ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಮ ವರ್ಗದ ನಿದ್ದೆ ಕಸಿದುಕೊಳ್ಳಲಿದೆ ರೈಲ್ವೆ ಇಲಾಖೆ!

|
Google Oneindia Kannada News

ಬೆಂಗಳೂರು, ಜು. 28 : ಭಾರತೀಯ ರೈಲ್ವೆ ಭವಿಷ್ಯದಲ್ಲಿ ಮಧ್ಯಮ ವರ್ಗದ ಜನರ ನಿದ್ದೆಯನ್ನು ಕಸಿದುಕೊಳ್ಳಲಿದೆಯೇ?. ಹೌದು, ಎಕ್ಸ್ ಪ್ರೆಸ್ ಮತ್ತು ಸೂಪರ್ ಫಾಸ್ಟ್ ರೈಲುಗಳಲ್ಲಿ ಹಳೆಯದಾದ ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ ಗಳನ್ನು ತ್ರೀ ಟೈರ್‌ ಎಸಿ ಕೋಚ್‌ ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ದಕ್ಷಿಣ ರೈಲ್ವೆ ಆರಂಭಿಸಿದೆ.

ರೈಲ್ವೆ ಇಲಾಖೆಯ ಭವಿಷ್ಯದ ಆಲೋಚನೆಯ ಈ ಕ್ರಮದಿಂದ ಒಂದು ವರ್ಗದ ಜನರಿಗೆ ಐಷಾರಾಮಿ ಪ್ರಯಾಣ ಸೌಲಭ್ಯ ದೊರಕಿದರೆ, ಇನ್ನೊಂದು ವರ್ಗದ ಜನರ ಜೇಬಿಗೆ ಕತ್ತರಿ ಬೀಳಲಿದೆ. ಮುಂದಿನ ಐದು ವರ್ಷಗಳಲ್ಲಿ ಎಕ್ಸ್ ಪ್ರೆಸ್ ಮತ್ತು ಸೂಪರ್ ಫಾಸ್ಟ್‌ ರೈಲುಗಳ ಎಲ್ಲ ದ್ವಿತೀಯ ದರ್ಜೆ ಬೋಗಿಗಳನ್ನು ಬದಲಾಯಿಸುವ ಆಲೋಚನೆ ಇಲಾಖೆಯ ಮುಂದಿದೆ.

ತನ್ನ ಆಲೋಚನೆಯನ್ನು ಈಗಾಗಲೇ ರೈಲ್ವೆ ಇಲಾಖೆ ಕಾರ್ಯರೂಪಕ್ಕ ತಂದಿದೆ. ಮೊದಲ ಹಂತದಲ್ಲಿ ಎರ್ನಾಕುಳಂ ಜಂಕ್ಷನ್‌ - ನಿಜಾಮುದ್ದೀನ್‌ ಮಂಗಳಾ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ-12617) ರೈಲಿನ ಎಸ್‌-2 ಸ್ಲೀಪರ್‌ ಕೋಚ್‌ ಅನ್ನು ಭಾನುವಾರ ಬದಲಾವಣೆ ಮಾಡಲಾಗಿದ್ದು, ಅದರ ಜಾಗದಲ್ಲಿ ಎಸಿ 3 ಟೈರ್‌ ಕೋಚ್‌ (ಬಿ-4) ಅಳವಡಿಸಲಾಗಿದೆ. [ಶೀಘ್ರದಲ್ಲೇ ಮಂಗಳೂರು-ಬೆಂಗಳೂರು ಕುಡ್ಲ ರೈಲು]

ರೈಲ್ವೆ ಇಲಾಖೆಯ ಈ ಬದಲಾವಣೆಯಿಂದಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಏಕೆಂದರೆ, ಎರ್ನಾಕುಳಂನಿಂದ ನಿಜಾಮುದ್ದೀನ್‌ಗೆ ದ್ವಿತೀಯ ದರ್ಜೆ ಸ್ಲೀಪರ್‌ ಟಿಕೆಟ್‌ ಶುಲ್ಕ 925 ರೂ.ಗಳಾಗಿದ್ದರೆ, ತ್ರೀ ಟೈರ್‌ ಎಸಿ ಟಿಕೆಟ್‌ ಶುಲ್ಕ 2,370 ರೂ.ಗಳಾಗಿವೆ. ಇಲಾಖೆಯ ಯೋಜನೆ ಪ್ರಕಾರ ಮುಂದಿನ ದಿನಗಳಲ್ಲಿ ಎಕ್ಸ್ ಪ್ರೆಸ್ ಮತ್ತು ಸೂಪರ್‌ ಫಾಸ್ಟ್‌ ರೈಲುಗಳಲ್ಲಿ ದ್ವಿತೀಯ ದರ್ಜೆ ಬೋಗಿಗಳ ಬದಲು ಎಸಿ 3 ಟೈರ್‌ ಕೋಚ್‌ ಸೇರ್ಪಡೆಯಾಗಲಿದೆ. ಏನಿದು ಯೋಜನೆ ಇಲ್ಲಿದೆ ವಿವರ

ರೈಲ್ವೆ ಇಲಾಖೆಯ ಹೊಸ ಚಿಂತನೆ

ರೈಲ್ವೆ ಇಲಾಖೆಯ ಹೊಸ ಚಿಂತನೆ

ಎಕ್ಸ್ ಪ್ರೆಸ್ ರೈಲುಗಳಲ್ಲಿ ಹಳೆಯದಾದ ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ ಗಳನ್ನು ತ್ರೀ ಟೈರ್‌ ಎಸಿ ಕೋಚ್‌ ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ದಕ್ಷಿಣ ರೈಲ್ವೆ ಆರಂಭಿಸಿದೆ. ಈ ಯೋಜನೆಯನ್ನು ಭಾನುವಾರದಿಂದಲೇ ಇಲಾಖೆ ಜಾರಿಗೆ ತಂದಿದೆ.

ಹೊಸ ಯೋಜನೆಯಿಂದ ಏನಾಗುತ್ತದೆ?

ಹೊಸ ಯೋಜನೆಯಿಂದ ಏನಾಗುತ್ತದೆ?

ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ ಗಳನ್ನು ತ್ರೀ ಟೈರ್‌ ಎಸಿ ಕೋಚ್‌ ಗಳಾಗಿ ಪರಿವರ್ತಿಸಿದರೆ, ಒಂದು ವರ್ಗದ ಜನರಿಗೆ ಐಷಾರಾಮಿ ಪ್ರಯಾಣ ಸೌಲಭ್ಯ ದೊರಕಿದರೆ, ಇನ್ನೊಂದು ವರ್ಗದ ಜನರ ಜೇಬಿಗೆ ಕತ್ತರಿ ಬೀಳಲಿದೆ.

ಭವಿಷ್ಯದ ಚಿಂತನೆ ಏನು?

ಭವಿಷ್ಯದ ಚಿಂತನೆ ಏನು?

ಈ ಬದಲಾವಣೆಯ ಹೆಚ್ಚಿನ ಲಾಭ ರೈಲ್ವೆ ಇಲಾಖೆಯ ಪಾಲಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಎಕ್ಸ್ ಪ್ರೆಸ್ ಮತ್ತು ಸೂಪರ್‌ ಫಾಸ್ಟ್‌ ರೈಲುಗಳ ಎಲ್ಲ ದ್ವಿತೀಯ ದರ್ಜೆ ಬೋಗಿಗಳನ್ನು ಬದಲಾಯಿಸುವ ಆಲೋಚನೆ ಇಲಾಖೆಯ ಮುಂದಿದೆ. ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ ಗಳ ಜಾಗಕ್ಕೆ ತ್ರೀ ಟೈರ್‌ ಎಸಿ ಸೇರ್ಪಡೆಯಾಗಲಿದೆ.

ಮೊದಲ ಹಂತದಲ್ಲಿ ಅನುಷ್ಠಾನ

ಮೊದಲ ಹಂತದಲ್ಲಿ ಅನುಷ್ಠಾನ

ತನ್ನ ಆಲೋಚನೆಯನ್ನು ಈಗಾಗಲೇ ರೈಲ್ವೆ ಇಲಾಖೆ ಕಾರ್ಯರೂಪಕ್ಕ ತಂದಿದೆ. ಮೊದಲ ಹಂತದಲ್ಲಿ ಎರ್ನಾಕುಳಂ ಜಂಕ್ಷನ್‌ - ನಿಜಾಮುದ್ದೀನ್‌ ಮಂಗಳಾ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ-12617) ರೈಲಿನ ಎಸ್‌-2 ಸ್ಲೀಪರ್‌ ಕೋಚ್‌ ಅನ್ನು ಬದಲಾವಣೆ ಮಾಡಲಾಗಿದ್ದು, ಅದರ ಜಾಗಕ್ಕೆ ಎಸಿ 3 ಟೈರ್‌ ಕೋಚ್‌ (ಬಿ-4) ಅಳವಡಿಸಲಾಗಿದೆ. ನೂತನ ಯೋಜನೆಯಿಂದಾಗಿ ರೈಲಿನಲ್ಲಿ 10 ಸ್ಲೀಪರ್‌ ಕೋಚ್‌ಗಳು, ನಾಲ್ಕು ಎಸಿ ತ್ರೀ ಟೈರ್‌ ಕೋಚ್‌ಗಳು ಹಾಗೂ ಎರಡು ಎಸಿ ಟೂ ಟೈರ್‌ ಕೋಚ್‌ಗಳಿವೆ.

ಜನರ ಜೇಬಿಗೆ ಕತ್ತರಿ

ಜನರ ಜೇಬಿಗೆ ಕತ್ತರಿ

ಎರ್ನಾಕುಳಂನಿಂದ ನಿಜಾಮುದ್ದೀನ್‌ ಗೆ ದ್ವಿತೀಯ ದರ್ಜೆ ಸ್ಲೀಪರ್‌ ಟಿಕೆಟ್‌ ಶುಲ್ಕ 925 ರೂ.ಗಳಾಗಿದ್ದರೆ, ತ್ರೀ ಟೈರ್‌ ಎಸಿ ಟಿಕೆಟ್‌ ಶುಲ್ಕ 2,370 ರೂ.ಗಳಾಗಿವೆ. ಮುಂದಿನ ದಿನಗಳಲ್ಲಿ ಇಲಾಖೆಯ ಈ ಯೋಜನೆಯಿಂದಾಗಿ ಜನಸಾಮಾನ್ಯರು ಬಳಸುತ್ತಿದ್ದ 72 ನಾನ್‌-ಎಸಿ ಸ್ಲೀಪರ್‌ ಬರ್ತ್‌ಗಳು ಕಡಿಮೆಯಾಗಲಿವೆ.

ಕರ್ನಾಟಕಕ್ಕೂ ಅನ್ವಯ

ಕರ್ನಾಟಕಕ್ಕೂ ಅನ್ವಯ

ಕರ್ನಾಟಕದಲ್ಲಿ ಹಾದುಹೋಗುವ ಎರಡು ರೈಲುಗಳ ಸ್ಲೀಪರ್‌ ಕೋಚ್‌ ಗಳನ್ನು ಎಸಿ ಕೋಚ್‌ ಗಳಾಗಿ ಬದಲಾವಣೆಯಾಗಲಿದೆ. ಚೆನ್ನೈ ಎಗ್‌ ಮೋರ್‌-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16859) ರೈಲಿನ ಎಸ್‌-7 ಸ್ಲೀಪರ್‌ ಕ್ಲಾಸ್‌ ಕೋಚನ್ನು ಬದಲಿಸಿ ಅದರ ಜಾಗದಲ್ಲಿ ಎಸಿ ಚೇರ್‌ ಕಾರ್‌ (ಡಿ-4) ಅನ್ನು ಮತ್ತು ಮಂಗಳೂರು ಸೆಂಟ್ರಲ್‌ - ಚೆನ್ನೈ ಎಗ್‌ಮೋರ್‌ ಎಕ್ಸ್‌ಪ್ರೆಸ್‌ (ಟ್ರೈನ್ ಸಂಖ್ಯೆ- 16860) ರೈಲಿನ ಎಸ್‌-9 ಸ್ಲೀಪರ್‌ ಕೋಚ್‌ ಅನ್ನು ಬದಲಾಯಿಸಿ ಎಸಿ ಚೇರ್‌ ಕಾರ್‌ (ಡಿ-4) ಅನ್ನು ಅಳವಡಿಸಲಾಗುತ್ತದೆ.

ಸ್ಲೀಪರ್ ಕೋಚ್ ಉತ್ಪಾದನೆ ಕಡಿಯೆಯಾಗಿದೆ

ಸ್ಲೀಪರ್ ಕೋಚ್ ಉತ್ಪಾದನೆ ಕಡಿಯೆಯಾಗಿದೆ

ಈಗಾಗಲೇ ರೈಲ್ವೆ ಮಂಡಳಿ ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ ಗಳ ಉತ್ಪಾದನೆಯನ್ನು ಕಡಿಮೆಗೊಳಿಸಿದ್ದು, ಎಸಿ ಕೋಚ್‌ ಗಳ ನಿರ್ಮಾಣವನ್ನು ಹೆಚ್ಚಿಸಿದೆ. ಪಾಲಕ್ಕಾಡ್ ಮತ್ತು ತಿರುವನಂತಪುರಂ ವಿಭಾಗಗಳಿಗೆ ಹೊಸದಾಗಿ ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ ಗಳು ಮಂಜೂರಾಗಿಲ್ಲ. ಅವುಗಳ ಜಾಗದಲ್ಲಿ ತ್ರೀ ಟೈರ್‌ ಎಸಿ ಕೋಚ್‌ಗಳನ್ನು ಒಂದೊಂದಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ.

ಪ್ಯಾಸೆಂಜರ್ ರೈಲುಗಳಿಗೆ ಬರ್ತ್‌

ಪ್ಯಾಸೆಂಜರ್ ರೈಲುಗಳಿಗೆ ಬರ್ತ್‌

ಎಕ್ಸ್‌ ಪ್ರೆಸ್‌ ರೈಲುಗಳಿಂದ ತೆಗೆಯಲಾದ ಸ್ಲೀಪರ್‌ ಕೋಚ್‌ ಗಳನ್ನು ಪ್ಯಾಸೆಂಜರ್‌ ರೈಲುಗಳಲ್ಲಿ ಈಗಿರುವ ಮಿಡ್ಲ್‌ ಬರ್ತ್‌ಗಳ ಜಾಗದಲ್ಲಿ ಅಳವಡಿಸುವ ಆಲೋಚನೆಯೂ ಇದೆ ಎಂದು ತಿಳಿದುಬಂದಿದೆ.

English summary
Southern Railway has started replacing old second class sleeper compartments in several express trains with three-tier AC coaches. Railway board to replace all the second class compartments in express and super-fast trains with AC coaches within the next five-six years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X