ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರೆ ನಕಲಿ ಎನ್‌ಕೌಂಟರ್‌ ಮಾಡಿದರೆ ಹುಷಾರ್‌!

|
Google Oneindia Kannada News

ನವದೆಹಲಿ, ಸೆ. 24 : ಪೊಲೀಸ್ ಎನ್‌ಕೌಂಟರ್‌ಗಳ ಕುರಿತು ಮಂಗಳವಾರ ಸುಪ್ರೀಂಕೋರ್ಟ್ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು ನಕಲಿ ಎನ್‌ಕೌಂಟರ್‌ ತಡೆಗೆ ಮುಂದಾಗಿದೆ. ಪೊಲೀಸರ ಗುಂಡೇಟಿಗೆ ಬಲಿಯಾಗುವ ಮುಗ್ಧರ ಪ್ರಾಣ ಕಾಪಾಡಲು ನ್ಯಾಯಾಲಯ ಆದೇಶ ಹೊರಡಿಸಿದೆ.

suprme court

ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳೇನು?
* ಎನ್‌ಕೌಂಟರ್‌ನಲ್ಲಿ ಯಾವುದಾದರೂ ವ್ಯಕ್ತಿ ಪ್ರಾಣ ಕಳೆದುಕೊಂಡರೆ ಕೂಡಲೆ ಎಫ್‌ಐಆರ್‌ ದಾಖಲು ಮಾಡಬೇಕು ಅಲ್ಲದೇ ನ್ಯಾಯಾಲಯಕ್ಕೂ ಒಂದು ಪ್ರತಿ ತಲುಪಿಸಬೇಕು.
* ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ ಎಫ್‌ಐಆರ್‌ ದಾಖಲಿಸಿ ಸಿಐಡಿ ಅಥವಾ ಯಾವುದಾದರೊಂದು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದು ಕಡ್ಡಾಯ.
* ಎನ್‌ಕೌಂಟರ್‌ ಕುರಿತು ನಿಖರ ದಾಖಲೆಗಳನ್ನು ಪೊಲೀಸರು ಸಿದ್ಧಮಾಡಬೇಕು.(ಪೊಲೀಸ್ ಎನ್‌ಕೌಂಟರ್‌ಗೆ ಸುಪ್ರೀಂಕೋರ್ಟ್‌ ಮಾರ್ಗಸೂಚಿ)
* ಎಲೆಕ್ಟ್ರಾನಿಕ್ ಮತ್ತು ಬರವಣಿಗೆ ಮಾಧ್ಯಮದಲ್ಲಿ ದಾಖಲೆ ಕಾಪಾಡಬೇಕು.
* ಎನ್‌ಕೌಂಟರ್‌ಗೆ ಬಲಿಯಾದವನ ಪ್ರಕರಣದಗಳ ಸಂಪೂರ್ಣ ವಿವರ ನೀಡುವುದು ಪೊಲೀಸರ ಜವಾಬ್ದಾರಿ
* ರೌಡಿಗಳ ಹತ್ಯೆಗೆ ಬಳಸಿದ ಆಯುಧಗಳನ್ನು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು.
* ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಕೂಡಲೆ ಬಡ್ತಿ, ಪ್ರಶಸ್ತಿಗಳನ್ನು ನೀಡಬಾರದು.
* ತನಿಖೆ ಮುಗಿದ ಬಳಿಕ ಪ್ರಶಸ್ತಿ ಅಥವಾ ಬಡ್ತಿ ನೀಡಬಹುದು.
* ಪ್ರತಿ ಆರು ತಿಂಗಳಿಗೊಮ್ಮೆ ಎನ್‌ಕೌಂಟರ್‌ಗಳ ಕುರಿತಾದ ಸಮಗ್ರ ವರದಿಯನ್ನು ಮಾಣವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಬೇಕು.
* ಎನ್‌ಕೌಂಟರ್‌ ಸಾವು ಪ್ರಕರಣಗಳ ತನಿಖೆಯನ್ನು ಐಪಿಎಸ್‌ ಗ್ರೇಡ್‌ ಅಧಿಕಾರಿಗಳೆ ನಿರ್ವಹಿಸಬೇಕು. ಇವರು ಎನ್‌ಕೌಂಟರ್‌ ನಡೆದ ಜಾಗದ ವ್ಯಾಪ್ತಿಯವರಾಗಿರಬಾರದು.(ಉಪಚುನಾವಣೆ ಫಲಿತಾಂಶ: ಎಂಥ ವಿರೋಧಾಭಾಸ)

ಸುಪ್ರೀಂ ಕೋರ್ಟ್‌ ಇಂಥ ಕಠಿಣ ಕ್ರಮ ತೆಗೆದುಕೊಂಡಿದ್ದು ಯಾಕೆ?
1999 ರಲ್ಲಿ ಸೂರತ್‌ ಸಿಂಗ್‌ ಎಂಬುವರು ನೀಡಿದ್ದ ದೂರನ್ನು ಆಧರಿಸಿ ಸುಪ್ರೀಂ ಕೋರ್ಟ್‌ ಇಂಥ ತೀರ್ಮಾನಕ್ಕೆ ಬಂದಿದೆ. ಅಲ್ಲದೇ ವಿವಿಧ ಎನ್‌ಜಿಒಗಳು, ಯುನಿಯನ್‌ ಫಾರ್‌ ಸಿವಿಲ್‌ ಲೈಬರಿಟೀಸ್‌(ಪಿಯುಸಿಎಸ್‌) ಮತ್ತು ಮಾನವ ಹಕ್ಕುಗಳ ಆಯೋಗದ ದೂರುಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. ಅಲ್ಲದೇ ಶಂಕಾಸ್ಪದ ಎನ್‌ಕೌಂಟರ್‌ಗಳ ವಿಚಾರಣೆ ನಡೆಸಲು ಮಾನವ ಹಕ್ಕುಗಳ ಆಯೋಗ ಸಮಿತಿಯೊಂದನ್ನು ರಚಿಸಿಕೊಳ್ಳಬಹುದು ಎಂದು ತಿಳಿಸಿದೆ. ಒಂದು ವೇಳೆ ಎನ್‌ಕೌಂಟರ್‌ ನಕಲಿ ಎಂದು ಸಾಬೀತಾದರೆ ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳು ನಿರ್ದಿಷ್ಟ ಪರಿಹಾರ ನೀಡಲು ಸಿದ್ಧರಿರಬೇಕಾಗುತ್ತದೆ.

ಹಳೆಯ ಕೆಲವು ಪ್ರಕರಣಗಳು
ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿ ಅನೇಕ ಪ್ರಕರಣಗಳು ಸದ್ದು ಮಾಡಿದ್ದವು. ಇಶ್ರಾತ್ ಜಹಾನ್‌ ಎನ್‌ಕೌಂಟರ್‌, ಸೋಹ್ರಾಬುದ್ದೀನ್‌ ಶೇಖ್‌ ಪ್ರಕರಣಗಳು ಪೊಲೀಸ್‌ ಇಲಾಖೆ ಮೇಲೆ ಅನುಮಾನ ಹುಟ್ಟಿಸಿದ್ದವು.(ಮಥುರಾದಲ್ಲಿ ಹೇಮಮಾಲಿನಿ ನಾಲಗೆ ಕಚ್ಚಿಕೊಂಡಿದ್ದೇಕೆ?)

ಗುಜರಾತ್‌ನಲ್ಲಿ (2005) ನಡೆದಿದ್ದ ಈ ಎರಡು ಪ್ರಕರಣಗಳು ಇಂದಿಗೂ ವಿಚಾರಣೆ ಹಂತದಲ್ಲೇ ಇವೆ. ಮುಂಬೈ ಮೂಲದ 19 ವರ್ಷದ ಯುವತಿ ಇಶ್ರಾತ್‌ ಜಹಾನ್‌ ರಾಜಾ, ಪ್ರಾಣೇಶ್‌, ಅಮ್ಜದ್‌ ಅಲಿ ರಾನಾ ಝೇಶನ್‌ ಜೋಹರ್‌ ಪ್ರಕರಣ ಇಂದಿಗೂ ಇತ್ಯರ್ಥವಾಗಿಲ್ಲ. ಇವರು ಉಗ್ರಗಾಮಿಗಳೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರು ಎಂದು ಆರೋಪಿಸಿ ಅಹಮದಾಬಾದ್‌ ಪೊಲೀಸರು ಎನ್‌ಕೌಂಟರ್‌ ನಡೆಸಿದ್ದರು.

ನಕಲಿ ಎನ್‌ಕೌಂಟರ್‌ ಗಳ ಸಂಖ್ಯೆ ಎಷ್ಟು?
ಏಪ್ರಿಲ್‌ 2013ರ ಅಂತ್ಯಕ್ಕೆ 555 ನಕಲಿ ಎನ್‌ಕೌಂಟರ್‌ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶ (138), ಮಣಿಪುರ (62), ಅಸ್ಸಾಂ (52), ಪಶ್ಚಿಮ ಬಂಗಾಳ (35), ಜಾರ್ಖಂಡ್, ಚತ್ತೀಸ್‌ಗಢ (29), ಒರಿಸ್ಸಾ (27), ಜಮ್ಮು ಮತ್ತು ಕಾಶ್ಮೀರ (26), ತಮಿಳುನಾಡು (23) ಮತ್ತು ಮಧ್ಯಪ್ರದೇಶ (20) ಪ್ರಕರಣಗಳು ದಾಖಲಾಗಿವೆ. 555 ಪ್ರಕರಣಗಳಲ್ಲಿ ಕೇವಲ 144 ಪ್ರಕರಣಗಳು ಮಾತ್ರ ಬಗೆಹರಿದಿವೆ!

English summary
The Supreme Court on Tuesday issued strict guidelines for encounters done by police in order to prevent fake encounter killings. Laying down directives to be followed by police officers after encounters, the Supreme Court gave directions to prevent killing of the innocent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X