ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಪ್ರತಿಭಟನೆ ಸೇರಿದಂತೆ ಇತರ ಚಿತ್ರ ಸುದ್ದಿಗಳು

By Ashwath
|
Google Oneindia Kannada News

ನವದೆಹಲಿ, ಜು.8: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೇಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಸಂಸತ್ತಿನಲ್ಲಿ ಪುನರುಚ್ಚರಿಸಿದ್ದರೆ ಇತ್ತ ವಿರೋಧ ಪಕ್ಷಗಳು ರೈಲ್ವೆ ಬಜೆಟ್‌ ಬಗ್ಗೆ ಅಪಸ್ವರ ವ್ಯಕ್ತಪಡಿಸಿದೆ.

ಸಂಸತ್ತಿನಲ್ಲಿ ಗದ್ದಲದ ನಡುವೆ ಚೊಚ್ಚಲ ಬಜೆಟ್ ನಲ್ಲೇ ಸರಿ ಸುಮಾರು 58 ಹೊಸ ರೈಲುಗಳನ್ನು ಸದಾನಂದ ಗೌಡರು ಘೋಷಿಸಿದ್ದಾರೆ.[ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳನ್ನು ಕಡೆಗಣಿಸಲಾಗಿದೆ. ಯಾವುದೇ ದೂರದೃಷ್ಟಿ ಇಲ್ಲ ಎಂದು ರಾಹುಲ್‌ ಗಾಂಧಿ ಡಿವಿಎಸ್‌ ಬಜೆಟ್‌ನ್ನು ಟೀಕಿಸಿದ್ದರೆ, ಕಾಂಗ್ರೆಸ್‌ನ ಮುಖೇಶ್‌ ಶರ್ಮಾ ಅವರು ದೆಹಲಿಯ ಸದಾನಂದ ಗೌಡ ಅವರ ಮನೆಯ ನಾಮಫಲಕವನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. [ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?]

 ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್‌ನ ಮುಖೇಶ್‌ ಶರ್ಮಾ ಅವರು ದೆಹಲಿಯ ಸದಾನಂದ ಗೌಡ ಅವರ ಮನೆಯ ನಾಮಫಲಕವನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದರು.

 ಸಂಸತ್ತಿಗೆ ಭದ್ರತೆ:

ಸಂಸತ್ತಿಗೆ ಭದ್ರತೆ:

ಬಜೆಟ್‌ ಮಂಡನೆಯಾಗುತ್ತಿರುವ ಹಿನ್ನಲೆಯಲ್ಲಿ ಸಂಸತ್ತಿಗೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು.

 ಪತ್ರಿಕಾಗೋಷ್ಠಿ:

ಪತ್ರಿಕಾಗೋಷ್ಠಿ:

ಬಜೆಟ್‌ ಮಂಡನೆಯಾದ ಬಳಿಕ ಸಚಿವ ಡಿವಿ ಸದಾನಂದಗೌಡ ಮತ್ತು ರಾಜ್ಯ ಖಾತೆ ಸಚಿವ ಮನೋಜ್‌ ಸಿನ್ಹಾರ ಪತ್ರಿಕಾಗೋಷ್ಠಿ

ಲೈವ್‌ ಬಜೆಟ್‌:

ಲೈವ್‌ ಬಜೆಟ್‌:

ಸಚಿವ ಡಿವಿ ಸದಾನಂದಗೌಡ ಮಂಡಿಸುತ್ತಿರುವ ಬಜೆಟ್‌ನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ಕೋಲ್ಕತ್ತಾದ ಜನತೆ.

 ಅಬ್ಬಾ ಬಜೆಟ್‌ ಮಂಡನೆ ಮಾಡಿದೆ:

ಅಬ್ಬಾ ಬಜೆಟ್‌ ಮಂಡನೆ ಮಾಡಿದೆ:

ಬಜೆಟ್‌ ಮಂಡನೆಯಾದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಸಚಿವ ಡಿವಿ ಸದಾನಂದಗೌಡ ಮಾಹಿತಿ ನೀಡಿದರು.

 ಕಾಂಗ್ರೆಸ್‌ ಕಾರ್ಯ‌ಕರ್ತರ ಪ್ರತಿಭಟನೆ:

ಕಾಂಗ್ರೆಸ್‌ ಕಾರ್ಯ‌ಕರ್ತರ ಪ್ರತಿಭಟನೆ:

ಬಜೆಟ್‌ ವಿರೋಧಿಸಿ ಕಾಂಗ್ರೆಸ್‌ ಕಾರ್ಯ‌ಕರ್ತರು ನವದೆಹಲಿಯ ಸದಾನಂದ ಗೌಡರ ಮನೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

 ನೋ ಟೆನ್ಷನ್‌‌:

ನೋ ಟೆನ್ಷನ್‌‌:

ರೈಲ್ವೆ ಬಜೆಟ್‌ ಮಂಡನೆಯಾಗುತ್ತಿದ್ದರೆ, ಇತ್ತ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಳಿಗಳನ್ನು ದಾಟುತ್ತಿದ್ದರು.

English summary
Terming the Rail Budget presented by Union Railway Minister Sadananda Gowda as "useless", scores of Congress workers led by DPCC chief Arvinder Singh Lovely today staged a protest outside the minister's residence here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X