ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ಊಟ ಬೇಕೆ 139ಗೆ ಎಸ್‌ಎಂಎಸ್ ಮಾಡಿ

|
Google Oneindia Kannada News

ನವದೆಹಲಿ, ಸೆ. 25 : ರೈಲ್ವೆ ಪ್ರಯಾಣಿಕರಿಗೆ ಹೊಟೇಲ್‌ ಊಟ ಒದಗಿಸುವ ರೈಲ್ವೆ ಇಲಾಖೆಯ ಇ-ಕ್ಯಾಟರಿಂಗ್‌ ಯೋಜನೆಗೆ ಗುರುವಾರ ಚಾಲನೆ ದೊರೆಯಲಿದೆ. ಪ್ರಾಯೋಗಿಕವಾಗಿ ಆರು ರೈಲುಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 139 ನಂಬರ್‌ಗೆ ಎಸ್‌ಎಂಎಸ್‌ ಮಾಡಿದರೆ, ನೀವಿರುವ ಬೋಗಿಗೆ ಊಟ ಬರುತ್ತದೆ.

ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಇಂದು ರೈಲಿನಲ್ಲಿ ಊಟ ಪೂರೈಕೆ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ರೈಲ್ವೆ ಪ್ಯಾಂಟ್ರಿ ಕಾರು ಇಲ್ಲದ ಆರು ರೈಲುಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಊಟ ಆರ್ಡರ್‌ ಮಾಡಲು ಮೀಲ್‌ ಎಂದು ಇಂಗ್ಲಿಷ್‌ನಲ್ಲಿ ಬರೆದು ತಮ್ಮ ಪಿಎನ್‌ಆರ್‌ ನಂಬರ್‌ ಜೊತೆ 139 ಸಂಖ್ಯೆಗೆ ಎಸ್‌ಎಂಎಸ್‌ ಮಾಡಬೇಕು. [ರೈಲಿನಲ್ಲಿ ಎಸ್ಸೆಂಎಸ್ ಮಾಡಿ ಊಟ ಪಡೆಯಿರಿ!]

Railways

ಪ್ರಯಾಣಿಕರ ಎಸ್‌ಎಂಎಸ್ ತಲುಪಿದ ಕೂಡಲೆ ಮೊದಲು ಪಿಎನ್‌ಆರ್‌ ನಂಬರ್‌ನ ಪರಿಶೀಲನೆಯಾಗುತ್ತದೆ. ನಂತರ ಪ್ರಯಾಣಿಕನನ್ನು ಸಂಪರ್ಕಿಸಿ ಊಟದ ಮೆನು ತಿಳಿಸುತ್ತಾರೆ. ಊಟದ ಹಣವನ್ನು ಊಟ ತಲುಪಿದ ಬಳಿಕ ಪ್ರಯಾಣಿಕರು ಪಾವತಿ ಮಾಡಬಹುದಾಗಿದೆ. ಎಸ್‌ಎಂಎಸ್‌ ಜೊತೆಗೆ ಫೋನ್‌ ಕರೆ ಮಾಡಿಯೂ ಊಟವನ್ನು ತರಿಸಿಕೊಳ್ಳಬಹುದು. ಇದಕ್ಕಾಗಿ ಇಲಾಖೆ 18001034 ಅಥವ 0120-438389299 ಸಂಖ್ಯೆಗಳನ್ನು ಕಾಯ್ದಿರಿಸಿದೆ. [ರೈಲಿನಲ್ಲೂ ಸಿಗುತ್ತೆ ಮಯ್ಯಾಸ್ ಉಪ್ಪಿಟ್ಟು, ಇಡ್ಲಿ]

ಇಂದು ಪ್ರಾಯೋಗಿಕವಾರಿ ಈ ಯೋಜನೆಗೆ ಚಾಲನೆ ದೊರೆಯಲಿದ್ದು, ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು, ಇ-ಕ್ಯಾಟರಿಂಗ್‌ ಸೌಲಭ್ಯವನ್ನು ವಿಸ್ತರಣೆ ಮಾಡಲು ಇಲಾಖೆ ಚಿಂತನೆ ನಡೆಸಿದೆ. ಐಆರ್‌ಸಿಟಿಸಿಯ ಫ‌ುಡ್‌ ಪ್ಲಾಜಾಗಳಿಂದ, ದೆಹಲಿ-ಅಮೃತಸರ ವಿಭಾಗದ ಕ್ಯಾಟರಿಂಗ್‌ ಘಟಕಗಳಿಂದ ಊಟ ಮತ್ತು ತಿಂಡಿ ಸರಬರಾಜಾಗುತ್ತದೆ. ಆರಂಭದಲ್ಲಿ ದೆಹಲಿ, ನಿಜಾಮುದ್ದೀನ್‌, ಅಮೃತಸರ ಮತ್ತು ಲೂಧಿಯಾನ ನಿಲ್ದಾಣಗಳಲ್ಲಿ ಮಾತ್ರ ಊಟ ವಿತರಣೆಯಾಗಲಿದೆ.

ಆರು ರೈಲುಗಳು ಯಾವುವು? : ರೈಲ್ವೆ ಇಲಾಖೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ದಿಲ್ಲಿ-ಪಠಾಣ್‌ಕೋಟ್‌ ಎಕ್ಸ್‌ಪ್ರೆಸ್‌, ಕಟಿಹಾರ್‌-ಅಮೃತಸರ ಎಕ್ಸ್‌ಪ್ರೆಸ್‌, ಅಮೃತಸರ-ಲೋಕಮಾನ್ಯ ತಿಲಕ್‌ ಟರ್ಮಿನಸ್‌ ಎಕ್ಸ್‌ಪ್ರೆಸ್‌, ಶಾನೆ ಪಂಜಾಬ್‌ ಎಕ್ಸ್‌ಪ್ರೆಸ್‌ , ಹೊಸದಿಲ್ಲಿ-ಅಮೃತಸರ ಎಕ್ಸ್‌ಪ್ರೆಸ್‌ ಮತ್ತು ಶಹೀದ್‌ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಆರಂಭಿಸಲಿದೆ.

English summary
Railway passengers can order meals of your taste through SMS 139 number from today. Indian railways is launching a mobile phone-based service in a move to offer multiple catering options to passengers. The e-catering service will be launched on September 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X