ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ಘಟಾನುಘಟಿಗಳ ಹಣೆಬರಹ ಬುಧವಾರ ನಿರ್ಧಾರ

|
Google Oneindia Kannada News

ನವದೆಹಲಿ, ಏ 29: ಹದಿನಾರನೇ ಲೋಕಸಭೆಗೆ ನಡೆಯುತ್ತಿರುವ ಏಳನೇ ಹಂತದ ಚುನಾವಣೆಗೆ ಏಪ್ರಿಲ್ 30 ಬುಧವಾರ ಮುಹೂರ್ತ. ಏಳು ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿಕೊಂಡಿರುವ ಒಟ್ಟು 89 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ.

ಬುಧವಾರದ ಮತದಾನದಲ್ಲಿ ಒಟ್ಟು 139 ದಶಲಕ್ಷ ಮತದಾರರಿದ್ದು 1200 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆ ನಡೆಯುತ್ತಿರುವ ಪ್ರದೇಶಗಳು ಹೀಗಿವೆ: ಆಂಧ್ರಪ್ರದೇಶ (17), ಬಿಹಾರ (7) ಗುಜರಾತ್ (26) ಜಮ್ಮು ಮತ್ತು ಕಾಶ್ಮೀರ (1), ಪಂಜಾಬ್ (13), ಉತ್ತರಪ್ರದೇಶ (14) , ಪಶ್ಚಿಮ ಬಂಗಾಳ (9) , ಕೇಂದ್ರಾಡಳಿತ ಪ್ರದೇಶ ದಾದ್ರ ಮತ್ತು ನಗರಹವೇಲಿ, ದಿಯು ಮತ್ತು ದಮನ್ ತಲಾ ಒಂದು ಕ್ಷೇತ್ರ.

ಲೋಕಸಭೆಯ ಜೊತೆಗೆ ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲೂ ಬುಧವಾರವೇ ಚುನಾವಣೆ ನಡೆಯಲಿದೆ. ಇದಲ್ಲದೇ, ಬಿಹಾರ (1), ಗುಜರಾತ್ (7), ಉತ್ತರಪ್ರದೇಶ (2) ಮತ್ತು ಪಶ್ಚಿಮಬಂಗಾಲದ ಒಂದು ಕ್ಷೇತ್ರದಲ್ಲಿ ವಿಧಾನಸಭೆಗೆ ಮರುಚುನಾವಣೆ ನಡೆಯುತ್ತದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜೈಪಾಲ್ ರೆಡ್ಡಿ ಸೇರಿದಂತೆ ಘಟಾನುಘಟಿಗಳ ಬುಧವಾರ ನಿರ್ಧಾರವಾಗಲಿದೆ.

ಎಲ್ಲರ ಕಣ್ಣು ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ತೆಲಂಗಾಣ ವಿಧಾನಸಭೆಯ ಚುನಾವಣೆಯ ಮೇಲೆ ನೆಟ್ಟಿದೆ. ಇದಲ್ಲದೇ, ಬುಧವಾರದ ಚುನಾವಣೆಯಲ್ಲಿ ಲೋಕಸಭಾ ಸದಸ್ಯತ್ವಕ್ಕೆ ಲಗೋರಿ ಹೂಡಿರುವ ಹದಿನೇಳು ಖ್ಯಾತನಾಮರ ಮೇಲೆ ಬಿದ್ದಿದೆ. ಈ ಹದಿನೇಳು ಮಂದಿ ಯಾರು? ಯಾರ್ಯಾರ ಜಾತಕದಲ್ಲಿ ಏನೇನು ಬರೆದಿದೆಯೋ ಮತದಾರ ಬ್ರಹ್ಮನಿಗೆ ಗೊತ್ತು. ಅದು ಹೇಗೂ ಇರಲಿ, ಈ ಖ್ಯಾತನಾಮರ ಪರಿಚಯ ಮಾಡಿಕೊಳ್ಳೋಣ ಬನ್ನಿ..

ಬುಧವಾರ ಮತದಾನ

ಬುಧವಾರ ಮತದಾನ

ಏಪ್ರಿಲ್ 30ರಂದು 89 ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಕೆಂಪು ಕಲರಿನಲ್ಲಿ ಹೈಲೈಟ್ ಮಾಡಿರುವ ರಾಜ್ಯಗಳಲ್ಲಿ ಬುಧವಾರ ಮತದಾನ ನಡೆಯಲಿದೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ಉತ್ತರಪ್ರದೇಶದ ರಾಯಬರೇಲಿ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ಸೋನಿಯಾ ಗಾಂಧಿ
ಬಿಜೆಪಿ : ಅಜಯ್ ಅಗರ್ವಾಲ್
ಬಿಎಸ್ಪಿ : ಪ್ರವೇಶ್ ಸಿಂಗ್
ಆಮ್ ಆದ್ಮಿ: ಅರ್ಚನಾ ಶ್ರೀವಾಸ್ತವ್

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಉತ್ತರಪ್ರದೇಶದ ಲಕ್ನೋ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ರೀಟಾ ಬಹುಗುಣ ಜೋಷಿ
ಬಿಜೆಪಿ : ರಾಜನಾಥ್ ಸಿಂಗ್
ಆಮ್ ಆದ್ಮಿ: ಜಾವೇದ್ ಜಾಫ್ರಿ

ಮುರಳಿ ಮನೋಹರ್ ಜೋಷಿ

ಮುರಳಿ ಮನೋಹರ್ ಜೋಷಿ

ಉತ್ತರಪ್ರದೇಶದ ಕಾನ್ಪುರ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ಶ್ರೀಪ್ರಕಾಶ್ ಜೈಸ್ವಾಲ್
ಬಿಜೆಪಿ : ಮುರಳಿ ಮನೋಹರ್ ಜೋಷಿ
ಆಮ್ ಆದ್ಮಿ: ಡಾ. ಮೊಹಮ್ಮದ್ ಹುಸೇನ್ ರೆಹಮಾನಿ
ಬಿಎಸ್ಪಿ : ಸಲೀಂ ಅಹಮದ್
ಎಸ್ಪಿ : ಸುರೇಂದ್ರ ಮೋಹನ್ ಅಗರ್ವಾಲ್

ನರೇಂದ್ರ ಮೋದಿ

ನರೇಂದ್ರ ಮೋದಿ

ಗುಜರಾತಿನ ವಡೋದರ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ಮಧುಸೂಧನ್ ಮಿಸ್ತ್ರಿ
ಬಿಜೆಪಿ : ನರೇಂದ್ರ ಮೋದಿ

ಎಲ್ ಕೆ ಅಡ್ವಾಣಿ

ಎಲ್ ಕೆ ಅಡ್ವಾಣಿ

ಗುಜರಾತಿನ ಗಾಂಧಿನಗರ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ಕೀರ್ತಿಭಾಯ್ ಈಶ್ವರಿ ಭಾಯ್ ಪಟೇಲ್
ಬಿಜೆಪಿ : ಎಲ್ ಕೆ ಅಡ್ವಾಣಿ
ಬಿಎಸ್ಪಿ : ನಿರಂಜನ್ ಘೋಷ್

ಪರೇಶ್ ರಾವಲ್

ಪರೇಶ್ ರಾವಲ್

ಗುಜರಾತಿನ ಅಹಮದಾಬಾದ್ ಪೂರ್ವ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ಹಿಮ್ಮತ್ ಸಿಂಗ್ ಪಟೇಲ್
ಬಿಜೆಪಿ : ಪರೇಶ್ ರಾವಲ್
ಬಿಎಸ್ಪಿ : ರೋಹಿತ್ ರಾಜುಭಾಯ್

ಜೈಪಾಲ್ ರೆಡ್ಡಿ

ಜೈಪಾಲ್ ರೆಡ್ಡಿ

ಆಂಧ್ರಪ್ರದೇಶದ ಮೆಹಬೂಬ್ ನಗರ

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್ : ಜೈಪಾಲ್ ರೆಡ್ಡಿ
NDA : ನಾಗಂ ಜನಾರ್ಧನ ರೆಡ್ಡಿ

ಕೆ ಚಂದ್ರಶೇಖರ್ ರಾವ್

ಕೆ ಚಂದ್ರಶೇಖರ್ ರಾವ್

ಆಂಧ್ರಪ್ರದೇಶದ ಮೇಡಕ್

ಕಣದಲ್ಲಿರುವ ಪ್ರಮುಖರು
ಟಿಆರ್ ಎಸ್ : ಕೆ ಚಂದ್ರಶೇಖರ್ ರಾವ್
ಕಾಂಗ್ರೆಸ್ : ಶ್ರಾವಣ್ ಕುಮಾರ್ ರೆಡ್ಡಿ
NDA : ನಾಗೇಂದ್ರಮಾಥ್ ಚಗನ್ಲಾಲ

ಜಯಪ್ರಕಾಶ್ ನಾರಾಯಣ್

ಜಯಪ್ರಕಾಶ್ ನಾರಾಯಣ್

ಆಂಧ್ರಪ್ರದೇಶದ ಮಾಲಕಗಿರಿ

ಕಣದಲ್ಲಿರುವ ಪ್ರಮುಖರು
ಲೋಕಸತ್ತಾ :ಜಯಪ್ರಕಾಶ್ ನಾರಾಯಣ್
ವೈಎಸ್ ಆರ್ : ದಿನೇಶ್ ರೆಡ್ಡಿ
ಕಾಂಗ್ರೆಸ್ : ಮೈನಂಪಲ್ಲಿ ಹನುಮಂತ ರಾವ್
NDA : ಮಲ್ಲಾ ರೆಡ್ಡಿ

ಅಸಾವುದ್ದೀನ್ ಒವೈಸಿ

ಅಸಾವುದ್ದೀನ್ ಒವೈಸಿ

ಆಂಧ್ರಪ್ರದೇಶದ ಹೈದರಾಬಾದ್

ಕಣದಲ್ಲಿರುವ ಪ್ರಮುಖರು
ಎಂಐಎಂ : ಅಸಾವುದ್ದೀನ್ ಒವೈಸಿ
ಕಾಂಗ್ರೆಸ್ : ಎಸ್ ಕೃಷ್ಣ ರೆಡ್ಡಿ
NDA : ಡಾ. ಭಗವಂತ್ ರಾವ್

ಶರದ್ ಯಾದವ್

ಶರದ್ ಯಾದವ್

ಬಿಹಾರದ ಮಾದೇಪುರ

ಕಣದಲ್ಲಿರುವ ಪ್ರಮುಖರು
ಜೆಡಿಯು: ಶರದ್ ಯಾದವ್
ಆರ್ಜೆಡಿ : ರಾಜೇಶ್ ರಂಜನ್ ಆಲಿಯಾಸ್ ಪಪ್ಪು ಯಾದವ್
ಬಿಜೆಪಿ ; ವಿಜಯ್ ಸಿಂಗ್ ಖುಸ್ವಾ

ಕೀರ್ತಿ ಆಜಾದ್

ಕೀರ್ತಿ ಆಜಾದ್

ಬಿಹಾರದ ದರ್ಭಾಂಗ್

ಕಣದಲ್ಲಿರುವ ಪ್ರಮುಖರು
ಜೆಡಿಯು: ಸಂಜಯ್ ಝೂ
ಆರ್ಜೆಡಿ : ಆಲ್ ಅಸ್ರಫ್ ಫತ್ಮಿ
ಬಿಜೆಪಿ : ಕೀರ್ತಿ ಆಜಾದ್

ಬಪ್ಪಿ ಲಹರಿ

ಬಪ್ಪಿ ಲಹರಿ

ಪಶ್ಚಿಮ ಬಂಗಾಳದ ಸಿರಾಂಪೋರ್

ಕಣದಲ್ಲಿರುವ ಪ್ರಮುಖರು
ಕಾಂಗ್ರೆಸ್: ಅಬ್ದುಲ್ ಮನ್ನನ್
ಬಿಜೆಪಿ : ಬಪ್ಪಿ ಲಹರಿ
ಟಿಎಂಸಿ: ಕಲ್ಯಾಣ್ ಬ್ಯಾನರ್ಜಿ

ಫಾರೂಖ್ ಅಬ್ದುಲ್ಲಾ

ಫಾರೂಖ್ ಅಬ್ದುಲ್ಲಾ

ಜಮ್ಮು ಕಾಶ್ಮೀರದ ಶ್ರೀನಗರ

ಕಣದಲ್ಲಿರುವ ಪ್ರಮುಖರು
ನ್ಯಾಶನಲ್ ಕಾನ್ಫರೆನ್ಸ್ : ಫಾರೂಖ್ ಅಬ್ದುಲ್ಲಾ
ಪಿಡಿಪಿ: ತಾರೀಕ್ ಅಹಮದ್ ಖರ್ರಾ

ಅರುಣ್ ಜೇಟ್ಲಿ

ಅರುಣ್ ಜೇಟ್ಲಿ

ಪಂಜಾಬಿನ ಅಮೃತಸರ

ಕಣದಲ್ಲಿರುವ ಪ್ರಮುಖರು
ಬಿಜೆಪಿ : ಅರುಣ್ ಜೇಟ್ಲಿ
ಕಾಂಗ್ರೆಸ್ : ಕ್ಯಾ. ಅಮರೀಂದರ್ ಸಿಂಗ್

ವಿನೋದ್ ಖನ್ನಾ

ವಿನೋದ್ ಖನ್ನಾ

ಪಂಜಾಬಿನ ಗುರುದಾಸಪುರ

ಕಣದಲ್ಲಿರುವ ಪ್ರಮುಖರು
ಬಿಜೆಪಿ : ವಿನೋದ್ ಖನ್ನಾ
ಕಾಂಗ್ರೆಸ್ : ಪ್ರತಾಪ್ ಸಿಂಗ್ ಬಜ್ವಾ

ನಾಥೂಭಾಯ್ ಗೋಮನ್ ಭಾಯ್

ನಾಥೂಭಾಯ್ ಗೋಮನ್ ಭಾಯ್

ದಾದ್ರಾ ಮತ್ತು ನಗರ ಹವೇಲಿ

ಕಣದಲ್ಲಿರುವ ಪ್ರಮುಖರು
ಬಿಜೆಪಿ: ನಾಥೂಭಾಯ್ ಗೋಮನ್ ಭಾಯ್ ಪಟೇಲ್
ಕಾಂಗ್ರೆಸ್ : ಡೆಲ್ಕರ್ ಮೋಹನ್ ಭಾಯ್

English summary
Sonia Gandhi, Narendra Modi, Rahul Gandhi, LK Advani, Bappi Lahari, Keerthi Azad, Rajnath Singh among 17 star contestants whose electoral fortunes will be decided on Wednesday April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X