ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಮೋದಿ ಸಂಪುಟ ವಿಸ್ತರಣೆ: ಸಂಭಾವ್ಯರ ಪಟ್ಟಿ

|
Google Oneindia Kannada News

ನವದೆಹಲಿ, ಜು 30: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮುಂಗಾರು ಅಧಿವೇಶನದ ಮುಗಿದ ಬಳಿಕ ಅಂದರೆ ಆಗಸ್ಟ್ 14ರ ನಂತರ ನಡೆಯಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮೋದಿಯವರ ಎರಡನೇ ಸಂಪುಟ ವಿಸ್ತರಣೆಯಲ್ಲಿ ಹನ್ನೆರಡು ಆಕಾಂಕ್ಷಿಗಳು ಸಂಪುಟ ಸೇರುವ ಸಾಧ್ಯತೆಯಿದೆ. ಈ ಸಂಬಂಧ ಪಕ್ಷದ ಹಿರಿಯರು ಆಡ್ವಾಣಿ, ಅಮಿತ್ ಶಾ ಮತ್ತು ಆರ್ಎಸ್ಎಸ್ ಮುಖಂಡರ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. (ಮೋದಿ ಪ್ರಮಾಣ ವಚನಕ್ಕೆ ಎಷ್ಟು ಖರ್ಚಾಯ್ತು)

ಮೇ 26ರಂದು ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿ ಮೊದಲನೇ ಕಂತಿನಲ್ಲಿ 44 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ರಾಜ್ಯಾವಾರು ಪ್ರಾತಿನಿಧ್ಯ ಸಿಕ್ಕಿರಲಿಲ್ಲ ಎಂದು ಸಣ್ಣ ಮಟ್ಟಿನ ಅಸಮಾಧಾನ ಆಗ ವ್ಯಕ್ತವಾಗಿತ್ತು.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತು ಹಿರಿತನದ ಆಧಾರದ ಮೇಲೆ ಹನ್ನೆರಡು ಆಕಾಂಕ್ಷಿಗಳು ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಸಂಪುಟ ಸೇರಲಿರುವ ಸಂಭಾವ್ಯರು ಯಾರು? ಸ್ಲೈಡಿನಲ್ಲಿ ನೋಡಿ..

ಹಜಾರಿಬಾಗ್ ಸಂಸದ

ಹಜಾರಿಬಾಗ್ ಸಂಸದ

ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಸಂಸದ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಪುತ್ರ ಜಯಂತ್ ಸಿನ್ಹಾ ಸಂಪುಟ ಸೇರಲಿರುವ ಸಂಭಾವ್ಯರಲ್ಲೊಬ್ಬರು.

ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದ ಜೆ ಪಿ ನಡ್ಡಾ

ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದ ಜೆ ಪಿ ನಡ್ಡಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದ ಪ್ರಭಲ ಅಕಾಂಕ್ಷಿಯಾಗಿದ್ದ ಮತ್ತು ಪ್ರಧಾನ ಕಾರ್ಯದರ್ಶಿಯಾಗಿರುವ ಜೆ ಪಿ ನಡ್ಡಾ ಕೂಡಾ ಸಂಭಾವ್ಯರಲ್ಲೊಬ್ಬರು.

ವಸುಂಧರಾ ಒತ್ತಡಕ್ಕೆ ಮಣೆಹಾಕಿದ ಮೋದಿ

ವಸುಂಧರಾ ಒತ್ತಡಕ್ಕೆ ಮಣೆಹಾಕಿದ ಮೋದಿ

ರಾಜಸ್ಥಾನದಲ್ಲಿ ಪಕ್ಷ ಕ್ಲೀನ್ ಸ್ವೀಪ್ ಮಾಡಿದ್ದರೂ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ವಸುಂಧರಾ ಕೋಪ ಶಮನ ಮಾಡಲು ಮೂರು ಸ್ಥಾನ ನೀಡಲು ಮೋದಿ ಮುಂದಾಗಿದ್ದಾರೆ. ಅದರಲ್ಲಿ ಅಜ್ಮೀರ್ ಸಂಸದ ಸನ್ವರ್ ಲಾಲ್ ಚಾಟ್ ಒಬ್ಬರು.

ಹಾಗೆಯೇ, ರಾಜಸ್ಥಾನದ ಇನ್ನೊಬ್ಬ ಪ್ರಭಲ ಮುಖಂಡ, ಮೋದಿಗೆ ಆಪ್ತರೂ ಆಗಿರುವ ರಾಜ್ಯಸಭಾ ಸದಸ್ಯ ಭೂಪೀಂದ್ರ ಯಾದವ್ ಸಂಭಾವ್ಯರ ಪಟ್ಟಿಯಲ್ಲಿರುವ ಮತ್ತೊಬ್ಬರು.(ಚಿತ್ರದಲ್ಲಿ ಭೂಪಿಂದರ್ ಯಾದವ್)

ಸಂಪುಟ ಸೇರಲಿರುವ ಸಂಭಾವ್ಯ ಇತರ ಮೂವರು + 1

ಸಂಪುಟ ಸೇರಲಿರುವ ಸಂಭಾವ್ಯ ಇತರ ಮೂವರು + 1

ರಾಜಸ್ಥಾನದ ಗಂಗಾನಗರ ಸಂಸದ ನಿಹಾಲ್ ಚಂದ್

ಉತ್ತರಾಖಂಡದ ನೈನಿತಾಲ್ - ಉಧಮ್ ಸಿಂಗ್ ನಗರದ ಹಿರಿಯ ಸಂಸದ ಭಗತ್ ಸಿಂಗ್ ಕೋಶಿಯಾರಿ

ಬಾಬಾ ರಾಮದೇವ್ ಆಪ್ತ ಮತ್ತು ಉತ್ತರಾಖಂಡದ ಮಾಜಿ ಸಿಎಂ ಆಗಿರುವ ರಮೇಶ್ ಪೋಖ್ರಿಯಾಲ್ ನಿಶಾಂಕ್

ಶಿವಸೇನೆ, ಅಪ್ನಾದಳ ಜಂಟಿಯಾಗಿ ಹೆಸರಿಸುವ ಒಬ್ಬ ಸಂಸದ
(ಚಿತ್ರದಲ್ಲಿ ನಿಹಾಲ್ ಚಂದ್)

ಸಂಪುಟ ಸೇರಲಿರುವ ಸಂಭಾವ್ಯ ನಾಲ್ವರು ಆಕಾಂಕ್ಷಿಗಳು

ಸಂಪುಟ ಸೇರಲಿರುವ ಸಂಭಾವ್ಯ ನಾಲ್ವರು ಆಕಾಂಕ್ಷಿಗಳು

ಪಶ್ಚಿಮ ಬಂಗಾಳದ ಅಸನ್ಸೋಲ್ ಸಂಸದ ಬಾಬೂಲ್ ಸುಪ್ರೀಯೋ

ಮಹಾರಾಷ್ಟ್ರ ಚಂದ್ರಾಪುರ ಸಂಸದ ಹನ್ಸರಾಜ್ ಗಂಗಾರಾಮ್ ಆಹಿರ್

ಮಹಾರಾಷ್ಟ್ರದ ಅಹಮದ್ ನಗರ ಸಂಸದ ದಿಲೀಪ್ ಕುಮಾರ್ ಮನ್ಶುಕ್ ಲಾಲ್ ಗಾಂಧಿ

ಆಂಧ್ರಪ್ರದೇಶದ ಸಿಕಂದರಾಬಾದ್ ಕ್ಷೇತ್ರದ ಸಂಸದ, ಹಿರಿಯ ಮುಖಂಡ ಬಂಡಾರು ದತ್ತಾತ್ರೇಯ

(ಚಿತ್ರದಲ್ಲಿ ಬಾಬೂಲ್ ಸುಪ್ರೀಯೋ)

English summary
Prime Minister Narendra Modi may pick twelve ministers to union cabinet after August 14, Hindustan Times report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X