ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಧಾರ್ ಸೇರಿ ನಾಲ್ಕು ಸ್ಥಾಯಿ ಸಮಿತಿ ಬರ್ಕಾಸ್ತು'

By Mahesh
|
Google Oneindia Kannada News

ನವದೆಹಲಿ, ಜೂ.11: ಯುಪಿಎ ಸರ್ಕಾರದ ಮಹತ್ವದ ಯೋಜನೆಯಾದ ವಿಶಿಷ್ಟ ಗುರುತಿನ ಚೀಟಿ(ಯುಐಡಿಎಐ) ಅಧಾರ್ ಪ್ರಾಧಿಕಾರ ಸೇರಿದಂತೆ ನಾಲ್ಕು ಸ್ಥಾಯಿ ಸಮಿತಿಗಳನ್ನು ರದ್ದುಗೊಳಿಸಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆದೇಶಿಸಿದೆ.

ಕೇಂದ್ರ ಸರಕಾರದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳನ್ನು ಕಡಿತಗೊಳಿಸುವ ಪ್ರಯತ್ನಗಳ ಭಾಗವಾಗಿ ನಾಲ್ಕು ಸಂಪುಟ ಸಮಿತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರದ್ದುಗೊಳಿಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಪ್ರಕಟಿಸಿದೆ.

ಯುಪಿಎ ಸರಕಾರದ ಮಹತ್ವದ ವಿಶಿಷ್ಟ ಗುರುತುಪತ್ರ ಪ್ರಾಧಿಕಾರವೂ (ಯುಐಡಿಎಐ), ಬೆಲೆ ಕುರಿತ ಸಂಪುಟ ಸಮಿತಿ, ನೈಸರ್ಗಿಕ ವಿಕೋಪಗಳ ನಿರ್ವಹಣಾ ಸಂಪುಟ ಸಮಿತಿ, ವಿಶ್ವ ವ್ಯಾಪಾರ ಸಂಘಟನೆ ವಿಷಯದ ಮೇಲಿನ ಸಂಪುಟ ಸಮಿತಿಗಳು ಈಗ ರದ್ದುಗೊಂಡಿವೆ. ಈ ಮೂಲಕ 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಎಂಬ ತಮ್ಮ ಘೋಷಣೆಗೆ ನರೇಂದ್ರ ಮೋದಿ ಅವರು ಮತ್ತಷ್ಟು ಬಲ ನೀಡಿದ್ದಾರೆ.[ಆಧಾರ್ ಸಮಿತಿ ಸ್ಥಿತಿ ಗತಿ]

PM Modi dissolves 4 Cabinet standing committees

ವಿಶಿಷ್ಟ ಗುರುತುಪತ್ರ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಉಳಿದ ವಿಚಾರಗಳನ್ನು ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ ಗಮನಕ್ಕೆ ತರಲಾಗುವುದು ಎಂದು ಪ್ರಕಟಿಸಲಾಗಿದೆ.

ಯುಪಿಎ ಸರಕಾರದ ಕ್ರಮಗಳ ಕುರಿತಂತೆ ಮೋದಿ ಸರಕಾರ ಕೈಗೊಂಡಿರುವ ಎರಡನೇ ಮಹತ್ವದ ನಿರ್ಧಾರ ಇದಾಗಿದೆ. ಇದಕ್ಕೆ ಮೊದಲು ಎಲ್ಲ ಸಚಿವರ ಉನ್ನತ ಮಟ್ಟದ ಸಮತಿಗಳು ಮತ್ತು ಸಚಿವರ ಗುಂಪುಗಳನ್ನು ಮೋದಿ ಸರಕಾರ ರದ್ದು ಮಾಡಿತ್ತು.

ಇದರ ಜತೆಗೆ ಪಾರದರ್ಶಕತೆಯನ್ನು ತಮ್ಮ ಸಂಪುಟದಿಂದಲೇ ಆರಂಭಿಸುವ ಕ್ರಮವಾಗಿ ಜುಲೈ ಅಂತ್ಯದ ಒಳಗಾಗಿ ಆಸ್ತಿ ವಿವರ ಸಲ್ಲಿಸುವಂತೆ ಸಚಿವರಿಗೆ ಸೂಚಿಸಿದ್ದಾರೆ.ಗೃಹ ಸಚಿವಾಲಯ ಸಚಿವರ ಮಾದರಿ ಸಂಹಿತೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅದರಂತೆ ಕೇಂದ್ರ ಸಚಿವರು ತಮ್ಮ ಆಸ್ತಿ, ಸಾಲ, ಪಾಲುದಾರಿಕೆ ಅಥವಾ ವ್ಯಾಪಾರ ವ್ಯವಹಾರಗಳ ವಿವರವನ್ನು ಪ್ರಧಾನಿಯವರಿಗೆ ಸಲ್ಲಿಸಬೇಕು.

ಎಲ್ಲ ಸ್ಥಿರ, ಚರ ಆಸ್ತಿ; ಷೇರು ಮತ್ತು ಸಾಲಪತ್ರ; ತಾವು ಹಾಗೂ ಕುಟುಂಬ ಸದಸ್ಯರು ಹೊಂದಿರುವ ಆಭರಣ; ಸಾಲದ ವಿವರಗಳನ್ನು ಸಲ್ಲಿಸಬೇಕು. ಅಧಿಕಾರದಲ್ಲಿರುವ ಅವಧಿಯಲ್ಲಿ ಪ್ರತಿವರ್ಷ ಆಗಸ್ಟ್ 31ರ ಒಳಗೆ ಹಿಂದಿನ ಹಣಕಾಸು ವರ್ಷದ ಆಸ್ತಿ ವಿವರ ಸಲ್ಲಿಸುವುದೂ ಕಡ್ಡಾಯಗೊಳಿಸಲಾಗಿದೆ.

English summary
Prime Minister Narendra Modi, who has consistently stressed the mantra of 'minimum government, maximum governance', disbanded four standing committees of the Cabinet on Tuesday. This came ten days after he scrapped all Group of Ministers (GoMs) and Empowered Group of Ministers (EGoMs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X