ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಬಿಟ್ಟು ಮೋದಿಗೆ ಜೈ ಎಂದ ಗುಳಿಕೆನ್ನೆ ಚೆಲುವೆ

By Mahesh
|
Google Oneindia Kannada News

ವಾರಣಾಸಿ, ಮೇ .2: ಲೋಕಸಭೆ ಚುನಾವಣೆಗೆ ಇನ್ನೆರದು ಹಂತದ ಮತದಾನ ಮಾತ್ರ ಬಾಕಿ ಉಳಿದಿದೆ. ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರ ಪ್ರಚಾರ ನಡೆಸಲು ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಜ್ಜಾಗಿದ್ದಾರೆ. ವಾರಣಾಸಿ ಪ್ರವಾಸದಲ್ಲಿರುವ ಪ್ರೀತಿ, ಆಮ್ ಆದ್ಮಿ ಪಕ್ಷದ ಆಫರ್ ತಿರಸ್ಕರಿಸಿ ಮೋದಿ ಪರ ನಿಂತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪ್ರೀತಿ ಜಿಂಟಾ ಅವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರ ಬದಲಿಗೆ ಮೋದಿ ಪರ ನಿಂತಿರುವುದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದರು. ನಾನು ಮೋದಿ ಅವರ್ ಫ್ಯಾನ್ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಅವರ ಪರ ಪ್ರಚಾರ ಮಾಡುವ ಅವಶ್ಯಕತೆಯೇ ಇಲ್ಲ. ಮೋದಿ ಅಲೆ ಎಲ್ಲೆಲ್ಲೂ ಕಾಣಬಹುದು. ನಾನಿಲ್ಲಿ ದೇಶದ ಒಳಿತಿಗಾಗಿ ನನ್ನ ತಂಡ(ಕಿಂಗ್ಸ್ XI ಪಂಜಾಬ್) ದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ' ಎಂದಿದ್ದಾರೆ.

ದುಬೈನಲ್ಲಿ ನಡೆದಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ XI ತಂಡ ಎಲ್ಲಾ ಐದ್ ಪಂದ್ಯಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದೆ. ಅರಬ್ ನಾಡಿನಿಂದ ಭಾರತಕ್ಕೆ ಬಂದು ಮತದಾನ ಮಾಡಿದ್ದ ಪ್ರೀತಿ ಅವರು ಈಗ ಕಾಶಿ ಪ್ರವಾಸಕ್ಕೆ ಬಂದಿದ್ದರು.

ವಾರಣಾಸಿಯಲ್ಲಿ ಮೇ.12 ರಂದು ಮತದಾನ ನಡೆಯಲಿದ್ದು, ಎಎಪಿಯ ಅರವಿಂದ್ ಕೇಜ್ರಿಆಲ್, ಕಾಂಗ್ರೆಸ್ಸಿನ ಅಜಯ್ ರಾಯ್ ವಿರುದ್ಧ ಬಿಜೆಪಿಯ ನರೇಂದ್ರ ಮೋದಿ ಕಣದಲ್ಲಿದ್ದಾರೆ.ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ವಾರಣಾಸಿ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು.

ನನಗೆ ಆಮ್ ಆದ್ಮಿಪಕ್ಷ ಇಷ್ಟ... ಆದರೆ..

ನನಗೆ ಆಮ್ ಆದ್ಮಿಪಕ್ಷ ಇಷ್ಟ... ಆದರೆ..

ನನಗೆ ಆಮ್ ಆದ್ಮಿಪಕ್ಷ ಇಷ್ಟ ಆದರೆ..ಅವರಿಗೆ ಇನ್ನೂ ಕಾಲಾವಕಾಶ ಬೇಕಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೋದಿ ಅವರು ಪ್ರಧಾನಿಯಾದರೆ ದೇಶಕ್ಕೆ ಒಳಿತು ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ.

ಚುನಾವಣೆ ಪ್ರಚಾರ ಮಾಡುವುದಿಲ್ಲ ಎಂದ ಪ್ರೀತಿ

ವಾರಣಾಸಿ ಪ್ರವಾಸ ಮುಗಿಸಿಕೊಂಡು ಮುಂಬೈಗೆ ವಾಪಸ್ ಬಂದಿರುವ ಪ್ರೀತಿ ಜಿಂಟಾ ಅವರು ತಾವು ಯಾವುದೇ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ, ಮುಂದೆ ಕೂಡಾ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.

ವಾರಣಾಸಿಯಲ್ಲಿ ಗಂಗೆ ಉಳಿಸಿ ಎಂದಿದ್ದ ಪ್ರೀತಿ

ವಾರಣಾಸಿಯಲ್ಲಿ ಪವಿತ್ರ ನದಿ ಗಂಗಾ ಕಲುಷಿತಗೊಂಡಿರುವುದು ಕಂಡರೆ ದುಃಖವಾಗುತ್ತದೆ ಎಂದು ಟ್ವೀಟ್

ವಾರಣಾಸಿಯಲ್ಲಿ ಮಾಧ್ಯಮಗಳ ಕೆಬಿಸಿ ಪ್ರಶ್ನೆ

ವಾರಣಾಸಿಗೆ ಬಂದ ನನಗೆ ಮಾಧ್ಯಮಗಳು ಕೆಬಿಸಿ ಮಾದರಿಯಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ನಾನು ಯಾವುದೆ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ಇದು ನನ್ನ ವೈಯಕ್ತಿಕ ಪ್ರವಾಸ ಎಂದಿದ್ದ ಪ್ರೀತಿ ಜಿಂಟಾ

ಎಲ್ಲೆಡೆ ಮೋದಿ ಅಲೆ, ನಿರೀಕ್ಷೆಗಳು ತುಂಬಿವೆ

ಎಲ್ಲೆಡೆ ಮೋದಿ ಅಲೆ, ನಿರೀಕ್ಷೆಗಳು ತುಂಬಿವೆ, ನಿರೀಕ್ಷೆಗೆ ತಕ್ಕಂತೆ ಅವರು ನಡೆಯುವ ಭರವಸೆ ಇದೆ

ಬನಾರಸಿ ಸೀರೆ, ಸಾತ್ವಿಕ ಆಹಾರ, ದೇಗುಲ

ಬನಾರಸಿ ಸೀರೆ, ಸಾತ್ವಿಕ ಆಹಾರ, ದೇಗುಲ, ಸೂರ್ಯೋದಯ ಹೀಗೆ ಕಾಶಿ ಕ್ಷೇತ್ರವನ್ನು ಹಾಡಿಹೊಗಳಿದ ಪಂಜಾಬ್ ಬೆಡಗಿ.

English summary
Bollywood actress Preity Zinta's recent remark on Narendra Modi seems to have worked as icing on the cake for the prime ministerial candidate of the Bharatiya Janata Party (BJP) ahead of the crucial election fight in Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X