ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾಗೆ ಅಪಶಕುನದ ಮುನ್ಸೂಚನೆ ನೀಡಿದ್ದ ಆನೆ

|
Google Oneindia Kannada News

ಚೆನ್ನೈ, ಸೆ 27: ಅಕ್ರಮ ಆಸ್ತಿಗಳಿಗೆ ಆರೋಪದಡಿ 'ಆರೋಪಿ' ಸ್ಥಾನದಲ್ಲಿರುವ ಮೇಲುಕೋಟೆ ಮೂಲದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಆನೆಯೆಂದರೆ ಬಹಳ ಪ್ರೀತಿ.

ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮತ್ತು ಉಡುಪಿಯ ಕೊಲ್ಲೂರು ಮೂಕಾಂಬಿಕ ದೇವಾಲಯಕ್ಕೂ ಆನೆಯನ್ನು ಈ ಹಿಂದೆ ದಾನವಾಗಿ ನೀಡಿದ್ದ ಜಯಲಲಿತಾಗೆ ವರ್ಷಗಳ ಹಿಂದೆಯೇ ಆನೆಯೊಂದು ಅಪಶಕುನದ ಮುನ್ಸೂಚನೆ ನೀಡಿತ್ತು ಎನ್ನುವ ವಿಚಾರವೂ ಈಗ ಚರ್ಚೆಯಲ್ಲಿರುವ ವಿಷಯ.

Tamil Nadu CM escaped from elephant attack, a bad time ahead for Jayalalithaa

ಕಳೆದ ವರ್ಷ ಜುಲೈ ತಿಂಗಳಲ್ಲಿ ವಿಶ್ರಾಂತಿಗಾಗಿ ಜಯಲಲಿತಾ ನೀಲಗಿರೀಶ್ ತಪ್ಪಲಲ್ಲಿರುವ ಮಧುಮಲೈ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾಗ ಈ ಅಪಶಕುನ ಎದುರಾಗಿತ್ತು. (ಜಯಲಲಿತಾಗೆ ಜೈಲುː ಬೆಂಗಳೂರಲ್ಲಿ ಏನಾಗ್ತಿದೆ)

ಅಂದು ಜಯಾ, ಮರಿ ಆನೆಯೊಂದಕ್ಕೆ ಹಣ್ಣು ಹಂಪಲು ನೀಡಲು ಬಂದಾಗ ಆನೆ ಅದನ್ನು ಸ್ವೀಕರಿಸಲು ಕೇಳದೇ ಸೊಂಡಿಲಿನಿಂದ ದೂರತಳ್ಳಿತ್ತು. ಅಲ್ಲದೇ ಜಯಾ ಮೇಲೆ ದಾಳಿಗೆ ಮುಂದಾಗಿತ್ತು.

ಈ ಮರಿ ಆನೆಯನ್ನು ಜಯಲಲಿತಾ ಶ್ರೀರಂಗಂ ದೇವಾಲಯಕ್ಕೆ ದಾನವಾಗಿ ನೀಡಿದ್ದರು ಎನ್ನುವುದು ವಿಶೇಷ. ಈ ಆನೆಯನ್ನು ತರಬೇತಿಗಾಗಿ ಈ ಅಭಯಾರಣ್ಯಕ್ಕೆ ಕರೆತರಲಾಗಿತ್ತು.

ಶ್ರೀರಂಗಂ ದೇವಾಲಯದ ರಂಗನಾಥಸ್ವಾಮಿ ಜಯಲಲಿತಾ ಅವರ ಮನೆದೇವರು. ಹಾಗಾಗಿ, ಶ್ರೀರಂಗಂ ದೇವಾಲಯದ ಆನೆಯ ಮೂಲಕ ದೇವರು ಜಯಲಲಿತಾ ಅವರಿಗೆ ಅಪಶಕುನದ ಮುನ್ಸೂಚನೆ ನೀಡಿದ್ದರೆಂದೇ ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆವಾಗುತ್ತಿದೆ.

English summary
Tamil Nadu CM escaped from elephant attack, a indication of a bad time ahead for Jayalalithaa?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X