ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ವೆ ಬಚ್ಚಿಟ್ಟ ವಿವಾದ: ನರೇಂದ್ರ ಮೋದಿಗೆ ಕ್ಲೀನ್ ಚಿಟ್

By Mahesh
|
Google Oneindia Kannada News

ಅಹಮದಾಬಾದ್, ಮೇ.23: ಲೋಕಸಭೆ ಚುನಾವಣೆ ವೇಳೆ ವಡೋದರಾದಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸುತ್ತಿದ್ದಂತೆ ವಿಪಕ್ಷಗಳು ನಾಮಪತ್ರದಲ್ಲಿ ಪತ್ನಿ ಹೆಸರು ನಮೂದಿಸಿಲ್ಲ ಎಂದು ಟೀಕಿಸಿದ್ದು ನಿಮಗೆ ನೆನಪಿರಬಹುದು. ಇದೇ ರೀತಿ ವಿಧಾನಸಭೆ ಚುನಾವಣೆಯಲ್ಲೂ ಮೋದಿ ವೈವಾಹಿಕ ಮಾಹಿತಿ ನೀಡಿರಲಿಲ್ಲ, ಈ ಪ್ರಕರಣದಲ್ಲಿ ಮೋದಿ ಅವರಿಗೆ ಈಗ ಕ್ಲೀನ್ ಚಿಟ್ ಸಿಕ್ಕಿದೆ.

2012ರ ವಿಧಾನಸಭೆ ಚುನಾವಣೆ ವೇಳೆ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ನರೇಂದ್ರ ಮೋದಿ ಅವರು ಚುನಾವಣಾ ಅಫಿಡವಿಟ್‌ನಲ್ಲಿ ವೈವಾಹಿಕ ಮಾಹಿತಿ ನೀಡದೇ ಇದ್ದ ಪ್ರಕರಣದಲ್ಲಿ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ವೈವಾಹಿಕ ಮಾಹಿತಿ ನೀಡದೆ ನರೇಂದ್ರ ಮೋದಿ ಯಾವುದೇ ತಪ್ಪೆಸಗಿಲ್ಲ ಎಂದು ಸ್ಥಳೀಯ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Police give clean chit to Narendra Modi over non-disclosure of marriage

2012ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ನರೇಂದ್ರ ಮೋದಿ ವೈವಾಹಿಕ ಮಾಹಿತಿ ನೀಡುವ ಕಾಲಂ ಅನ್ನು ಭರ್ತಿ ಮಾಡಿರಲಿಲ್ಲ. ಆದರೆ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ತಾನು ವಿವಾಹಿತ ಎಂದು ಮಾಹಿತಿ ನೀಡಿದ್ದರು. ಮೋದಿಯವರು 2012ರ ವಿಧಾನಸಭೆ ಚುನಾವಣೆಯಲ್ಲಿ ವೈವಾಹಿಕ ಮಾಹಿತಿ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ನಿಶಾಂತ್ ವರ್ಮ ದೂರು ನೀಡಿದ್ದರು.

ಗುಜರಾತ್‌ನ ವಡೋದರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ­ಯಾಗಿ ನಾಮಪತ್ರ­ ಸಲ್ಲಿಸುವಾಗ ಘೋಷಿಸಿದ್ದ ಪ್ರಮಾಣ­ಪತ್ರದಲ್ಲಿ ಅವರು ತಾವು 'ವಿವಾಹಿತ' ಎಂದು ನಮೂದಿಸಿದ್ದರು. ಜಶೋದಾ­ಬೆನ್‌ ಚಮನ್‌­ಲಾಲ್‌ ಅವರು ತಮ್ಮ ಪತ್ನಿ ಎಂದೂ ಘೋಷಿಸಿ­ಕೊಂಡಿದ್ದಾರೆ. ಆದರೆ, ನಾಮಪತ್ರದಲ್ಲಿ ಪತ್ನಿ ಹೆಸರು ನಮೂದಿಸಿರಲಿಲ್ಲ.

ಈ ಹಿಂದೆ, ನಾಲ್ಕು ಚುನಾವಣೆಗಳಲ್ಲಿ ಸಲ್ಲಿ­ಸಿದ್ದ ಪ್ರಮಾಣ ಪತ್ರದಲ್ಲಿ ಅವರು ವೈವಾಹಿಕ ಸ್ಥಿತಿ ಅಂಕಣವನ್ನು ಖಾಲಿ ಬಿಟ್ಟಿದ್ದರು. 45 ವರ್ಷಗಳ ಹಿಂದೆ ನಡೆದ ಮದುವೆಯ ಬಗ್ಗೆ ಮೋದಿ ಅವರು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ವಿಪಕ್ಷಗಳು ಮೋದಿ ಅವರ ವಿರುದ್ಧ ಚುನಾವಣಾ ಪ್ರಚಾರ ಆರಂಭಿಸಿದ್ದವು. ಒಟ್ಟಾರೆ, ಅವಿವಾಹಿತರು ಎಂದು ಸಾರ್ವಜನಿಕ­ವಾಗಿ ಬಿಂಬಿಸಿ­ಕೊಂಡಿದ್ದ ಮೋದಿ ಹಾಗೂ ರಾಹುಲ್‌ ಗಾಂಧಿ ಅವರು ದೇಶದ ಉನ್ನತ ಪಟ್ಟಕ್ಕಾಗಿ ಮುಖಾಮುಖಿ­ಯಾಗಿದ್ದ­ರಿಂದ ಈ ಬಾರಿಯ ಲೋಕಸಭಾ ಚುನಾವಣೆ ಕಳೆಕಟ್ಟಿತ್ತು. (ಪಿಟಿಐ)

English summary
Gujarat police submitted a report before a local court saying that the Prime Minister-designate Narendra Modi had not committed any cognisable offence by not disclosing his marital status in his nomination form at the time of 2012 Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X