ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಸ್ತಿ ಬಹಿರಂಗ

By Srinath
|
Google Oneindia Kannada News

ರಾಯ್‌ ಬರೇಲಿ, ಏಪ್ರಿಲ್ 2: ರಾಯ್‌ ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಆಸ್ತಿ ವಿವರವನ್ನು ಪ್ರಕಟಿಸಿದ್ದಾರೆ.

ಸೋನಿಯಾ ಗಾಂಧಿ ಬಳಿ ಬಾಡಿಗೆ ಕಾರು ಇಲ್ವಂತೆ, ಸ್ವಂತ ಕಾರೂ ಇಲ್ವಂತೆ! ಇನ್ನು ಇಡೀ ಭಾರತದಲ್ಲಿ ಎಲ್ಲೂ ಸೋನಿಯಾ ಹೆಸರಿನಲ್ಲಿ ಒಂದು ಮನೆ ಅಂತ ಇಲ್ವಂತೆ. ಆದರೆ ತಮ್ಮ ತವರಿನಲ್ಲಿ (ಇಟಲಿ) ಪಿತ್ರಾರ್ಜಿತ ಮನೆಯಿದೆಯಂತೆ.

ಗಮನಾರ್ಹವೆಂದರೆ ಇಂದು ಬುಧವಾರ ನಾಮಪತ್ರ ಸಲ್ಲಿಸಿದ ವೇಳೆ ಸೋನಿಯಾ ಅವರನ್ನು ಚುನಾವಣಾಧಿಕಾರಿ ಕಚೇರಿಯವರೆಗೂ (returning officer) ಕರೆತಂದಿದ್ದು ಸ್ವತಃ ಅವರ ಪುತ್ರ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಖುದ್ದು ರಾಹುಲ್ ಅವರೇ ಕಾರನ್ನು ಡ್ರೈವ್ ಮಾಡಿಕೊಂಡು ಬಂದಿದ್ದರು.


ತಮ್ಮ ಕೈಯಲ್ಲಿ ಕೇವಲ 85,000 ರೂ ನಗದು ಇದೆ ಎಂದು ತಿಳಿಸಿರುವ ಸೋನಿಯಾ, ತಾವು 9 ಲಕ್ಷ ರೂ ಸಾಲ ತೀರಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಬ್ಯಾಂಕ್ ಖಾತೆಗಳಲ್ಲಿ 66 ಲಕ್ಷ ರೂ ಜಮಾ ಮಾಡಿರುವುದಾಗಿ ತಿಳಿಸಿರುವ ಸೋನಿಯಾ, 23 ಲಕ್ಷ ರೂ ಮೌಲ್ಯದ ಹಳೆಯ ಚಿನ್ನಾಭರಣ ಇದೆ ಎಂದಿದ್ದಾರೆ. ಜತೆಗೆ 1.267 ಕೆಜಿ ಚಿನ್ನ ಮತ್ತು 88 ಕೆಜಿ ಬೆಳ್ಳಿ ಪದಾರ್ಥಗಳು ಇವೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.

ಉತ್ತರಪ್ರದೇಶದಿಂದ ನಾಲ್ಕು ಬಾರಿ ಜಯ ಗಳಿಸಿರುವ ಸೋನಿಯಾ 12 ಲಕ್ಷ ರೂ.ಗಳನ್ನು ಮ್ಯೂಚ್ಯುವಲ್ ಫಂಡ್ ಗಳಲ್ಲಿ ತೊಡಗಿಸಿದ್ದಾರೆ. ದಿಲ್ಲಿಯ ಸುಲ್ತಾನಪುರ್ ಮತ್ತು ದೇರಾ ಮಂಡಿ ಗ್ರಾಮದಲ್ಲಿ 4.86 ಕೋಟಿ ರೂ. ಮೌಲ್ಯದ 3.21 ಎಕರೆ ಜಮೀನು ಇರುವುದಾಗಿ ಸೋನಿಯಾ ತಿಳಿಸಿದ್ದಾರೆ. 2009ರ ಚುನಾವಣಾ ಅಫಿಡವಿಡ್ ಗೆ ಹೋಲಿಸಿದಲ್ಲಿ ಸೋನಿಯಾ ಬಳಿಯಿರುವ ನಗದು ಮೊತ್ತ 10,000 ರೂಪಾಯಿಯಷ್ಟು ಹೆಚ್ಚಾಗಿದೆ.

rae-bareli-cp-sonia-gandhi-declares-her-assets

ಪ್ರತಿಷ್ಠಿತ ರಾಯ್‌ ಬರೇಲಿ ಕ್ಷೇತ್ರ ಗಾಂಧಿ ಕುಟುಂಬದ ಮೂಲ ಕ್ಷೇತ್ರ ಕೂಡ ಆಗಿದ್ದು, ಈ ಹಿಂದೆ ಸೋನಿಯಾ ಗಾಂಧಿ ಅವರ ಅತ್ತೆ ಇಂದಿರಾ ಗಾಂಧಿ ಸಹ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2004ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸೋನಿಯಾ ಗಾಂಧಿ ಈಗ ಮೂರನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಈ ಬಾರಿ ಸೋನಿಯಾ ಕೈಯಲ್ಲಿರುವ ಅಧಿಕಾರದ ಚುಕ್ಕಾಣಿಯನ್ನು ತಮ್ಮ ಕೈಗೆ ಹಸ್ತಾಂತರಿಸಿಕೊಳ್ಳಬೇಕೆಂದು ಹಂಬಲಿಸುತ್ತಿರುವ ಬಿಜೆಪಿ, ರಾಯ್‌ ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯವಾದಿ ಅಜಯ್ ಅಗರವಾಲ್ ಅವರನ್ನು ಕಣಕ್ಕಿಳಿಸಿದೆ.

English summary
Lok Sabha Election 2014: According to sources AICC President Sonia Gandhi in Rae Bareli declares her assets has no car house. Congress president Sonia Gandhi neither has a car of her own nor does she have enough cash. And she has to repay a loan of Rs.9 lakh too. Her affidavit shows she has no apartment or house in her name in India though there is an ancestral property in Italy, her birth place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X