮಂತ್ರಿ ಜಯಾ ಈ ಮಳಿಗೆಗಳಿಗೆ ಗುರುವಾರ (ಜೂ 26) ಚಾಲನೆ ನೀಡಿದ್ದಾರೆ.

ಅಮ್ಮ ಕ್ಯಾಂಟೀನ್, ಅಮ್ಮ ಉಪ್ಪು, ಅಮ್ಮ ನೀರು, ಅಮ್ಮ ಟೀ, ಅಮ್ಮ ವಸತಿ ಯೋಜನೆಯ ನಂತರ ಜಯಾ ಸರಕಾರದ ಈ 'ಅಮ್ಮ ಫಾರ್ಮಸಿ' ಯೋಜನೆ ಅಡಿಯಲ್ಲಿ ಸುಮಾರು 210 ಔಷಧಾಲಯ ಮಳಿಗೆಗಳಿರುತ್ತದೆ. (ಹಿಂದಿ ಬಳಕೆ ವಿರೋಧಿಸಿ ಪ್ರಧಾನಿಗೆ ಜಯಾ ಪತ್ರ)

Tami Nadu CM Jayalalithaa launches Amma Pharmacy

ಈ ಎಲ್ಲಾ ಮಳಿಗೆಗಳಲ್ಲಿ ಶೇ. ಹತ್ತರಷ್ಟು ರಿಯಾಯತಿ ದರದಲ್ಲಿ ಔಷಧಗಳನ್ನು ವಿತರಿಸಲು ಜಯಾ ಸರಕಾರ ನಿರ್ಧರಿಸಿದೆ. ಸರಕಾರೀ ಸ್ವಾಮ್ಯದ ಸಹಕಾರ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಮಳಿಗೆಗಳಿಗೆ 'ಅಮ್ಮ ಫಾರ್ಮಸಿ' ಎಂದು ಮರುನಾಮಕರಣ ಮಾಡಲಾಗಿದೆ.

ತಮಿಳುನಾಡಿನ ಏಳು ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧಗಳು ಸಿಗುವಂತಾಗ ಬೇಕೆನ್ನುವುವು ನಮ್ಮ ಬಯಕೆ ಎಂದು ಜಯಲಲಿತಾ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂತಹ ಔಷಧಾಲಯ ಮಳಿಗೆ ತೆರೆಯುವ ಗುರಿಯನ್ನು ಹೊಂದಿದ್ದೇವೆ. ಇದರಿಂದ ಬಡವರಿಗೆ ತುಂಬಾ ಉಪಕಾರವಾಗಲಿದೆ ಎಂದು ಜಯಾ ಅಭಿಪ್ರಾಯ ಪಟ್ಟಿದ್ದಾರೆ.

English summary
Tami Nadu Chief Minister Jayalalithaa launches Amma Pharmacy in state, which will sell medicines at subsidized prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X