ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನ

By Mahesh
|
Google Oneindia Kannada News

ನವದೆಹಲಿ, ಸೆ.25: ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ದೊರೆತ ಬೆನ್ನಲ್ಲೇ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸ್ವಚ್ಛ ಭಾರತ ಅಭಿಯಾನಕ್ಕೆ ಸಜ್ಜಾಗುತ್ತಿದೆ. ಮಹಾತ್ಮ ಗಾಂಧಿ ಅವರ ಹುಟ್ಟುಹಬ್ಬದ ದಿನದಂದು ಈ ಮಹತ್ವದ ಅಭಿಯಾನ ಜಾರಿಗೆ ಬರಲಿದೆ.

ಕರ್ನಾಟಕಕ್ಕೆ ಎರಡು ದಿನದ ಪ್ರವಾಸಕ್ಕೆಂದು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ದೇಶದ ಸ್ವಚ್ಛತೆ ಕಾಪಾಡುವುದರ ಬಗ್ಗೆ ಹೆಚ್ಚಿನ ಇತ್ತು ನೀಡಿದ್ದರು. ಬೆಂಗಳೂರಿನ ಮೇಯರ್ ಶಾಂತಕುಮಾರಿ ಅವರು ಸ್ವಚ್ಛತಾ ಅಭಿಯಾನವನ್ನು ಮುಂದುವರೆಸುವ ಬಗ್ಗೆ ಭರವಸೆ ನೀಡಿದ್ದರು.

ಯೋಜನಾ ವೆಚ್ಚ ಎಷ್ಟು?: ದೇಶದ ನಗರ ಪ್ರದೇಶಗಳನ್ನು ಕಸಮುಕ್ತಗೊಳಿಸಿ ಸ್ವಚ್ಛ ಭಾರತವನ್ನು ಕಾಣಲು ಈ ಅಭಿಯಾನವನ್ನು ಗಾಂಧಿ ಜಯಂತಿಯಂದು ಚಾಲನೆ ನೀಡಲಾಗುತ್ತಿದೆ. ಐದು ವರ್ಷಗಳ ಅವಧಿಯ ಈ ಯೋಜನೆ 4,041 ನಗರ, ಪಟ್ಟಣಗಳಲ್ಲಿ ಜಾರಿಗೊಳ್ಳಲಿದ್ದು, ಯೋಜನಾ ವೆಚ್ಚ 62,000 ಕೋಟಿ ಆಗಲಿದೆ ಎಂದು ಕಾನೂನು ಮತ್ತು ಟೆಲಿಕಾಂ, ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.[ಮಂಡ್ಯ ಜಿಲ್ಲೆಯಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣ]

₹62,000 crore to be spent on Clean India Mission

ಬಯಲು ಶೌಚಾಲಯ ನಿರ್ಮೂಲನೆ, ಕಲುಷಿತ ಶೌಚಾಲಯಗಳನ್ನು ಬಂದ್ ಮಾಡುವುದು, ಮಲ ಹೊರುವ ಪದ್ಧತಿ ನಿರ್ಮೂಲನೆ, ಪಾಲಿಕೆಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಕಡ್ಡಾಯ, ಆರೋಗ್ಯ ಮತ್ತು ನೈರ್ಮಲಿಕರಣದ ಬಗ್ಗೆ ಅರಿವು ಮೂಡಿಸುವುದು, ನಗರದ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಮನದಟ್ಟು ಮಾಡುವುದು ಈ ಯೋಜನೆ ಪ್ರಮುಖ ಉದ್ದೇಶ ಎಂದಿದ್ದಾರೆ.

ಈ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಸುಮಾರು 14,623 ಕೋಟಿ ಮೀಸಲಿಟ್ಟಿದೆ. 1.04 ಮನೆಗಳು,2.5 ಲಕ್ಷ ಸಮುದಾಯ ಶೌಚಾಲಯ, 2.6 ಲಕ್ಷ ಸಾರ್ವಜನಿಕ ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಗುರಿ ಹೊಂದಲಾಗಿದೆ.

ಈಗಾಗಲೇ ಜಾರಿಯಲ್ಲಿರುವ ಸ್ವಚ್ಛ ಭಾರತ್ ಮಿಷನ್ ಅಭಿಯಾನದ ಜೊತೆಗೆ ಈ ಯೋಜನೆಗೂ ಕಾರ್ಯನಿರ್ವಹಿಸಲಿದೆ. ಗ್ರಾಮಾಂತರ ಪ್ರದೇಶದ ಸ್ವಚ್ಛತಾ ಕಾಯ್ದುಕೊಳ್ಳಲು ಜಾರಿಯಲ್ಲಿರುವ ನಿರ್ಮಲ್ ಭಾರತ್ ಅಭಿಯಾನವನ್ನು ಹೊಸ ಯೋಜನೆಯೊಂದಿಗೆ ಸೇರ್ಪಡೆಗೊಳಿಸಲಾಗುವುದು ಎಂದಿದ್ದಾರೆ.

English summary
The Government has announced a five-year Clean India Mission for urban areas, which will be implemented for 4,041 towns at a cost of over ₹62,000 crore.It has also been decided to merge Swachh Bharat Mission for rural areas with Nirmal Bharat Abhiyan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X