ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಏ. 12 : ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಶನಿವಾರ ಲೋಸಕಭೆ ಚುನಾವಣೆ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಮೂರನೇ ಬಾರಿ ಅಮೇಥಿ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಅಮೇಥಿಯಲ್ಲಿನ ಚುನಾವಣಾ ಕಣ ರಂಗೇರಿದೆ.

ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ರಾಹುಲ್ ಜೊತೆಗಿದ್ದರು.

ಅಮೇಥಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಮುನ್ನ, ಗೌರಿಗಂಜ್‌ನಿಂದ ಅಮೇಥಿಯ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 40 ಕಿ.ಮೀ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿದರು. ಗುಲಾಬಿ ಹೂಗಳನ್ನು ಹಾಕುವ ಮೂಲಕ ಸಾವಿರಾರು ಜನರು ರಾಹುಲ್ ಅವರನ್ನು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. [ಸೋನಿಯಾ ಗಾಂಧಿ ಮೈಸೂರು ಸಮಾವೇಶದ ಚಿತ್ರಗಳು]

ರಾಹುಲ್ ಗಾಂಧಿ ನಾಮಪತ್ರ

ರಾಹುಲ್ ಗಾಂಧಿ ನಾಮಪತ್ರ

ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ರಾಹುಲ್ ಜೊತೆಗಿದ್ದರು.

40 ಕಿಮೀ ರೋಡ್ ಶೋ

40 ಕಿಮೀ ರೋಡ್ ಶೋ

ನಾಮಪತ್ರ ಸಲ್ಲಿಕೆ ಮಾಡುವ ಮುನ್ನ, ಗೌರಿಗಂಜ್‌ನಿಂದ ಅಮೇಥಿಯ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 40 ಕಿ.ಮೀ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿದರು.

ರಾಹುಲ್ ಆಸ್ತಿ ಕೇವಲ 8 ಕೋಟಿ

ರಾಹುಲ್ ಆಸ್ತಿ ಕೇವಲ 8 ಕೋಟಿ

ನಾಮಪತ್ರ ಸಲ್ಲಿಸುವಾಗ ರಾಹುಲ್ ಗಾಂಧಿ ತಮ್ಮ ಬಳಿ ಒಟ್ಟು 8 ಕೋಟಿ 7 ಲಕ್ಷ 68 ಸಾವಿರ ಆಸ್ತಿ ಮೌಲ್ಯವಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ತಮಗೆ ಸ್ವಂತ ಮನೆ ಇಲ್ಲ, ಯಾವುದೇ ಜಮೀನು ಹೊಂದಿಲ್ಲ ಎಂದು ರಾಹುಲ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ರಂಗೇರಿದ ಅಮೇಥಿ ಚುನಾವಣಾ ಅಖಾಡ

ರಂಗೇರಿದ ಅಮೇಥಿ ಚುನಾವಣಾ ಅಖಾಡ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಮೇಥಿಯಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ ಹಾಗೂ ಎಎಪಿಯಿಂದ ಕುಮಾರ್ ವಿಶ್ವಾಸ್ ಕಣಕ್ಕಿಳಿದಿದ್ದಾರೆ.

English summary
Elections 2014 : Congress vice president Rahul Gandhi, who faces a triangular contest from the family pocket borough of Amethi, filed nomination papers from Amethi on Saturday following a massive roadshow. Priyanka Vadra and her husband Robert Vadra accompanied Rahul Gandhi during his 40km-long roadshow from Gauriganj to Amethi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X