ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 19ರಂದು ಸೋನಿಯಾ, ರಾಹುಲ್ ರಾಜೀನಾಮೆ?

|
Google Oneindia Kannada News

ನವದೆಹಲಿ, ಮೇ 17: ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಇನ್ನಿಲ್ಲದಂತೆ ನೆಲಕಚ್ಚಿದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಸೋನಿಯಾ ಮತ್ತು ರಾಹುಲ್ ಗಾಂಧಿ ತಾವು ಅಲಂಕರಿಸಿರುವ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಲಿದ್ದಾರೆನ್ನುವ ಸುದ್ದಿ ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.

ಸ್ವಾತಂತ್ರ್ಯಾನಂತರ ಇದುವರೆಗೆ ನಡೆದ ಚುನಾವಣೆಯಲ್ಲಿ ಕನಿಷ್ಠ ವಿರೋಧ ಪಕ್ಷದ ಸ್ಥಾನಮಾನವೂ ಸಿಗದಂತೆ ಪಕ್ಷ ಮುಖಭಂಗ ಅನುಭವಿಸಿರುವ ಹಿನ್ನಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.

Sonia and Rahul Gandhi may quit, Congress sources

ಸೋಮವಾರ (ಮೇ 19) ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಇಬ್ಬರೂ ರಾಜೀನಾಮೆ ನೀಡಲು ಮುಂದಾಗಲಿದ್ದಾರೆ. ಆದರೆ, ಇದೊಂದು ಔಪಚಾರಿಕ ಕ್ರಮವಾಗಲಿದೆ. [ಜಗತ್ತೇ ಮೋದಿ ಅಭಿನಂದಿಸುತ್ತಿರುವಾಗ]

ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ರಾಜೀನಾಮೆ ವಿಚಾರಕ್ಕೆ ಒಪ್ಪಿಗೆ ಸೂಚಿಸುವ ಯಾವುದೇ ಸಾಧ್ಯತೆಗಳಿಲ್ಲ ಎಂದು ವಾಹಿನಿಯ ವರದಿಯಲ್ಲಿ ಉಲ್ಲೇಖವಾಗಿದೆ.

ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೂರಂಕಿಯೂ ದಾಟದೇ, ಕೇವಲ 44 ಸೀಟನ್ನು ಪಡೆಯಲಷ್ಟೇ ಶಕ್ತವಾಗಿತ್ತು.

ಅಲ್ಲದೇ, ಹತ್ತು ರಾಜ್ಯಗಳಲ್ಲಿ ಎರಡಂಕಿಯನ್ನೂ ದಾಟಲಾಗದೇ, ಕೆಲವೊಂದು ರಾಜ್ಯಗಳಲ್ಲಿ ಅಕೌಂಟ್ ಕೂಡಾ ಓಪನ್ ಮಾಡಲಾಗದಂತಹ ದಯನೀಯ ಸ್ಥಿತಿಗೆ ತಲುಪಿತ್ತು.

ಚುನಾವಣಾ ಪ್ರಚಾರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಸೋನಿಯಾ ಮತ್ತು ರಾಹುಲ್ ಗಾಂಧಿಯ ರಾಜೀನಾಮೆ ನೀಡುವ ವಿಚಾರ ಕೇವಲ ಔಪಚಾರಿಕವಾಗಲಿದ್ದು, ಇಬ್ಬರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ ಎಂದು ವಾಹಿನಿ ವರದಿ ಮಾಡಿದೆ.

English summary
According to NDTV report, Congress President and Vice President Sonia and Rahul Gandhi respectively may offer to quit the post due to poll debacle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X