ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕಾರ್ಯಕರ್ತರ ಜತೆ ರಾಹುಲ್ Google Hangout

By Srinath
|
Google Oneindia Kannada News

ಅಹಮದಾಬಾದ್, ಮಾರ್ಚ್ 15- ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಪಕ್ಷದ ಕಾರ್ಯಕರ್ತರೊಂದಿಗೆ ಗೂಗಲ್ ಹ್ಯಾಂಗೌಟ್ ನಡೆಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ನಡುವೆ ಸೇತುವೆಯಾಗಬಯಸಿ ರಾಹುಲ್ Google Hangout
ನಡೆಸಿಕೊಡಲಿದ್ದಾರೆ.

ಭಾರತದಾದ್ಯಂತ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೊಂದಿಗೆ ಇಂದು (ಮಾರ್ಚ್ 15) ಬೆಳಗ್ಗೆ 11 ರಿಂದ 12ರ ನಡುವೆ Google Hangout live video ಮೂಲಕ ಸಂಪರ್ಕ ಹೊಂದಲಿದ್ದಾರೆ. ಈ ಸಂಬಂಧ ಎಲ್ಲ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಕಚೇರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ತಿಳಿಸಿದ್ದಾರೆ.

rahul-gandhi-interact-with-congress-party-worker-google-hangout-mar-15
ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಸ್ಥಳೀಯ ಘಟಕಗಳ ಮುಖ್ಯಸ್ಥರು ರಾಹುಲ್ ಗಾಂಧಿ ಜತೆ ನೇರವಾಗಿ ಚರ್ಚಿಸುವುದು ವಿರಳ. ಇದೀಗ ಅಂತಹ ಅವಕಾಶ ಪಕ್ಷದ ಕಾರ್ಯಕರ್ತರಿಗೆ ಒದಗಿ ಬಂದಿದೆ. ಅದನ್ನು ಸದುಪಯೋಗಪಡಿಸಿಕೊಂಡು ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು ಎಂದು ಪತ್ರದಲ್ಲಿ ಅಜಯ್ ಮಾಕನ್ ಹೇಳಿದ್ದಾರೆ.

ಮೊದಲ ಒಂದು ಗಂಟೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಬಳಿಕ ಸ್ಥಳೀಯ ಮುಖಂಡರೊಂದಿಗೂ ಮಾತುಕತೆ ನಡೆಸಲಿದ್ದಾರೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಮನೀಶ್ ದೋಶಿ ತಿಳಿಸಿದ್ದಾರೆ. ಕಾರ್ಯಕರ್ತರು ಇದಕ್ಕಾಗಿ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ Khidkee.com ಮೂಲಕ ಪ್ರಶ್ನೆಗಳನ್ನು ಕಳುಹಿಸಬಹುದು.

English summary
Lok Sabha Election 2014: Congress Vice-President Rahul Gandhi to interact with party workers on Google Hangout March 15. To bridge the gap between office bearers and party leaders, Congress Vice President Rahul Gandhi will hold a google hangout with party workers on Saturday. Rahul would connect with Congress party workers across India through a Google Hangout live video chat session between 11 am and 12 pm on March 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X