ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಸಾವು:ಕೇಸ್‌ನಲ್ಲಿ ಸೋನಿಯಾ ಅಳಿಯನ ಹೆಸರು!

By Ashwath
|
Google Oneindia Kannada News

ನವದೆಹಲಿ, ಜೂ.4: ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದ್ದು ಇದೀಗ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಹೆಸರು ತಳುಕು ಹಾಕಿಕೊಂಡಿದೆ.

ಮೂರು ದಿನಗಳ ಹಿಂದೆಯಷ್ಟೆ ಸುನಂದಾ ಪುಷ್ಕರ್ ಅವರನ್ನು ವೃತ್ತಿಪರ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ ಈಗ ಹೊಸ ಬಾಂಬ್‌ ಸಿಡಿಸಿದ್ದಾರೆ.[ಸುನಂದಾ ಪುಷ್ಕರ್ ಅವರದ್ದು ವ್ಯವಸ್ಥಿತ ಕೊಲೆ : ಸ್ವಾಮಿ]

ಗುರುವಾರ ರಾತ್ರಿ ಸುದ್ದಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದ ಸುಬ್ರಮಣ್ಯಸ್ವಾಮಿ ಸುನಂದಾ ಪುಷ್ಕರ್‌ ನಿಗೂಢ ಸಾವಿನ ಪ್ರಕರಣಕ್ಕೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೂ ಸಂಬಂಧವಿದೆ ಎಂದು ಆರೋಪ ಮಾಡಿದ್ದಾರೆ.[ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಿನ್ನೆಲೆ ಇದು]

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಕೊಚ್ಚಿ ಟಸ್ಕರ್‌ ತಂಡದ ಖರೀದಿಗೆ ರಾಬರ್ಟ್‌ ವಾದ್ರಾ ಸೇರಿದಂತೆ ಹಲವು ಉದ್ಯಮಿಗಳು ಹಣ ಹೂಡಿದ್ದರು. ಸುನಂದಾ ಪುಷ್ಕರ್‌ ಸಾವನ್ನಪುವ ಮುನ್ನಾ ಪತ್ರಿಕಾಗೋಷ್ಠಿ ಕರೆದು ಈ ವಿಚಾರಗಳನ್ನು ಬಹಿರಂಗಪಡಿಸಲು ಸಿದ್ದತೆ ನಡೆಸಿದ್ದರು. ಸುನಂದಾ ಅವರು ಕೊಚ್ಚಿ ತಂಡದ ಮಾಹಿತಿಯನ್ನು ಬಹಿರಂಗಪಡಿಸಿದರೆ ಹಲವರ ಪ್ರತಿಷ್ಠೆಗೆ ಧಕ್ಕೆ ಆಗುತಿತ್ತು. ಸುದ್ದಿಗೋಷ್ಠಿ ನಡೆಸುವ ವಿಚಾರವವನ್ನು ತಿಳಿದೇ ಹಲವು ಮಂದಿ ಸೇರಿ ಸುನಂದಾ ಅವರನ್ನು ಮುಗಿಸಲು ಮುಂದಾಗಿದ್ದರು ಎಂದು ತಿಳಿಸಿದ್ದಾರೆ.[ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು]

ದೆಹಲಿ ಪೊಲೀಸರಿಂದ ಈ ರೀತಿಯ ವೃತ್ತಿಪರ ಕೊಲೆಯನ್ನು ತನಿಖೆ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ಸಿಬಿಐ ತನಿಖೆಯಾಗಬೇಕೆಂದು ಸುಬ್ರಮಣ್ಯಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

sunanda pushkar Robert Vadra
ಸುನಂದ ಸಾವಿಗೆ ಬೇರೆಯದೇ ಕಾರಣ?
ಸುನಂದಾ ಪುಷ್ಕರ್‌ ಅವರ ಮರಣೋತ್ತರ ಪರೀಕ್ಷಾ ವರದಿಯನ್ನು ತಿರುಚಲು ಕೇಂದ್ರದ ಆಗೀನ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್‌ ಅವರು ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಎರಡು ದಿನಗಳ ಹಿಂದೆಯಷ್ಟೇ ಆರೋಪ ಮಾಡಿದ್ದ ಏಮ್ಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಸುಧೀರ್‌ ಗುಪ್ತಾ ತಮ್ಮ ಆರೋಪವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.[ಸುನಂದಾ ಸಾವು ಅಸ್ವಾಭಾವಿಕ-ಹಠಾತ್: ದಿಲ್ಲಿ ವೈದ್ಯರು]

ಗುರುವಾರ ಏಮ್ಸ್‌ ಅಧಿಕಾರಿಗಳು ಸುಧೀರ್‌ ಗುಪ್ತಾ ಆರೋಪ ನಿರಾಧಾರ ಎಂದು ಸಷ್ಟನೆ ನೀಡಿದ ಹಿನ್ನಲೆಯಲ್ಲಿ ಮತಾನಾಡಿದ ಸುಧೀರ್‌ ಅವರು "ಬೆದರಿಕೆ ಮತ್ತು ಒತ್ತಡ ಬಂದಿರುವುದು ನನಗೆ . ವಾಸ್ತವ ಸಂಗತಿ ನನಗೆ ಮಾತ್ರ ಗೊತ್ತಿರಬೇಕು ವಿನಾಃ ಬೇರೆಯವರಿಗೆ ತಿಳಿಯಲು ಸಾಧ್ಯವಿಲ್ಲ" ಎಂದು ತಮ್ಮ ಆರೋಪಕ್ಕೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.[ಸುನಂದಾ ಪುಷ್ಕರ್ ಪಾಕ್‌ ಪತ್ರಕರ್ತೆ ಮೆಹರ್ ಟ್ವಿಟ್ಟರ್‌ ವಾರ್‌]

English summary
The mysterious case of Sunanda Pushkar's death grew murkier with senior Bharatiya Janata Party leader and noted lawyer Subramanian Swamy dragging in Congress President Sonia Gandhi's son-in-law Robert Vadra. He claimed that the murder of former Union Minister and Congress leader Shashi Tharoor's wife could be linked with money laundering in the Indian Premier League as Sunanda wanted to expose IPL deals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X