ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಮ್ಮೆಯ ಎಚ್ಎಂಟಿ ಕಂಪನಿಗೆ ಬೀಳಲಿದೆ ಬೀಗ

|
Google Oneindia Kannada News

ಬೆಂಗಳೂರು, ಸೆ. 12 : ಎಚ್‌ಎಂಟಿ ವಾಚ್ ಕಂಪನಿಯ ಸಮಯ ಸರಿಯಾಗಿಲ್ಲ. ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಕಂಪನಿಗೆ ಬೀಗ ಹಾಕಲು ತೀರ್ಮಾನಿಸಲಾಗಿದೆ. ಭಾರತೀಯರ ಕೈ ಅಲಂಕರಿಸಿದ್ದ ಹೆಮ್ಮೆಯ ಬ್ರಾಂಡ್ ಎಚ್ಎಂಟಿ ಕೆಲವು ದಿನಗಳಲ್ಲಿ ಇತಿಹಾಸ ಸೇರಲಿದೆ.

53 ವರ್ಷಗಳಿಂದ ಭಾರತೀಯರಿಗೆ ನಿಖರ ಸಮಯ ತೋರಿಸುತ್ತಿದ್ದ ಕಂಪನಿ 2000ದಿಂದ ನಷ್ಟದ ಹಾದಿಯಲ್ಲಿ ಸಾಗುತ್ತಾ ಬಂದಿದೆ. ನೌಕರರಿಗೂ ಸಂಬಳ ನೀಡಲು ಕಷ್ಟಪಡುತ್ತಿರುವ ಕಂಪನಿಯನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಉದ್ದಿಮೆಗಳ ಪುನಾರಚನಾ ಮಂಡಳಿಯು ಎಚ್‌ಎಂಟಿ ವಾಚಸ್‌ ಕಂಪನಿ ಮುಚ್ಚುವಂತೆ ಈಗಾಗಲೇ ಶಿಫಾರಸು ಮಾಡಿದೆ.

HMT Watches

1961ರಲ್ಲಿ ಜಪಾನ್‌ನ ಸಿಟಿಜನ್‌ ವಾಚ್‌ ಕಂಪನಿಯ ಸಹಯೋಗದಲ್ಲಿ ಆರಂಭವಾದ ಎಚ್‌ಎಂಟಿ ವಾಚಸ್‌ ಕಂಪನಿಯು 2011-12ನೇ ಸಾಲಿನಲ್ಲಿ 224.04 ಕೋಟಿ ರೂ. ನಷ್ಟ ಅನುಭವಿಸಿತು. 2012-13ನೇ ಸಾಲಿನಲ್ಲಿ ಇದು 242.47 ಕೋಟಿ ರೂ.ಗೆ ಏರಿತು. 2012ರಲ್ಲಿ ಕೇಂದ್ರ ಸರ್ಕಾರ ಈ ಕಂಪನಿಗೆ 694.52 ಕೋಟಿ ರೂ. ಸಾಲ ನೀಡಿದರೂ ಕಂಪನಿ ನಷ್ಟದಿಂದ ಬಿಡುಗಡೆ ಹೊಂದಿಲ್ಲ.

ಕಂಪನಿಯನ್ನು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿರುವುದರಿಂದ ಅದನ್ನು ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ. ಎಚ್ಎಂಟಿ ಆಡಳಿತ ಮಂಡಳಿ ಸಹ ಕಂಪನಿ ಮುಚ್ಚಲು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಈ ಕಾರ್ಯ ಆರಂಭವಾಗಲಿದೆ. ಬೆಂಗಳೂರು, ತುಮಕೂರು ಸೇರಿದಂತೆ ದೇಶದ 4 ಕಡೆ ಉತ್ಪಾದನಾ ಘಟಕವನ್ನು ಎಚ್ಎಂಟಿ ಹೊಂದಿದೆ.

English summary
HMT Watches will be shutting shop soon. The government has decided to wind up the company, a wholly-owned subsidiary of HMT Ltd, which has been incurring losses since 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X