ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶಕ್ಕೆ ಮುನ್ನವೇ ಪ್ರಧಾನಿ ಸಿಂಗ್ ಮನೆ ಶಿಫ್ಟ್?

|
Google Oneindia Kannada News

ನವದೆಹಲಿ, ಏ 7: ಲೋಕಸಭಾ ಚುನಾವಣೆಗೆ ಮುನ್ನವೇ ಪ್ರಧಾನಿ ಮನಮೋಹನ್ ಸಿಂಗ್ ನಿವೃತ್ತಿ ನಂತರದ ಬಂಗಲೆಗೆ ಶಿಫ್ಟ್ ಆಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಗೆ ಪೂರಕ ಎನ್ನುವಂತೆ, ನಗರದ ಮೋತಿಲಾಲ್ ನೆಹರೂ ರಸ್ತೆಯಲ್ಲಿರುವ ನಾಲ್ಕು ಕೋಣೆಯ ವಿಶಾಲ ಬಂಗಲೆಯ ದುರಸ್ತಿ ಕೆಲಸವನ್ನು ಇದೇ ತಿಂಗಳ 30ನೇ ತಾರೀಕಿನೊಳಗೆ ಪೂರ್ಣಗೊಳಿಸಲು ಪ್ರಧಾನಮಂತ್ರಿ ಕಾರ್ಯಾಲಯ CPWD ಇಲಾಖೆಗೆ ಸೂಚಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ಹಿಂದೆ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಾಸವಾಗಿದ್ದ ಈ ಬಂಗಲೆ ಫೆಬ್ರವರಿ ತಿಂಗಳಲ್ಲಿ ತೆರವಾಗಿತ್ತು. ತೆರವಾದ ನಂತರ ಈ ಬಂಗಲೆಯನ್ನು ಮನಮೋಹನ್ ಸಿಂಗ್ ಅವರಿಗೆ ಮೀಸಲಿಡಲು ನಿರ್ಧರಿಸಲಾಗಿತ್ತು.

Prime Minister Manmohan Singh prepares to moves out of PMs residence

ಸುಮಾರು ಎರಡುವರೆ ಎಕರೆ ಪ್ರದೇಶದಲ್ಲಿರುವ ಈ ಬಂಗಲೆ 1920ರಲ್ಲಿ ನಿರ್ಮಾಣವಾಗಿತ್ತು. ಸುಮಾರು 35ಲಕ್ಷ ರೂಪಾಯಿ ವೆಚ್ಚದಲ್ಲಿ ಬಂಗಲೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು ಈ ಮಾಸಾಂತ್ಯದೊಳಗೆ ದುರಸ್ತಿ ಕೆಲಸ ಕಾರ್ಯ ಮುಗಿಯಲಿದೆ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷ ಭದ್ರತಾ ದಳ (SPG) ಈಗಾಗಲೇ ಬಂಗಲೆಯನ್ನು ಪರಿಶೀಲಿಸಿದ್ದು, ಭದ್ರತಾ ವ್ಯವಸ್ಥೆಯಲ್ಲಿ ಮಾಡಬೇಕಾಗಿರುವ ಮಾರ್ಪಾಡುಗಳನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ತಿಳಿಸಿದೆ.

ಮನಮೋಹನ್ ಸಿಂಗ್ ಸದ್ಯ ಪ್ರಧಾನಮಂತ್ರಿಗಳಿಗಾಗಿರುವ ಅಧಿಕೃತ ನಿವಾಸ 7, ರೇಸ್ ಕೋರ್ಸ್ ರಸ್ತೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸವಾಗಿದ್ದಾರೆ.

English summary
Prime Minister Manmohan Singh prepares to moves out of PMs official residence even before Lok Sabha election results declares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X