ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾವೇಶಗಳ ನಡುವೆ ಹಿಂದೂ ಮುಸ್ಲಿಂ ಐಕ್ಯತೆ

By Mahesh
|
Google Oneindia Kannada News

ಭೋಪಾಲ್(ಮ.ಪ್ರ), ಫೆ.24: ಭಾನುವಾರ ಮೂರು ಸಮಾವೇಶಗಳು ಎಲ್ಲೆಡೆ ಭಾರಿ ಸುದ್ದಿಯಾಯಿತು. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಫತೇಹ್' ಸಮಾವೇಶ, ರಾಹುಲ್ ಗಾಂಧಿ ಅವರ ಡೆಹ್ರಾಡೂನ್ ಸಮಾವೇಶ ಹಾಗೂ ಚುನಾವಣಾ ಪ್ರಚಾರ ಆರಂಭಿಸಿದ ಕೇಜ್ರಿವಾಲ್ ಸಮಾವೇಶ ನಡುವೆ ಗಮನ ಸೆಳೆದಿದ್ದು ಮಧ್ಯಪ್ರದೇಶದ ಆರೆಸ್ಸೆಸ್ ಪಥ ಸಂಚಲನ.

ಮೇಲ್ಕಂಡ ಮೂವರು ನಾಯಕರು ಚುನಾವಣೆ ಹಿತದೃಷ್ಟಿಯಿಂದ ಪರಸ್ಪರ ವಾಗ್ದಾಳಿ ನಡೆಸುವ ಸಮಯದಲ್ಲಿ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಸಿಕ್ಕಿತು.

ಭೋಪಾಲ್ ನಲ್ಲಿ ನಡೆದ ಹಿಂದೂ ಪರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮೂರು ದಿನಗಳ ಮಹಾ ಬೈಠಕ್ ಆರಂಭವಾದ ಹಿನ್ನೆಲೆಯಲ್ಲಿ ಗಣವೇಷಧಾರಿಗಳಾದ ಆರೆಸ್ಸೆಸ್ ಕಾರ್ಯಕರ್ತರು ಪಥಸಂಚಲನ ನಡೆಸಿದರು.

ಸಾಲು ಸಾಲಾಗಿ ಬರುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹೂ ಎರಚಿದ ಮುಸ್ಲಿಂ ಬಾಂಧವರು ಭರ್ಜರಿ ಸ್ವಾಗತ ಕೋರಿದರು. ಈ ದೃಶ್ಯ ನಗರ ಅನೇಕ ಪ್ರಮುಖ ಬೀದಿಗಳಲ್ಲಿ ಪುನರಾವರ್ತನೆಯಾಗಿದ್ದು ವಿಶೇಷ. ಒಟ್ಟಾರೆ ಭೋಪಾಲ್ ಸಮಾವೇಶದ ಚಿತ್ರ ರವಿವಾರದ ಸಮಾವೇಶದ ಚಿತ್ರಗಳ ಪೈಕಿ ಟಾಪ್ ಎನಿಸಿದೆ. ತಪ್ಪದೇ ನೋಡಿ...

ಪಂಜಾಬಿನಲ್ಲಿ ನರೇಂದ್ರ ಮೋದಿ ಸಮಾವೇಶ

ಪಂಜಾಬಿನಲ್ಲಿ ನರೇಂದ್ರ ಮೋದಿ ಸಮಾವೇಶ

ಜಗ್ರಾಂವ್ ನಲ್ಲಿ ನಡೆದ ಪತೇಹ್ ಸಮಾವೇಶದಲ್ಲಿ ನಾನು ದೇಶದ ಕಾವಲುಗಾರ ಎಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಕಾಂಗ್ರೆಸ್ ಅಧಿಕಾರ ಅವಧಿಯ ಹಗರಣಗಳ ಪಟ್ಟಿ ನೀಡಿದರು.

* ಎಲ್ಲೆಡೆ ಹರಿದಾಡುವ ಜೋಕು ಮತ್ತೆ ರಿಪೀಟ್ ಮಾಡಿದರು ಎ-ಆದರ್ಶ, ಬಿ- ಬೋಫೋರ್ಸ್, ಸಿ-ಕೋಲ್ ಗೇಟ್..ಇತ್ಯಾದಿ
* ಒನ್ rank ಒನ್ pension ಇದು ಎನ್ ಡಿಎ ಕೊಡುಗೆ ಯುಪಿಎ ಹೈಜಾಕ್ ಮಾಡಿಕೊಂಡಿದೆ.
* ನನ್ನನ್ನು ಪ್ರಧಾನಿ ಮಾಡಿದರೆ ನಿಮ್ಮ ಕಾವಲುಗಾರನಂತೆ ಕಾಪಾಡುತ್ತೇನೆ.
* ವಿಶ್ವದೆಲ್ಲೆಡೆ ಸಿಖ್ ಸಮುದಾಯ ತನ್ನ ಆಹಾರ, ಬುದ್ಧಿವಂತಿಕೆ, ವ್ಯಾಪಾರ, ವಹಿವಾಟು, ಸಂಸ್ಕೃತಿಯಿಂದ ವಿಶಿಷ್ಟ ಸ್ಥಾನಗಳಿಸಿದೆ ಸ್ವಾಭಿಮಾನದ ಸಂಖೇತವಾಗಿದೆ.
* ಕಛ್ ಒಣ ಭೂಮಿಯಲ್ಲಿ ಹಸಿರು ಕ್ರಾಂತಿಯನ್ನು ತಂದವರು ಪಂಜಾಬಿಗಳು. ರೈತರ ಬೆಳೆ ನಮಗೆ ಗೊತ್ತಿದೆ ಎಂದರು.

ತುಮಕೂರಿನಲ್ಲಿ ಶಿವರಾಜ್ ಚೌಹಾಣ್ ಸಂಚಾರ

ತುಮಕೂರಿನಲ್ಲಿ ಶಿವರಾಜ್ ಚೌಹಾಣ್ ಸಂಚಾರ

ಅತ್ತ ಭೋಪಾಲ್ ನಲ್ಲಿ ಆರೆಸ್ಸೆಸ್ ಪಥ ಸಂಚಲನ, ಬೈಠಕ್ ನಡುವೆಯೂಕರ್ನಾಟಕದ ತುಮಕೂರಿಗೆ ಆಗಮಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರಿಗೆ ಮೈಸೂರು ಪೇಠ, ಖಡ್ಗ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೆಎಸ್ ಈಶ್ವರಪ್ಪ ಅವರು ಸ್ವಾಗತಿಸಿದರು. PTI Photo by Shailendra Bhojak

ಚೌಹಾಣ್ ಅವರ ಸದ್ಭಾವನಾ ಸಮಾವೇಶದ ವಿವರ ಇಲ್ಲಿ ಓದಿ

ಡೆಹ್ರಾಡೂನ್ ನಲ್ಲಿ ರಾಹುಲ್ ಗಾಂಧಿ ಸಾಹಸ

ಡೆಹ್ರಾಡೂನ್ ನಲ್ಲಿ ರಾಹುಲ್ ಗಾಂಧಿ ಸಾಹಸ

ಡೆಹ್ರಾಡೂನ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈ ರೀತಿ ಬ್ಯಾರಿಕೇಡ್ ದಾಟುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ, ಅಮೇಥಿ ಮುಂತಾದ ಕಡೆ ನಡೆದ ಸಮಾವೇಶಗಳಲ್ಲೂ ಬ್ಯಾರಿಕೇಡ್ ದಾಟಿ ಸಾರ್ವಜನಿಕರ ಬಳಿ ಸಾಗಿ ಅವರ ಕಷ್ಟ ಸುಖ ವಿಚಾರಿಸಿದ ಪ್ರಸಂಗಗಳಿವೆ.

* ಡೆಹ್ರಾಡೂನ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ದೇಶದ ಟೆಲಿ ಕಮ್ಯೂನಿಕೇಷನ್ ಕ್ರಾಂತಿ ಮಾಡಿದ್ದು ನಮ್ಮಪ್ಪ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಸರ್ಕಾರ ಬಿಜೆಪಿ ಅಲ್ಲ. ದಿ. ಪ್ರಮೋದ್ ಮಹಾಜನ್ ಅವರು ಸಂವಹನ ಕ್ರಾಂತಿ ಮಾಡಿದ್ದು ಎನ್ ಡಿಎ ಎಂದಿದ್ದರು ಇದು ತಪ್ಪು ಮಾಹಿತಿ.
* ವರ್ಷಕ್ಕೆ 12 ಅನಿಲ ಸಿಲಿಂಡರ್ ಮಿತಿ ಹೆಚ್ಚಳ, ಮಹಿಳಾ ಮೀಸಲಾತಿ, ಕೋಮು ಸೌಹಾರ್ದತೆ ನಮ್ಮ ಕೊಡುಗೆ ಎಂದರು.
* ನಮ್ಮ ಎದುರಾಳಿಗೆ(ಮೋದಿ)ಲೋಕಾಯುಕ್ತ, ಲೋಕಪಾಲ್ ಯಾವುದು ಬೇಕಾಗಿಲ್ಲ. ತಾವೇ ಎಲ್ಲ.
* ಗುಜರಾತ್ ಪ್ರಗತಿ ಬಗ್ಗೆ ಭಾಷಣ ಬಿಗಿಯುತ್ತಾರೆ ಆದರೆ, ಅಲ್ಲಿನ ಮಹಿಳೆಯರು, ದಲಿತರ ಕೊಡುಗೆಯನ್ನು ಮರೆಯುತ್ತಾರೆ

ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರ

ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರ

* ಜನರ ಸರ್ಕಾರ ನಡೆಸಿದ ಅನುಭವ ಪಡೆದಿರುವ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ.
* ನಾನು ಎಲ್ಲೂ ಓಡಿ ಹೋಗಿಲ್ಲ. ಬಿಜೆಪಿ, ಕಾಂಗ್ರೆಸ್ ಲೋಕಾಪಾಲ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡಲಿಲ್ಲ.
* ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಮಾಡಿರುವ ಕೆಲಸ ತೃಪ್ತಿ ಕೊಟ್ಟಿದೆ.
* ಉದ್ಯಮಿಗಳ ಕೈವಶವಾಗಿರುವ ರಾಜಕೀಯ ಪಕ್ಷಗಳಿಂದ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
* ಟಾಟಾ, ರಿಲಯನ್ಸ್ ಗೆ ಸಬ್ಸಿಡಿ ನೀಡಿ ಜನ ಸಾಮಾನ್ಯರಿಗೆ ಮೋಸ ಎಸಗಲಾಗಿದೆ ಎಂದು ಕೇಜ್ರಿವಾಲ್ ತಮ್ಮ ಭಾಷಣದಲ್ಲಿ ಹೇಳಿದರು.

ಭೋಪಾಲ್ ನಲ್ಲಿ ಆರೆಸ್ಸೆಸ್ ಪಥಸಂಚಲನ

ಭೋಪಾಲ್ ನಲ್ಲಿ ಆರೆಸ್ಸೆಸ್ ಪಥಸಂಚಲನ

ಭೋಪಾಲ್ ನಲ್ಲಿ ಕೇಸರಿ ಧ್ವಜ ಹಿಡಿದು ಆರೆಸ್ಸೆಸ್ ಕಾರ್ಯಕರ್ತರು ಆಕರ್ಷಕ ಪಥಸಂಚಲನ ನಡೆಸಿದರು.

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ

ಭೋಪಾಲ್ : ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹೂ ಎರಚಿದ ಮುಸ್ಲಿಂ ಬಾಂಧವರು ಭರ್ಜರಿ ಸ್ವಾಗತ ಕೋರಿದರು.

ಆರೆಸ್ಸೆಸ್ ಕಾರ್ಯಕರ್ತರು ಪಥಸಂಚಲನ

ಆರೆಸ್ಸೆಸ್ ಕಾರ್ಯಕರ್ತರು ಪಥಸಂಚಲನ

ಗಣವೇಷಧಾರಿಗಳಾದ ಆರೆಸ್ಸೆಸ್ ಕಾರ್ಯಕರ್ತರು ಪಥಸಂಚಲನ

ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಅಭಿಯಾನ

ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಅಭಿಯಾನ

ಅರವಿಂದ್ ಕೇಜ್ರಿವಾಲ್ ತಮ್ಮ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಅಭಿಯಾನ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು 'ಪೊಲ್ ಖೋಲ್ ಅಭಿಯಾನ' ನಡೆಸಿ ಕೇಜ್ರಿವಾಲ್ ಪ್ರತಿಕೃತಿ ದಹಿಸಿ ಕೇಕೇ ಹಾಕಿ ಕುಣಿದಾಡಿದರು.

ಉತ್ತರಪ್ರದೇಶದ ಅಖಿಲೇಶ್ ಸೈಕಲ್ ಜಾಥಾ

ಉತ್ತರಪ್ರದೇಶದ ಅಖಿಲೇಶ್ ಸೈಕಲ್ ಜಾಥಾ

ನವದೆಹಲಿಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಮೈ ಕೈಗೆ ಪಕ್ಷದ ಬಣ್ಣ ಬಳೆದುಕೊಂಡು ಪಕ್ಷದ ಚಿನ್ಹೆ ಸೈಕಲ್ ಏರಿ ಮೆರವಣಿಗೆ ಮಾಡಿದರು. PTI Photo by Kamal Singh

English summary
Feb.23 Sunday Rally In pics :Muslims shower flower petals as volunteers of Hindu nationalist group Rashtriya Swayamsevak Sangh, (RSS) march on the concluding day of their three-day meeting in Bhopal on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X