ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಅಮೆರಿಕ ಪ್ರವಾಸ ವೇಳಾಪಟ್ಟಿ

By Mahesh
|
Google Oneindia Kannada News

ನವದೆಹಲಿ, ಸೆ.23: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ಮೋದಿ ಅವರ ಪ್ರವಾಸದ ವೇಳಾಪಟ್ಟಿ ಬಗ್ಗೆ ಕುತೂಹಲ ಉಂಟಾಗಿದೆ. ಮೋದಿ ಅವರು ಎಲ್ಲೆಲ್ಲಿ ನೆಲೆಸಲಿದ್ದಾರೆ? ಎಲ್ಲಿ ಮೀಟಿಂಗ್ ಮಾಡಲಿದ್ದಾರೆ? ಎನ್ನಾರೈ ಸಮುದಾಯದ ಜೊತೆ ಎಷ್ಟು ಕಾಲ ಕಳೆಯಲಿದ್ದಾರೆ? ಏನೆಲ್ಲಾ ಮಾತುಕತೆ ನಡೆಸಲಿದ್ದಾರೆ? ಎಂಬ ಪ್ರಶ್ನೆಗಳಿವೆ.

ಅಮೆರಿಕ ಪ್ರವಾಸದ ವೇಳೆಯಲ್ಲೂ ನವರಾತ್ರಿ ಪೂಜೆ, ಉಪವಾಸ ವ್ರತವನ್ನು ಮೋದಿ ಅವರು ಮುಂದುವರೆಸಲಿದ್ದಾರೆ. ದಸರಾ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ರಾತ್ರಿ ವೇಳೆ ಉಪವಾಸ ಇರುವುದನ್ನು ಮೋದಿ ಅವರು ಪಾಲಿಸಿಕೊಂಡು ಬಂದಿದ್ದಾರೆ. ಒಬಾಮಾ ಅವರ ಔತಣಕೂಟಕ್ಕೋಸ್ಕರ ತಮ್ಮ ವ್ರತಭಂಗ ಮಾಡಿಕೊಳ್ಳಲು ಮೋದಿ ತಯಾರಿಲ್ಲ ಎಂಬುದಂತೂ ನಿಶ್ಚಯವಾಗಿದೆ. [ವ್ರತಭಂಗ ಮಾಡಲೊಪ್ಪದ ಮೋದಿ]

Modi's visit to USA, an itinerary

ಇನ್ನೂ ಅಮೆರಿಕ ಪ್ರವಾಸದ ವೇಳೆ ಉಭಯ ನಾಯಕರು ಆರ್ಥಿಕ ಪ್ರಗತಿ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸಿರಿಯಾ, ಅಫ್ಘಾನಿಸ್ತಾನ, ಇರಾಕ್‌ನಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಅವರು ಮೋದಿ ಮತ್ತು ಒಬಾಮಾ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಮೋದಿ ಅವರ ಯುಎಸ್ ಪ್ರವಾಸದ ವೇಳಾಪಟ್ಟಿ ಇಂತಿದೆ:

* ಸೆ.26: ನ್ಯೂಯಾರ್ಕಿನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮನ.
* ಸೆ.27: ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಹಿಂದಿಯಲ್ಲಿ ನರೇಂದ್ರ ಮೋದಿ ಭಾಷಣ.
* ಸೆ.28: ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಇಂಡಿಯನ್ -ಅಮೆರಿಕನ್ ಸಮುದಾಯ ಉದ್ದೇಶಿಸಿ ಮೋದಿ ಭಾಷಣ [ಇದು ಟೈಮ್ಸ್ ಚೌಕದಲ್ಲಿ ಲೈವ್]
* ಸೆ.29: ವಾಷಿಂಗ್ಟನ್ ಗೆ ಪ್ರಯಾಣ ಅಮೆರಿಕನ್ ಕಾಂಗ್ರೆಸ್ ಸದಸ್ಯರನ್ನು ಭೇಟಿ.
* ಸೆ.29-30: ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಮೋದಿ ಅವರ ಭೇಟಿ.

ಇದಲ್ಲದೆ ಗ್ಲೋಬಲ್ ಸಿಟಿಜನ್ ಫೆಸ್ಟಿವಲ್ ನಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯೊಂಗ್ ಕಿಮ್ ಅವರು ಮೋದಿ ಜೊತೆ ಇರಲಿದ್ದಾರೆ.

ಅಕ್ಟೋಬರ್ 28ರಂದು ಇಂಡೋ-ಅಮೆರಿಕನ್ ಸಮುದಾಯದ ಜೊತೆ ಚರ್ಚೆ, ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಗಳಿಂದ ಔತಣಕೂಟ ಕೂಡಾ ಆಯೋಜನೆಗೊಂಡಿದೆ.

English summary
Narendra Modi's itinerary in US: Narendra Modi's visit to the US may have a great political significance, but what concerns the world is how the two leaders embrace each other, especially when US had serious disagreements over Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X