ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರು ನುಸುಳುವ ಭೀತಿ, ರಾಜಸ್ಥಾನದಲ್ಲಿ ಹೈಅಲರ್ಟ್

|
Google Oneindia Kannada News

ಜೈಪುರ, ಆ.30 : 15 ಮಂದಿ ಭಯೋತ್ಪಾದಕರು ಪಾಕಿಸ್ತಾನದಿಂದ ರಾಜಸ್ಥಾನದ ಗಡಿ ಮೂಲಕ ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಇದರಿಂದಾಗಿ ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಎಕೆ 47 ಬಂದೂಕು ಮತ್ತು ಸ್ಫೋಟಗಳನ್ನು ಬಳಸುವಲ್ಲಿ ತರಬೇತಿ ಪಡೆದ 15 ಮಂದಿ ಭಯೋತ್ಪಾದಕರ ತಂಡ ದೇಶಕ್ಕೆ ನುಸುಳುವ ಪ್ರಯತ್ನ ನಡೆಸಿದೆ ಎಂದು ಗೃಹ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ.

Rajasthan

ರಾಜಸ್ಥಾನದಲ್ಲಿನ ಗಡಿಭಾಗದ ಮೂಲಕ ಉಗ್ರರು ಭಾರತವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ರಾಜಸ್ಥಾನದ ಗಡಿಭಾಗದಲ್ಲಿನ ಬಿಕಾನೇರ್ ವಲಯದ 4 ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ರಾಜಸ್ಥಾನದಲ್ಲಿ ಬಿಎಸ್‌ಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಸೈನಿಕರು ನಿರಂತರವಾಗಿ ಗುಂಡಿನ ದಾಳಿ ನಡೆಸಿ ಭಾರತದ ಗಮನವನ್ನು ಆ ಕಡೆ ಸೆಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ರಾಜಸ್ಥಾನದ ಗಡಿ ಮೂಲಕ ಭಯೋತ್ಪಾದಕರು ದೇಶ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

English summary
Rajasthan has been put on high alert following intelligence inputs that a group of 15 terror suspects, trained in using AK 47 can intrude into the country from Pakistan and carry out terror strikes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X