ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ
ನವದೆಹಲಿ, ಜೂನ್ 15 : ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರದಿಂದ ಎರಡು ದಿನಗಳ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಪ್ರಧಾನಿ ಆದ ಬಳಿಕ ಮೋದಿ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸವಾಗಿದ್ದು, ಥಿಂಪುವಿನಲ್ಲಿ ಮೋದಿ ಅವರಿಗೆ ಆತ್ಮೀಯ ಸ್ವಾಗತ ಸಿಕ್ಕಿದೆ.
ಭೂತಾನಿನ ಪಾರೋ ವಿಮಾನ ನಿಲ್ದಾಣ ತಲುಪಿದ ಮೋದಿ ಅವರನ್ನು ಭೂತಾನ್ ಪ್ರಧಾನಿ ತ್ಸಾರಿಂಗ್ ತೊಬ್ಗೆ ಅವರು ಬರಮಾಡಿಕೊಂಡಿದ್ದಾರೆ. ಹೈಬ್ರೀಡ್ ವಿದ್ಯುತ್ ಯೋಜನೆ, ಉಭಯ ದೇಶಗಳ ವ್ಯಾಪಾರ-ವಹಿವಾಟು ಕುರಿತಂತೆ ಮಾತುಕತೆ ನಡೆಯಲಿದೆ. ಥಿಂಪುವಿನಲ್ಲಿ ಎಲ್ಲೆಡೆ 'Jonpa Lekso'(ಸ್ವಾಗತ) and 'Kadrinche' (ಧನ್ಯವಾದ) ಎಂದು ಮೋದಿ ಅವರ ಭಾವಚಿತ್ರ ಹಾಕಿ ಸ್ವಾಗತಕೋರಲಾಗಿದೆ.
ಮೋದಿ ಅವರು ತಮ್ಮ ಪ್ರವಾಸದ ಅವಧಿಯಲ್ಲಿ ಭೂತನ್ ರಾಜ ಜಿಗ್ಮೆ ಖೇಸರ್ ನಾಮ್ಗಿಲ್ ವಾಂಗ್ಚುಕ್ ಅವರನ್ನು ಭೇಟಿ ಮಾಡಲಿದ್ದಾರೆ. ಭೂತಾನ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಭಾರತದ ಸಹಾಯದೊಂದಿಗೆ ನಿರ್ಮಿಸಲಾಗುತ್ತಿರುವ ಭೂತಾನ್ ಸುಪ್ರೀಂ ಕೋರ್ಟ್ ಕಟ್ಟಡವನ್ನು ಕೂಡ ಉದ್ಘಾಟನೆ ಮಾಡಲಿದ್ದಾರೆ.
ಮೋದಿ ಮೊದಲ ವಿದೇಶಿ ಪ್ರವಾಸ ರುಪಾಯಿ ಮೌಲ್ಯ ಚೇತರಿಕೆಗೆ ಕಾರಣವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಮಾಲಯ ತಪ್ಪಲಿನ ಪೂರ್ವಾಂತ್ಯ ಭಾಗದಲ್ಲಿರುವ ಭೂತಾನ್ ರಾಷ್ಟ್ರ ಪ್ರವಾಸ ಮುಗಿದ ನಂತರ ಪ್ರಧಾನಿ ಮೋದಿ ಅವರು ಜಪಾನ್ ಹಾಗೂ ಆಗಸ್ಟ್ ನಲ್ಲಿ ನೇಪಾಳಕ್ಕೆ ತೆರಳಲಿದ್ದಾರೆ.
ಹಲವು ಒಪ್ಪಂದಗಳಿಗೆ ಸಹಿ ಸಾಧ್ಯತೆ
*
ಎರಡೂ
ರಾಷ್ಟ್ರಗಳು
ಯುವಕರನ್ನು
ಮತ್ತಷ್ಟು
ಸದೃಡಗೊಳಿಸಬೇಕಾದ
ಅವಶ್ಯಕತೆ
ಇದ್ದು
ಈ
ನಿಟ್ಟಿನಲ್ಲಿ
ಭೂತಾನ್ನೊಂದಿಗೆ
ಶೈಕ್ಷಣಿಕ
ಒಪ್ಪಂದಗಳನ್ನು
ಮಾಡಿಕೊಳ್ಳುವ
ಅಭಿಲಾಷೆಯಿದೆ
ಎಂದು
ಮೋದಿ
ಹೇಳಿದ್ದಾರೆ.
*
ಮೋದಿ
ಉಷ್ಣ
ವಿದ್ಯುತ್
ಯೋಜನೆಗೆ
ಭೂಮಿ
ಪೂಜೆ
ಕೂಡ
ನೇರವೇರಿಸಲಿದ್ದಾರೆ.
ಹಿಮಾಲಯದ
ತಪ್ಪಲಿನಲ್ಲಿ
ಇರುವ
ಈ
ಪುಟ್ಟ
ರಾಷ್ಟ್ರದ
600
ಮೆಗಾ
ವ್ಯಾಟ್
ಸಾಮರ್ಥ್ಯದ
ಕೊಲೊಂಗ್ಚು
ವಿದ್ಯುತ್
ಯೋಜನೆಯ
ಕಾರ್ಯಾರಂಭಕ್ಕೆ
ಮೋದಿ
ಚಾಲನೆ
ನೀಡಲಿದ್ದಾರೆ.
*
ಭೂತಾನ್
ಭೇಟಿಯ
ವೇಳೆ
ಮೋದಿ
ಅವರೊಂದಿಗೆ
ವಿದೇಶಾಂಗ
ಸಚಿವೆ
ಸುಷ್ಮಾ
ಸ್ವರಾಜ್,
ರಾಷ್ಟ್ರೀಯ
ಭದ್ರತಾ
ಸಲಹೆಗಾರ
ಅಜಿತ್
ದೋವಲ್
ಹಾಗು
ವಿದೇಶಾಂಗ
ಕಾರ್ಯದರ್ಶಿ
ಸುಜಾತಾ
ಸಿಂಗ್
ಇರುತ್ತದೆ.
ಭೇಟಿ ಬಗ್ಗೆ ಮಾತನಾಡಿರುವ ಮೋದಿ
ಭೂತಾನ್ನೊಂದಿಗೆ ಉತ್ತಮ ಸಂಬಂಧ ಹೊಂದುವುದು ಎನ್ಡಿಎ ಸರಕಾರದ ಆದ್ಯತೆಗಳಲ್ಲಿ ಒಂದು. ಉಭಯ ರಾಷ್ಟ್ರಗಳು ಸಮಾನ ಭೌಗೋಳಿಕ, ರಾಜಕಿಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಮೋದಿ ಅವರಿಗೆ ಆತ್ಮೀಯ ಸ್ವಾಗತ
ಥಿಂಪುವಿನಲ್ಲಿ ಎಲ್ಲೆಡೆ 'Jonpa Lekso'(ಸ್ವಾಗತ) and 'Kadrinche' (ಧನ್ಯವಾದ) ಎಂದು ಮೋದಿ ಅವರ ಭಾವಚಿತ್ರ ಹಾಕಿ ಸ್ವಾಗತ ಕೋರಲಾಗಿದೆ.
ಪಾರೋ ವಿಮಾನ ನಿಲ್ದಾಣದಿಂದ ಬಂದ ವಿಡಿಯೋ
ಭೂತಾನಿನಲ್ಲಿ ಪ್ರಧಾನಿ ಮೋದಿ: ಥಿಂಪು ಪಾರೋ ವಿಮಾನ ನಿಲ್ದಾಣದಿಂದ ಬಂದ ವಿಡಿಯೋ
PM
Narendra
Modi
arrives
in
Bhutan,
receives
Guard
of
Honour
|
India
Today
http://t.co/Cq18N7qHd2
pic.twitter.com/6JPQ2itgvV
—
India
Today
(@IndiaToday)
June
15,
2014
rn
ಭೂತಾನ್ ರಕ್ಷಣಾ ಪಡೆಯಿಂದ ಗೌರವ
ಭೂತಾನ್ ರಕ್ಷಣಾ ಪಡೆಯಿಂದ ಗೌರವ ವಂದನೆ ಪಡೆದ ಭಾರತದ ಪ್ರಧಾನಿ ನರೇಂದ್ರ ಮೋದಿ
|
ಭೂತಾನ್ ಪ್ರವಾಸದ ಬಗ್ಗೆ ಮೋದಿ ಟ್ವೀಟ್
ಭೂತಾನ್ ಪ್ರವಾಸದ ಬಗ್ಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು ಹೀಗೆ
ಪ್ರಧಾನಿ ಮೋದಿ ಭೇಟಿ ಲಾಭಗಳೇನು?
*
ಭಾರತದ
ಆಟೋಮೊಬೈಲ್
ಆಮದಿಗೆ
ನಿರ್ಬಂಧ
ಹೇರಿದ್ದ
ಭೂತಾನ್,
ಜುಲೈನಿಂದ
ನಿರ್ಬಂಧ
ಸಡಿಲಿಸುವುದಾಗಿ
ಪ್ರಕಟಿಸಿದೆ.
*
ngultrum
ಭೂತಾನಿನ
ಕರೆನ್ಸಿಯಾಗಿದ್ದರೂ
ಭಾರತೀಯ
ರುಪಾಯಿ
ಮೇಲೆ
ಟ್ಯಾಕ್ಸಿ
ಚಾಲಕರಿಂದ
ಹಿಡಿದು
ವರ್ತಕರು
ಬಹುವಾಗಿ
ಅವಲಂಬಿತರಾಗಿದ್ದಾರೆ.
ಮೋದಿ
ಭೇಟಿ
ನಂತರ
ಹಣಕಾಸು
ವಿನಿಮಯ
ಸಂಬಂಧ
ವೃದ್ಧಿ
ನಿರೀಕ್ಷೆಯಿದೆ.
*
100
ರುಪಾಯಿಗೆ
107
ngultrum
ನೀಡಬೇಕಾಗಿರುವುದರಿಂದ
ಭೂತಾನಿನಲ್ಲೂ
ಭಾರತೀಯ
ಕರೆನ್ಸಿ
ಪ್ರಭಾವ
ಬೀರಿದೆ.
*
ಭಾರತದಿಂದ
ಭೂತಾನಿಗೆ
ಸುಮಾರು
45
ಬಿಲಿಯನ್
ರುಪಾಯಿಯಷ್ಟು
ನೆರವು
ಸಿಗುತ್ತಿದೆ.
ಸುಮಾರು
1,400MW
ವಿದ್ಯುತ್
ಭಾರತಕ್ಕೆ
ರಫ್ತು
ಮಾಡುತ್ತಿರುವ
ಭೂತನ್
ವಾರ್ಷಿಕವಾಗಿ
8
ಬಿಲಿಯನ್
ರುಪಾಯಿ
ಮಾತ್ರ
ಗಳಿಸುತ್ತಿದೆ.
ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ
ಪ್ರಧಾನಿ ಮೋದಿ ಭೇಟಿ ಲಾಭಗಳೇನು?
ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ
ಪ್ರಧಾನಿ ಮೋದಿ ಭೇಟಿ ಲಾಭಗಳೇನು?